December 23, 2024
IMG-20231108-WA0051

ರಾಯಚೂರು:ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ನಡೆಯುವ ಅಧ್ವಾನಗಳಿಗೆ ಅದ್ಯಾವಾಗ ಕೊನೆಯಾಗುತ್ತೋ ಗೊತ್ತಾಗ್ತಾ ಇಲ್ಲ.ಅಲ್ಲಿನ ಅಧಿಕಾರಿಗಳ್ಯಾಕೋ ಅಡ್ನಾಡಿಗಳಾಗುತ್ತಿದ್ದಾರೆ.ದೂರು ಬಂದರೂ,ಸುದ್ದಿಯಾದರೂ ಅಧಿಕಾರಿಗಳು ಕಮಕ್ ಕಿಮಕ್ ಎನ್ನುವುದಿಲ್ಲ.

ನಕಲಿ ವೈಧ್ಯನದ್ದೇ ಔಷಧ ಅಂಗಡಿ,ಆಸ್ಪತ್ರೆಯವನದ್ದೇ ವ್ಯಾಪಾರ.ಫ಼ಾರ್ಮಸಿಸ್ಟ ಯಾರೋ, ಮಾಲೀಕ ಯಾರೋ ಆ ದೇವರಿಗೂ ಗೊತ್ತಾಗುವುದಿಲ್ಲ.ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಬರೀ ಪುಸ್ತಕದ ಕಾನೂನನ್ನೇ ಹೇಳುತ್ತಾರೆ.ಆದರೆ ಲೈಸೆನ್ಸ್ ನ್ನು ಎಲ್ಲೆಂದರಲ್ಲಿ ಕೊಡುತ್ತಾರೆ, ನಕಲಿ ವೈಧ್ಯನ ಪಕ್ಕ /ಆಯುಷ್ ವೈಧ್ಯನ ಪಕ್ಕ.ಹೇಳುವುದು ಮಾತ್ರ ಅಲೋಪತಿ ಔಷಧಗಳನ್ನು ತಜ್ಞ ವೈಧ್ಯರ ಪ್ರಿಸ್ಕ್ರಿಪ್ಷನ್ ಗೆ ಮಾತ್ರ ಕೊಡಬೇಕು ಎನ್ನುವುದು.ಈ ಮಂತ್ರವನ್ನು ಜಪಿಸದೇ ಅವರು ಇರುವುದಿಲ್ಲ. ಹೇಳುವುದು ಶಾಸ್ತ್ರ ತಿನ್ನುವುದು ಬದ್ನೆಕಾಯಿ ಎಂಬ ಮಾತು ಈ ಅಧಿಕಾರಿಗಳಿಗೆ ಅಕ್ಷರಶಃ ಅನ್ವಯಿಸುತ್ತದೆ.

ಈ ವರದಿಯಲ್ಲಿನ ಚಿತ್ರಗಳನ್ನೊಮ್ಮೆ ನೋಡಿ ಬಿಡಿ,

ಸಿಂಧನೂರು ತಾಲೂಕಿನ ಗ್ರಾಮವೊಂದರ ಔಷಧದ ಅಂಗಡಿ ಇದು.ಅಧಿಕಾರಿಗಳು ದನ ಕಾಯುತ್ತಿದ್ದಾರೆ ಎಂದು ಗೊತ್ತಾಗಲು, ಮಾಸಿರುವ ಅಂಗಡಿಯ ಹೆಸರು ನೋಡಿದರೆ ಸಾಕು.

ಹೊರಗೆ ಮದ್ದು ಮಾರುವವನು, ಅಂಗಡಿಯವ ಒಳಗೆ  ಚುಚ್ಚು ಮದ್ದು ಮಾಡುತ್ತಾನೆ. ಮದ್ದು-ಚುಚ್ಚು ಮದ್ದು ಒಂದೇ ಕಡೆ ಸೇರಿ ಬಿಟ್ಟಿವೆ.ಹಣಕ್ಕಾಗಿ ಮಾನ-ಮರ್ಯಾದೆ ಇಲ್ಲದೇ ವರ್ತಿಸುವ ಈ ಅಧಿಕಾರಿಗಳು ಇದ್ದರೆಷ್ಟು ? ಹೋದರೆಷ್ಟು ?

ಮರ್ಯಾದೆ ಬಿಟ್ಟು ವರ್ತಿಸುವ ಅಧಿಕಾರಿಗಳು ಬರೀ ಪುರುಷರಾಗಿರುತ್ತಾರೆ ಎಂದು ಕೊಂಡರೆ,ಅದು ತಪ್ಪು. ಮಹಿಳೆಯರೂ ಇರುತ್ತಾರೆ ಎಂದು ರಾಯಚೂರು ವೃತ್ತವನ್ನು ನೋಡಿ, ಉಳಿದ ಮಹಿಳಾ ಅಧಿಕಾರಿಗಳೂ ಕಲಿಯಬೇಕು.

ಕುಂತಲ್ಲಿಯೇ ಅಂಗಡಿಗಿಷ್ಟು ಎಂದು ಮಾಮೂಲು ಕಲೆಕ್ಷನ್ ಮಾಡುವ ಅಧಿಕಾರಿ,ಅಂಗಡಿಯ ನೇಮ್ ಬೋರ್ಡನ್ನೇ ಗಮನಿಸದಿದ್ದ ಮೇಲೆ ಇನ್ನು ಫ಼ಾರ್ಮಸಿಸ್ಟ ಯಾರು ? ಮಾಲೀಕ ಯಾರು ? ವೈಧ್ಯನ್ಯಾರು ? ಎಂದು ಹೇಗೆ ತಿಳಿದಾರು ? ನಕಲಿ ವೈಧ್ಯನೇ ಇಲ್ಲಿ ಅಂಗಡಿಯ ಮಾಲೀಕ ! ಫ಼ಾರ್ಮಸಿಸ್ಟ ಒಬ್ಬ ಮಹಿಳೆ ! ಅಂಗಡಿಯ ಕತೆ ಮುಗಿದೇ ಹೋಯ್ತು.ಫ಼ಾರ್ಮಸಿಸ್ಟ ಗೈರು ಹಾಜರಿಯಲ್ಲಿಯೇ ಎಲ್ಲಾ ಅದ್ವಾನಗಳೂ ನಡೆಯುತ್ತಿವೆ. ಆದರೆ ಹಣದ ಎಣಿಕೆಯ ಮುಂದೆ ಎಲ್ಲವೂ ಗೌಣ !

ಇದು ಕೇವಲ ಒಂದು ವೃತ್ತದ ಕತೆಯಲ್ಲ ,ಇಡೀ ರಾಜ್ಯದ ಕತೆ.ಬರೀ ವಿಕಾಸ ಸೌಧ ಸುತ್ತುವ,ವರ್ಗಾ ವರ್ಗಿಯಲ್ಲಿಯೇ ಕಾಲ ಕಳೆಯುವ ಅಧಿಕಾರಿಗಳೇ ಹೆಚ್ಚು. ಮತಿಯಿಲ್ಲದ ಇಲಾಖೆಯಲ್ಲಿ ಹಿತ ಕಾಪಾಡುವ ಅಧಿಕಾರಿಗಳನ್ನು ಹುಡುಕಬೇಕು.ಸಿಗುತ್ತಾರೋ, ಇಲ್ಲವೋ ಗ್ಯಾರಂಟಿ ಇಲ್ಲ.

About The Author

Leave a Reply