ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ನಡೆಯುವ ವೈದ್ಯಕೀಯ ಅಪರಾಧಗಳಿಗೆ ಕೊನೆಯೇ ಇಲ್ಲ.ಇಂತಹ ಅಪರಾಧಗಳಿಗೆ ಕಡಿವಾಣ ಹಾಕಬೇಕಾದ ವೈಧ್ಯಕೀಯ ಇಲಾಖೆ ಮತ್ತು ಔಷಧ ನಿಯಂತ್ರಣ ಇಲಾಖೆ ಕಮೀಷನ್ ದಂಧೆಯಲ್ಲಿ ನಿರತವಾಗಿವೆ.ಅಪ್ರಾ ತಪ್ರಾ ವೈಧಕೀಯ ಚಿಕಿತ್ಸೆ ಹಾಗೂ ಔಷಧಗಳ ಬಳಕೆಯಿಂದ ಅದೆಷ್ಟೋ ಜೀವಗಳು ತಮ್ಮ ಕಿಡ್ನಿ , ಲಿವರ್,ಕಣ್ಣು ಹೀಗೆ ಇತರ ಅಂಗಗಳನ್ನು ಕಳೆದುಕೊಂಡು ಮಣ್ಣು ಪಾಲಾಗಿವೆಯೋ ಗೊತ್ತಿಲ್ಲ.
ನಕಲಿ ವೈಧ್ಯರನ್ನು ತಡೆಯಬೇಕಾದ ತಾಲೂಕು ವೈಧ್ಯಾಧಿಕಾರಿ,ಡಾ.ಅಯ್ಯನಗೌಡ ಹಲ್ಲು ಗಿಂಜುತ್ತಿದ್ದಾನೆ. ಔಷಧ ನಿಯಂತ್ರಣ ಇಲಾಖೆಯ ಎ.ಡಿ.ಸಿ.,ವಿಶಾಲಾಕ್ಷಿ ಮೇಡಂ ಗೆ ತೊಂದರೆ ಕೊಡಬೇಡಿ ಎಂದು ಬೇರೆ ಗೋಗರೆಯುತ್ತಾನಂತೆ.ತಾನು ಮಾಡುವ ಕೆಲಸ ಬಿಟ್ಟು, ಇನ್ನೊಬ್ಬರ ಬಗ್ಗೆ ಅನುಕಂಪದ ಮಾತುಗಳನ್ನು ಆಡುವುದರಲ್ಲಿಯೇ ಕಾಲ ಕಳೆಯುತ್ತಿದ್ದಾನೆ.ಜಿಲ್ಲಾ ವೈಧ್ಯಾಧಿಕಾರಿ ಡಾ.ಸುರೇಂದ್ರ ಬಾಬು ಒಂದಿಷ್ಟು ಮೈ ಕೊಡವಿಕೊಂಡು ಎದ್ದರೆ,ಏನಾದರೂ ಗಟ್ಟಿ ಕೆಲಸಗಳಾಗಬಹುದು.
ರಾಯಚೂರು ವೃತ್ತದ ಸಹಾಯಕ ಔಷಧ ನಿಯಂತ್ರಕ ಮಂಜುನಾಥ ರೆಡ್ಡಿ ಹಾಗೂ ವಿ.ವಿಶಾಲಾಕ್ಷಿ ಥೇಟ್ ಸೊಂಬೇರಿಗಳು.ಕೆಲಸ ಮಾಡುವುದೇಂದರೆ ಅವರಿಗೆ ಕುತ್ತಿಗೆಗೆ ಬರುತ್ತದೆ.ಕರೆನ್ಸಿ ಮಾತ್ರ ಅವರಿಗೆ ಬೇಕು. ಕರೆನ್ಸಿಗಾಗಿ ಇಬ್ಬರೂ ಜೋಳಿಗೆ ಹಿಡಿದು ಕೊಂಡು ಓಡಾಡಿದ್ದೇ ಬಂತು.ಬೇರೆ ಕೆಲಸ ಮಾಡಿ ಇಬ್ಬರಿಗೂ ಗೊತ್ತಿಲ್ಲ.ಈ ರೆಡ್ಡಿ ಎರಡು ತಿಂಗಳು ಯಾದಗಿರಿ ಜಿಲ್ಲೆಯಲ್ಲಿಯೂ ಕೈಯಾಡಿಸಿದ್ದಾರೆ.ಒಟ್ಟಾರೆ ಇವರ ಕೈ ಎಣಿಸುತ್ತಲೇ ಇದ್ದರೆ,ಇವರಿಗೆ ಸಮಾಧಾನ.
ವರದಿಗಳು ಪತ್ರಿಕೆಯಲ್ಲಿ ಪ್ರಕಟವಾದಾಗ ಅದರಲ್ಲಿ ಪ್ರಕಟಗೊಂಡ ಫ಼ೋಟೋಗಳು ಆ ವರದಿಗೆ ಸಂಭವಿಸಿದವುಗಳಲ್ಲ ಎಂದೇ ಮೇಲಾಧಿಕಾರಿಗಳಿಗೆ ಸಭೂಬು ಹೇಳುತ್ತಲೇ ಈ ಅಧಿಕಾರಿಗಳು ಹೊರಟಿದ್ದರು.ಹೀಗಾಗಿ ಈ ಸಾರಿ ವಿಡಿಯೋ ಮಾಡಿ ಪ್ರಕರಣವೊಂದನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ.ಇದಕ್ಕೆ ಅಧಿಕಾರಿಗಳು ಇನ್ಯಾವ ಸಭೂಬು
ಕಂಡು ಕೊಳ್ಳುತ್ತಾರೋ ಕಾಯ್ದು ನೋಡಬೇಕು.
ಸಿಂಧನೂರು ತಾಲೂಕಿನ ದಿದ್ಗಿ ಗ್ರಾಮದ ಗೋವಿಂದ ರಾಜ್ ಎಂಬ ನಕಲಿ ವೈಧ್ಯ ,ತನ್ನ ನಕಲಿ ವೈಧ್ಯಕೀಯ ಕಸುಬಿನ ಜೊತೆಗೆ ಅಲೋಪತಿ ಔಷಧಗಳ ಮಾರಾಟವನ್ನು ನಡೆಸಿದ್ದಾನೆ.ಈ ರೀತಿ ಲೈಸೆನ್ಸ್ ಇಲ್ಲದೆ, ಔಷಧ ಮಾರಾಟ ಮಾಡುವವರನ್ನು ತಡೆಗಟ್ಟಿ, ಪರವಾನಿಗೆ ಪಡೆದ ಔಷಧ ವ್ಯಾಪಾರಿಗಳ ತಾಪತ್ರಯ ನಿವಾರಿಸಬೇಕಾದ ಅಧಿಕಾರಿಗಳು ಇದನ್ನು ಬಿಟ್ಟು ಔಷಧ ವ್ಯಾಪಾರಿಗಳಿಗೆಯೇ ಕಿರುಕುಳ ಕೊಟ್ಟು ಹಣ ಪಡೆಯುತ್ತಿದ್ದಾರೆ.
ಲೈಸೆನ್ಸ್ ಪಡೆದು ವ್ಯವಹಾರ ನಡೆಸುವವರೇ ಅಧಿಕಾರಿಗಳ ದಾಳಿ ಎದುರಿಸಬೇಕಾಗಿದೆಯೇ ವಿನ್ಹ ಲೈಸೆನ್ಸ್ ಪಡೆಯದವರಲ್ಲ.ಇಂತಹ ಸ್ಥಿತಿ ಇಡೀ ರಾಜ್ಯದಲ್ಲಿಯೇ ಇದೆ.ಆದರೂ ಔಷಧ ವ್ಯಾಪಾರಿಗಳು ಕಮಕ್-ಕಿಮಕ್ ಎನ್ನುವುದಿಲ್ಲ.ಅದೆಷ್ಟು ಹೇಡಿಗಳಾಗಿದ್ದಾರೆಂದರೆ,ಮಾಹಿತಿ ನೀಡುವ ಮೊದಲೇ ತಮ್ಮ ಹೆಸರು ಬಯಲಿಗೆ ಬರಬಾರದೆಂದೇ ತಾಕೀತು ಮಾಡುತ್ತಾರೆ.ಈ ರೀತಿಯ ಪುಕ್ಕಲುತನವೇ ಅಧಿಕಾರಿಗಳಿಗೆ ಬಂಡವಾಳವಾಗಿ ಬಿಟ್ಟಿದೆ.ಹೀಗಾಗಿ ಈ ಔಷಧ ವ್ಯಾಪಾರಿಗಳನ್ನು ಆ ದೇವರೂ ಕಾಪಾಡಲಾರ.