

9 ವರ್ಷಕ್ಕೂ ಮೇಲ್ಪಟ್ಟು ಒಂದೇ ಕಡೆ ಗೂಟ ಹೊಡೆದು ಕೊಂಡು ಕುಳಿತ ಅಧಿಕಾರಿಗಳು !
ಕರ್ನಾಟಕ ರಾಜ್ಯದ ಔಷಧ ನಿಯಂತ್ರಣ ಇಲಾಖೆ, ಹಲವು ಆಕ್ರಮ-ಸಕ್ರಮಗಳ ತವರು.ಇಲ್ಲಿ ಪಾಳೆಯಗಾರದ್ದೇ ಹಾವಳಿ.ಜಾತಿ,ರಾಜಕೀಯ,ಹಣ ಎಲ್ಲವೂ ಇಲ್ಲಿ ಸಂಕ್ರಮಣಗೊಂಡಿವೆ.ಅಂತಿಂತಹ ಔಷಧ ನಿಯಂತ್ರಕರು ಇಲ್ಲಿ ಹಾಳೆಗಳ ಫ಼ೈಲ್ ಗೆ ಸೀಮೀತವಾಗಿ ಬಿಡಬೇಕಾಗುತ್ತದೆ.
ಡಿ.ಸಿ.ಗಿಂತಲೂ ಡಿ.ಡಿ.ಸಿ.,ಡಿ.ಡಿ.ಸಿ.ಗಿಂತಲೂ ಎ.ಡಿ.ಸಿ., ಎ.ಡಿ.ಸಿ.ಗಿಂತಲೂ ಡಿ.ಐ.,ಗಳು ಈ ಇಲಾಖೆಯಲ್ಲಿ ಪ್ರಾಭಲ್ಯ.ಹೀಗಾಗಿ ಯಾರ ಜೇಬಲ್ಲಿ ಯಾವ ಹಾವು ಇದೆ ಎಂಬುದು ನಿಗೂಢ.
ಈ ಇಲಾಖೆಯಲ್ಲಿ ನಿವೃತ್ತ ನಾಲಾಯಕ ಅಧಿಕಾರಿಗಳು ಸಹ ವರ್ಗಾ ವರ್ಗಿಯಲ್ಲಿ ಮತ್ತು ಭಡ್ತಿ ಕೊಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ ಎಂಬುದಿನ್ನೂ ಜೀವಂತ ವಿಷಯ.
ಇಲಾಖೆಯ ಡಿ.ಸಿ.ಗಳಲ್ಲಿ ಒಂದಿಬ್ಬರನ್ನು ಬಿಟ್ಟರೆ, ಎಲ್ಲರೂ ಆಯಾ ರಾಮ್, ಗಯಾ ರಾಮ್ ಗಳೇ !
ಪ್ರಧಾನ ಕಾರ್ಯದರ್ಶಿಗಳನ್ನು ಕೈಯಲ್ಲಿಟ್ಟು ಕೊಂಡವರದ್ದು ಮಾತ್ರ ಇಲ್ಲಿ ಆಟ.ಉಳಿದವರಿಗೆ ಸೂಟ್ ಕೇಸ್ ಮಾತ್ರವೇ ಗತಿ.
9 ವರ್ಷಗಳ ಮೇಲ್ಪಟ್ಟು ಒಂದೇ ಸ್ಥಾನ, ಇಲ್ಲವೇ ಒಂದೇ ಊರಿನಲ್ಲಿ ಝೇಂಡಾ ಊರಿದ ಅಧಿಕಾರಿಗಳೂ ಇದ್ದಾರೆ.
ಎ.ಡಿ.ಸಿ.ಮಂಜುಳಾ ಮತ್ತು ಡಿ.ಡಿ.ಸಿ.ರೇವಣ ಸಿದ್ದಪ್ಪ ಅತಿ ಹೆಚ್ಚು ವರ್ಷಗಳ ಕಾಲ ಒಂದೇ ಊರಿನಲ್ಲಿ ಕೆಲಸ ನಿರ್ವಹಿಸಿದ್ದನ್ನು ದಾಖಲೆಗಳು ಸಾಭೀತು ಪಡಿಸುತ್ತವೆ.
ಅಬ್ಬಾ ಇವರ ಪ್ರಾಭಲ್ಯಕ್ಕೆ ಭಲೆ ಎನ್ನಲೇ ಬೇಕು. ಬಹುತೇಕ ಅಧಿಕಾರಿಗಳಿಗೆ ಆಯಾ ಕಟ್ಟಿನ ಜಾಗಗಳೇ ಬೇಕು ! ಅಲ್ಲಿ ಪ್ರಭಾವ ಕಡಿಮೆ ಇರಬೇಕು ! ಇನ್ ಕಮ್ ಜಾಸ್ತಿ ಬರಬೇಕು ! ಜೊತೆಗಾತಿ ಇರುವ ಕಡೆ ಓಡಾಡಲು ರಸ್ತೆ ,ವಾಹನಗಳ ಸೌಕರ್ಯ ಬೇಕು.
ವಯಸ್ಸಾದ ತಂದೆ-ತಾಯಿಗಳ ಯೋಗ ಕ್ಷೇಮ ನೋಡಿ ಕೊಳ್ಳಬೇಕು.ಮಕ್ಕಳು ಎಮ್.ಬಿ.ಬಿ.ಎಸ್.ಓದಿದರೂ ಟ್ಯೂಷನ್ ಹೇಳಬೇಕು(?) ಅಧಿಕಾರಿಗಳಿಗೆ ತಾಪತ್ರೆಯ ಒಂದೇ, ಎರಡೇ ?
ಹೀಗಾಗಿ ಅವರು ಅತೀ ಅನುಕೂಲಕರ,ಆಯಕಟ್ಟಿನ ಜಾಗ ಹುಡುಕಿಕೊಳ್ಳುತ್ತಾರೆ.ಪಾಪ !