December 22, 2024
IMG-20231018-WA0097

ನಕಲಿ ವೈಧ್ಯರು, ನಕಲಿ ಪ್ರ್ಯಾಕ್ಟೀಸ್ ಮಾಡಲು ಹೂಡುವ ತಂತ್ರ ಪ್ರತಿ ತಂತ್ರಗಳಿಗೆ ಕೊನೆಯೇ ಇಲ್ಲ.ಕಣ್ಣು ಕಾಣದ, ಕಿವಿ ಕೇಳದ,ಹಾಸಿಗೆ ಬಿಟ್ಟು ಏಳಲಾಗದ ಅಧಿಕೃತ ಪದವಿ ಹೊಂದಿರುವ ವೈಧ್ಯರ ಹೆಸರ ಮೇಲೆ, ಕೆ.ಪಿ.ಎಮ್.ಎ. ಕಾಯ್ದೆಯಡಿ ಆಸ್ಪತ್ರೆಯನ್ನು ರೆಜಿಸ್ಟ್ರೇಷನ್ ಮಾಡಿಸಿ, ಅವರ ಹೆಸರಿನಲ್ಲಿ ನೇಮ್ ಬೋರ್ಡ್ ತೂಗು ಹಾಕಿಕೊಂಡು, ಒಳಗೆ ಗುಳ್ಳೆ ನರಿ ತರಹ ಪ್ರ್ಯಾಕ್ಟೀಸ್ ಮಾಡುವ ನಕಲಿ ವೈಧ್ಯರು ತುಂಬಾ ಜಾಸ್ತಿಯಾಗಿದ್ದಾರೆ.

ಇಡೀ ರಾಜ್ಯದಲ್ಲಿಯೇ ಇಂತಹ ಅವಘಡಗಳು ಸಾಕಷ್ಟು. ಬೆಂಗಳೂರು ನಗರದಲ್ಲಿಯಂತೂ ಡಾಕ್ಟರ್ ಯಾರೋ, ಪೀವನ್ ಯಾರೋ ಎಲ್ಲರೂ ವೈಧ್ಯರಂತೆ ಪೋಷಾಕು ತೊಟ್ಟವರೇ.ಗಂಗಾವತಿ ನಗರದಲ್ಲಿ ಮೂಲವ್ಯಾಧಿ ಚಿಕಿತ್ಸೆ ನೀಡುವ ನಕಲಿ ವೈಧ್ಯ ತಿಂಗಳಿಗೆ ರೂ.10 ಸಾವಿರ ಕೊಟ್ಟು ಎಮ್.ಬಿ.ಬಿ.ಎಸ್.ವೈಧ್ಯನ ನೇಮ ಬೋರ್ಡ ನೇತಾಕಿಕೊಂಡು ಬಿಂದಾಸ್ ಆಗಿ ತಿಕದ ಆಪರೇಷನ್ ಮಾಡುವುದರಲ್ಲಿ ನಿರತನಾಗಿ,ಕೊಬ್ಬಿ ಬಿಟ್ಟಿದ್ದಾನೆ. ಆಸ್ಪತ್ರೆಯೂ ಅವನದ್ದೇ,ಮೆಡಿಕಲ್ ಶಾಪ್ ಕೂಡ ಅವನದ್ದೇ ಇನ್ನೇನು ಬೇಕು ಕೊಬ್ಬಿ ಬೀಗಲು ?

ರಾಯಚೂರು ಜಿಲ್ಲೆಯಲ್ಲಿಯೂ ಇಂತಹ ಅಸಲಿ ನೋಂದಣಿ,ನಕಲಿ ವೈಧ್ಯಕೀಯ ಪ್ರಕರಣಗಳು ಬಹಳ.

ಡಾ.ಮರಿಯಮ್ಮ ಎಂಬ ಆಯುರ್ವೇದ ಮಹಿಳಾ ವೈಧ್ಯಳ ಹೆಸರಿನ ಮೇಲೆ ನೋಂದಣಿಯಾಗಿರುವ ಕ್ಲಿನಿಕ್ ನಲ್ಲಿ ಬಂಗಾಲಿ ಮೂಲದ ನಕಲಿ ವೈಧ್ಯ ಆಶೀತ್ ಕುಮಾರ ಹದಿನೈದು ವರ್ಷಗಳ ಕಾಲದಿಂದ ಕ್ಲಿನಿಕ್ ನಡೆಸುತ್ತಿದ್ದಾನೆಂದು ಹಲವು ದೂರುಗಳು ಬಂದಿವೆ.

ಈಗಾಗಲೇ ಒಂದು ಬಾರಿ ಎಫ್.ಐ.ಆರ್ ಆಗಿದ್ದರೂ ಮಿ.ಆಶೀತ್ ಕುಮಾರ ಮೈ ಚಳಿ ಬಿಟ್ಟು,ವೈದ್ಯಕೀಯ ವೃತ್ತಿ ಮುಂದುವರಿಸಿದ್ದಾನಂತೆ.ಮಾನ್ವಿ ತಾಲೂಕಿನ ಟಿ.ಹೆಚ್.ಓ‌.ನೋಟಿಸ್ ನೀಡಿ ಕ್ಲಿನಿಕ್ ಮುಚ್ಚುವಂತೆ ಆದೇಶಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ತಿಳಿದು ಬಂದಿದೆ.

ರಾಯಚೂರು ಜಿಲ್ಲೆಯಲ್ಲಿ ಸಹಾಯಕ ಔಷಧ ನಿಯಂತ್ರಕರು ಸರಿ ಇಲ್ಲ ಎಂದು ಕೊಂಡರೆ, ಡಿ.ಎಚ್.ಓ., ಮತ್ತು ಟಿ.ಎಚ್.ಓ.ಗಳೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದೀಗ ಬಯಲಾಗಿದೆ.

ಉಗ್ರರು ಒಂದೇ ಬಾರಿಗೆ ಗುಂಡು ಹೊಡೆದು ಜನರನ್ನು ಕೊಂದು ಹಾಕಿದರೆ,ಈ ನಕಲಿ ವೈಧ್ಯರು ಸಿರಂಜಿ/ಔಷಧಗಳ ಮೂಲಕ ಅಣು ಅಣುವಾಗಿ ಜನರನ್ನು ಸಾವೀಗೀಡು ಮಾಡುತ್ತಿದ್ದಾರೆ.ಹೀಗಾದರೆ, ಅಮಾಯಕರನ್ನು ಆ ದೇವರೂ ಕಾಪಾಡಲಾರ.

About The Author

Leave a Reply