ರಾಯಚೂರು ಜಿಲ್ಲೆಯಲ್ಲಿ ಔಷಧ ನಿಯಂತ್ರಣ ಇಲಾಖೆಯ ಪರವಾನಿಗೆ ಇಲ್ಲದೇ ಅಲೋಪತಿ ಔಷಧಗಳ ದಾಸ್ತಾನು ಇಟ್ಟುಕೊಂಡು,ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಅಲೋಪತಿ ಔಷಧಗಳ ಮಾರಾಟದಲ್ಲಿ ನಿರತರಾಗಿರುವ ಸಾಕಷ್ಟು ನಕಲಿ ವೈಧ್ಯರಿದ್ದಾರೆ.
ಈ ಹಿಂದೆ ಸಾಕಷ್ಟು ದೂರುಗಳು ಸಲ್ಲಿಕೆಯಾದರೂ ಔಷಧ ನಿಯಂತ್ರಣ ಇಲಾಖೆಯ ಸೊಂಬೇರಿ ಮತ್ತು ಲಂಚಗುಳಿ ಅಧಿಕಾರಿಗಳು ಕಾನೂನ ಪ್ರಕಾರ ಕ್ರಮ ಕೈಗೊಳ್ಳದೆ,”ಅಡ್ಜಸ್ಟಮೆ೦ಟ್” ವ್ಯವಹಾರದಲ್ಲಿ ನಿರತರಾಗಿದ್ದರು.
ಈಗ ಬೇರೆ ಬೇರೆ ಅಧಿಕಾರಿಗಳು ಈ ವೃತ್ತದ ಪ್ರಭಾರ ವಹಿಸಿಕೊಂಡಿದ್ದು ,ಅವರು ಕ್ರಮ ಕೈಗೊಳ್ಳಬಹುದು ಎಂಬ ವಿಶ್ವಾಸ ಎಲ್ಲಾ ಔಷಧ ವ್ಯಾಪಾರಿಗಳಲ್ಲಿದೆ.
ಡಾ.ರಾಹುಲ್ ಮಂಡಲ್ ಎಂದು ಕರೆಯಲಾಗುವ
7ನೇ ತರಗತಿಯಲ್ಲಿ ಅನುತ್ತೀರ್ಣನಾದ ವ್ಯಕ್ತಿಯೊಬ್ಬ
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಹಿರೇ ದಿನ್ನಿ
ಗ್ರಾಮದಲ್ಲಿ ನಕಲಿ ವೈದ್ಯಕೀಯ ವೃತ್ತಿಯಲ್ಲಿ ನಿರತನಾಗಿರುವ ಬಗ್ಗೆ ‘ಪತ್ರಿಕೆ’ಗೆ ಹಲವು ದೂರುಗಳು ಬಂದಿವೆ.
ಮೂಲತಃ ಕೋಲ್ಕತ್ತಾದಿಂದ ಬಂದಿರುವ ಸರಿಯಾಗಿ ಕನ್ನಡ ಮಾತನಾಡಲು ಬರದ ಈ ವ್ಯಕ್ತಿ, ತನ್ನ ಆಸ್ಪತ್ರೆ ಮತ್ತು ಮನೆಯಲ್ಲಿ ಸುಮಾರು ರೂ.50,000 ಗಳಿಂದ ರೂ 60,000 ಮೌಲ್ಯದ ಅಲೋಪತಿ ಔಷಧಗಳ ಸಂಗ್ರಹ ಮಾಡಿಕೊಂಡು ಅನಧಿಕೃತವಾಗಿ ಔಷಧ ವ್ಯಾಪಾರದಲ್ಲಿ ನಿರತನಾಗಿದ್ದಾನೆ.
ಈ ಬಗ್ಗೆ ರಾಯಚೂರು ವೃತ್ತದ ಪ್ರಭಾರಿ ಸಹಾಯಕ ಔಷಧ ನಿಯಂತ್ರಕರಾದ ರೇವಣಸಿದ್ದಪ್ಪ ಮತ್ತು ಕಲಾಲ ಮಂಜುನಾಥ ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವನ್ನು ಹಲವರು ಇಟ್ಟುಕೊಂಡಿದ್ದು,ಈ ವಿಶ್ವಾಸ ಹುಸಿಯಾಗದಿರಲಿ ಎಂದು ‘ಪತ್ರಿಕೆ’ ಬಯಸುತ್ತದೆ.