ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ದಿದ್ಗಿ ಗ್ರಾಮದ ಗೋವಿಂದ ರಾಜ್ ಎಂಬ ನಕಲಿ ವೈಧ್ಯ ,ತನ್ನ ನಕಲಿ ವೈಧ್ಯಕೀಯ ಕಸುಬಿನ ಜೊತೆಗೆ ಅಲೋಪತಿ ಔಷಧಗಳ ಮಾರಾಟವನ್ನು ನಡೆಸಿದ್ದ ಬಗ್ಗೆ ಪತ್ರಿಕೆಯಲ್ಲಿ ವರದಿ ಮಾಡಲಾಗಿತ್ತು.
ಈ ರೀತಿ ಲೈಸೆನ್ಸ್ ಇಲ್ಲದೆ, ಔಷಧ ಮಾರಾಟ ಮಾಡುವವರನ್ನು ತಡೆಗಟ್ಟಿ, ಪರವಾನಿಗೆ ಪಡೆದ ಔಷಧ ವ್ಯಾಪಾರಿಗಳ ತಾಪತ್ರಯ ನಿವಾರಿಸಬೇಕಾಗಿದ್ದ ಅಧಿಕಾರಿಗಳು, ಔಷಧ ವ್ಯಾಪಾರಿಗಳಿಗೆ ಕಿರುಕುಳ ಕೊಟ್ಟು ಹಣ ಪಡೆಯುತ್ತಿದ್ದರು.
ಫ಼ೋಟೋ ಸಮೇತ ಪತ್ರಿಕೆಯಲ್ಲಿ ವರದಿ ಪ್ರಕಟಿಸಿದಾಗ ಅವು ಗೂಗಲ್ ಫ಼ೋಟೋಗಳು, ವರದಿಗಳಿಗೆ ಸಂಭಂದಿಸಿದವುಗಳಲ್ಲ ಎಂದು ಮೇಲಾಧಿಕಾರಿಗಳಿಗೆ ಒಬ್ಬ ಪುರುಷ ಮತ್ತು ಓರ್ವ ಮಹಿಳಾಮಣಿ ಅಧಿಕಾರಿಗಳು ಸಭೂಬು ಹೇಳುತ್ತಲೇ ಕಾಲ ಕಳೆಯುತ್ತಿದ್ದರು.ಹಾಗೇ ಹಣ ಪಡೆದು,ಸಿಕ್ಕ ಔಷಧಗಳೊಂದಿಗೆ ಪಲಾಯನ ಗೈಯುತ್ತಿದ್ದರು.
ಆದ್ದರಿಂದ ವಿಡಿಯೋ ಸಮೇತ ವರದಿಯೊಂದನ್ನು ರಾಜ್ಯ ಔಷಧ ನಿಯಂತ್ರಕ ಬಿ.ಟಿ.ಖಾನಾಪುರೆ ಅವರಿಗೆ ಕಳುಹಿಸಲಾಗಿತ್ತು.ಈ ಬಗ್ಗೆ ಕ್ರಮ ಕೈಗೊಳ್ಳಲು ಅವರು ಸೂಚಿಸಿದ್ದಕ್ಕಾಗಿ ಮಹಿಳಾ ಮಣಿ ಅಧಿಕಾರಿ ಕ್ರಮ ಕೈಗೊಳ್ಳಲು ದೈರ್ಯ ಮಾಡಿ,ಮೆಡಿಸಿನ್ ಸೀಜ್ ಮಾಡಿರುವುದಾಗಿ ಇಲಾಖೆಯ ಮೂಲಗಳು ತಿಳಿಸಿವೆ.ಮುಂದಿನ ಕ್ರಮ ಇನ್ಯಾವಾಗೋ ? ಕಾದು ನೋಡಬೇಕು !
ಈ ನಕಲಿ ವೈಧ್ಯನಿಗೆ ಔಷಧ ಸರಬರಾಜು ಮಾಡಿದ ಮುಠಾಳರನ್ನು ಮೊದಲು ಅಧಿಕಾರಿಗಳು ಮಟ್ಟ ಹಾಕಬೇಕು.ಅದು ಬಿಟ್ಟು , ಔಷಧ ಸಿಕ್ತು ,ದಸ್ತಗಿರಿ
ಮಾಡಿದ್ವಿ ಎಂದು ಕೈತೊಳೆದುಕೊಂಡು ಕುಳಿತರೆ, ಸಾಲದು.ಬದ್ಧತೆ ಇರುವ ಅಧಿಕಾರಿಗಳು ಇವರಾಗಿದ್ದರೆ,ಅದನ್ನು ಮಾಡುತ್ತಾರೆ. ಇಲ್ಲದಿದ್ದರೆ ಇಲ್ಲ. ಅಷ್ಟೇ.