December 22, 2024

ಬಹುತೇಕ ಔಷಧ ವ್ಯಾಪಾರಿಗಳು,ತಮ್ಮ ವೃತ್ತಿಪರ ಸಂಘ- ಸಂಸ್ಥೆಗಳನ್ನು ಬಿಟ್ಟು ಅಂತರಾಷ್ಟ್ರೀಯ ಮಟ್ಟದ ಸಂಘಗಳ‌ ಸದಸ್ಯರಾಗಲು ಹಾತೊರೆಯುತ್ತಾರೆ.ತಮ್ಮ ಹೆಸರಿನ ಮುಂದೆ ಲಾಯಿನ್,ಲಿಯೋ, ರೋಟರಿಯನ್ ಎಂದು ಹೆಮ್ಮೆಯಿಂದ ಬರೆದುಕೊಳ್ಳುತ್ತಾರೆ.

ತಮ್ಮ ಶರ್ಟ್,ಬ್ಲೇಸರ್ ಗಳಿಗೆ ಆಯಾ ಸಂಸ್ಥೆಗಳ ಲೋಗೋ ಹಾಕಿಕೊಂಡು ಹೆಮ್ಮೆಯಿಂದ ಬೀಗುತ್ತಾರೆ. ಮನೆ/ಆಫ಼ೀಸ್ ಓಪನಿಂಗ್,ಮದುವೆ/ಮುಂಜಿ ಕಾರ್ಯಕ್ರಮದ ಆಹ್ವಾನ ಪತ್ರಗಳಲ್ಲಿಯೂ ತಾವು ಹೊಂದಿದ ಪದಾಧಿಕಾರವನ್ನು ಮುದ್ರಿಸಿಕೊಂಡಿರುತ್ತಾರೆ.

ಹೀಗೆ ಇಂತಹ ಹಲವಾರು ಕ್ಲಬ್ ಗಳ ಸದಸ್ಯರಾಗಲು ಹಲವರು ಹಾತೊರಿಯುತ್ತಾರೆ.ಅದಕ್ಕಾಗಿ ಔಷಧ ವ್ಯಾಪಾರಿಗಳ ಸಂಘ,ಸಂಘಟನೆಗಳನ್ನು ಕ್ಲಬ್ ಆಗಿ ಪರಿವರ್ತಿಸಿದರೆ, ಬದಲಾವಣೆ ಕಾಣ ಬಹುದೇನೋ ?

ಔಷಧ ವ್ಯಾಪಾರಿಗಳ ಸಂಘದಲ್ಲೂ ಮಹಿಳಾ ಘಟಕ ಆರಂಭಿಸುವುದು,ಈಗಿನ ಅವಶ್ಯಕತೆಗಳಲ್ಲೊಂದು. ವ್ಯಕ್ತಿ-ವ್ಯಕ್ತಿಗಳಲ್ಲಿ ಭಿನ್ನಾಭಿಪ್ರಾಯ ಸಹಜ.ಹಾಗೆಯೇ ಸಂಘಟನೆಗಳಲ್ಲೂ ಕೂಡ ಇರುವುದು ತೀರಾ ಸಹಜ. ಆದರೆ ಅದು ಮಾನ ಹೋಗುವಷ್ಟು ಹರಾಜಾಗಬಾರದು.

ಇಲ್ಲಿ ಒಂದು ಸಂಘಟನೆಯ ಬಗ್ಗೆ ಬರೆಯಲೇ ಬೇಕಾಗುತ್ತದೆ.ಅದೇ ಭಾರತೀಯ ವೈದ್ಯಕೀಯ  ಸಂಘ.ಅದಲ್ಲಿಯೂ ವಿವಿಧ ರೀತಿಯ ಮನಸ್ಸುಳ್ಳ ವೈಧ್ಯ ಸದಸ್ಯರಿದ್ದಾರೆ.ಅವರ ಮುನಿಸುಗಳು ಏನೇ ಇದ್ದರೂ ಅದು ನಾಲ್ಕು ಗೋಡೆ ಮಧ್ಯೆಯೇ ಉಳಿದಿರುತ್ತವೆ. ಸದಸ್ಯತ್ವ ಪಡೆಯುವಿಕೆ,ಬೆರೆಯುವಿಕೆ ಎಲ್ಲವೂ ಸರಿಯಾಗಿರುತ್ತವೆ.ನಮ್ಮಲ್ಲಿ ಹಾಗಿಲ್ಲ ಎಲ್ಲರೂ ಜಾಣರೇ ! ವಾದ-ವಿವಾದ ಮಾಡುವವರೇ !

ನಮ್ಮವರು ಸ್ವತಃ ಫ಼ಾರ್ಮಸಿಸ್ಟ ಮತ್ತು ಕೆಮಿಸ್ಟ ಆಗಿದ್ದರೂ ಎಲ್ಲಿಯೂ ಬರೆದುಕೊಳ್ಳುವುದುದಿಲ್ಲ. ತೋರಿಸಿಕೊಳ್ಳುವುದಿಲ್ಲ.ಹೀಗೆ ಹಿಂಜರಿಕೆಯ ಜೀವನ ನಡೆಸಿದರೆ, ಧೈರ್ಯದ ಬದುಕು ಒಣ ಜಂಬದ್ದಾಗುತ್ತದೆ.

ಅಷ್ಟು ಗಳಿಸಿದೆ,ಇಷ್ಟು ಪ್ರಾಪರ್ಟಿ ಮಾಡಿದೆ,ಮಕ್ಕಳಿಗೆ ಆ ಕೋರ್ಸ್ ಮಾಡಿಸಿದೆ.ಇದನ್ನು ಓದಿಸಿದೆ. ವಿದೇಶದಲ್ಲಿದ್ದಾರೆ.ಅಷ್ಟು ಸಂಭಳ,ಅಲ್ಲಿಯೇ ಸಿಟಿಜನ್ ಶಿಪ್ ಸಿಕ್ಕಿದೆ ಇದೆ.ಇದೇ ಮಾತುಗಳು ಹೆಚ್ಚು ಕೇಳಿ ಬರುತ್ತವೆ.ನಮ್ಮ ದೇಶದಲ್ಲಿಯೇ ಇದ್ದು ವ್ಯಾಪಾರ-ವ್ಯವಹಾರದ ಜೊತೆಗೆ ಸಾಮಾಜಿಕವಾಗಿ ಬೆರೆಯಲು ಯಾರೂ ತಯಾರಿಲ್ಲ.

ನನ್ನ ಮಕ್ಕಳು ವೈಧ್ಯರಾಗಿದ್ದಾರೆ ಎಂದು ಹೇಳಿಕೊಳ್ಳುವಷ್ಟು ಸರಳವಾಗಿ ನಮ್ಮ ಮಕ್ಕಳು ಫ಼ಾರ್ಮಸಿಸ್ಟ ಎಂದು ಹೇಳಿಕೊಳ್ಳಲು ಮುಜುಗರ ಪಡುವಂತಾಗಿದೆ.ಫ಼ಾರ್ಮಸಿಸ್ಟ ವೃತ್ತಿಯ ಬಗ್ಗೆ ಇರುವ ಕೀಳರಿಮೆಯೇ ಇದಕ್ಕೆ ಕಾರಣ.

ಫ಼ಾರ್ಮಸಿ ಕೌನ್ಸಿಲ್ ಕೂಡ ಎಲ್ಲಾ ಫ಼ಾರ್ಮಸಿಸ್ಟಗಳಿಗೂ ಉಚಿತವಾಗಿ ಏಪ್ರಾನ್ ನೀಡಿದೆ.ನೇಮ್ ಪ್ಲೇಟ್, ಲೋಗೋ ಇರುವ ಬಟನ್ ನೀಡಿದೆ.ಆದರೆ ತೊಡಲು ಯಾರೂ ತಯಾರಿದ್ದಂತೆ ಕಂಡು ಬರುತ್ತಿಲ್ಲ.

ಫ಼ಾರ್ಮಸಿ ಕೌನ್ಸಿಲ್ ಗೆ ಬದಲಾಗಿ ಫ಼ಾರ್ಮಸಿ ಕಮಿಷನ್ ಅಸ್ತಿತ್ವಕ್ಕೆ ಬರಲಿದೆ.ಬದಲಾವಣೆ ಬಂದೇ ಬರುತ್ತದೆ ಎಂಬ ವಿಶ್ವಾಸ ಇದೆ.ಹೋರಾಟಕ್ಕೆ ಸಣ್ಣ ಜಯ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಏನೇನೂ ಮಾಡಬೇಕೆಂದು ಫ಼ಾರ್ಮಸಿ ಕಮಿಷನ್ ಡ್ರಾಫ಼್ಟ್ ಗೆ ಸಲಹೆ ನೀಡಲಾಗಿದೆ.

ಈ ಮುಂದೆಯಾದರೂ ಔಷಧ ವ್ಯಾಪಾರ ಬದಲಾಗಲಿ ! ವ್ಯಾಪಾರಿಗಳಲ್ಲಿ ಬದಲಾವಣೆ ಬರಲಿ !

-ಅಶೋಕಸ್ವಾಮಿ ಹೇರೂರ.

About The Author

Leave a Reply