July 13, 2025
IMG-20231005-WA0082

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ನಕಲಿ ವೈಧ್ಯರ ಉಪಟಳ ಜಾಸ್ತಿಯಾಗಿದೆ.ಚಿಕಿತ್ಸೆ ನೀಡುವುದು ಮಾತ್ರವಲ್ಲ ,ಅಲೋಪತಿ ಔಷಧಗಳ ಮಾರಾಟದಲ್ಲಿಯೂ ನಿರತರಾಗಿದ್ದಾರೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕು, ಸಂಪೂರ್ಣ ನೀರಾವರಿ ಪ್ರದೇಶ ಹೊಂದಿರುವ ಭಾಗ.ಗೊಬ್ಬರ ಮತ್ತು ಕ್ರಿಮಿನಾಶಕಗಳ ಬಳಕೆ ಬಹಳ. ಅದೇ ರೀತಿ ರೋಗ ರುಜಿನಗಳೂ ಹೆಚ್ಚು.

ಬಾಂಗ್ಲಾ ದೇಶದ ನಿರಾಶ್ರಿತರಿಗೆ ಆಶ್ರಯ ಕೊಟ್ಟ ತಾಲೂಕು ಸಿಂಧನೂರು.ಈ ನಿರಾಶ್ರಿತರಲ್ಲಿ ಕೆಲವು ಕ್ರಿಮಿನಲ್ ಗಳು ಹುಟ್ಟಿ ಕೊಂಡಿದ್ದಾರೆ.ಅದರಂತೆ ನಕಲಿ ವೈಧ್ಯರು ಈ ಬಂಗಾಲಿ ಜನರಲ್ಲಿಯೂ ಬೀಡು ಬಿಟ್ಟಿದ್ದಾರೆ.ಅವರ ಹೆಸರುಗಳನ್ನು ಬಯಲು ಮಾಡಿದ್ದರೂ ಆರೋಗ್ಯ ಇಲಾಖೆಯಾಗಲಿ,ಔಷಧ ನಿಯಂತ್ರಣ ಇಲಾಖೆಯಾಗಲಿ ತಿರುಗಿಯೂ ನೋಡುತ್ತಿಲ್ಲ.

ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು,ನಕಲಿ ವೈಧ್ಯರ ಬಳಿ ದೊರೆತ ಅಲೋಪತಿ ಔಷಧಗಳನ್ನು ಹೊತ್ತೊಯ್ದದ್ದು ಅಲ್ಲದೆ,ಪತ್ರಿಕೆಯಲ್ಲಿ ಪ್ರಕಟಿಸಿದ ಚಿತ್ರಗಳು ವರದಿಗೆ ಸಂಭಂದಿಸಿದವುಗಳಲ್ಲ ಎಂದು ಮೇಲಾಧಿಕಾರಿಗಳಿಗೆ ಸಬೂಬು ಹೇಳುತ್ತಾ ಹೊರಟಿದ್ದಾರೆ.

ಇಲ್ಲಿ ಓದಿ, ಹರೀಶ್ ಎಂಬ ಬಂಗಾಲಿ ಮೂಲದ ನಕಲಿ ವೈಧ್ಯ ಹೊಸ ಒಳ ಬಳ್ಳಾರಿ ಕ್ಯಾಂಪ್ ನಲ್ಲಿ ಬೀಡು ಬಿಟ್ಟಿದ್ದಾನೆ.ಅಮಾಯಕ ರೋಗಿಗಳಿಗೆ ಆಂಟಿಬಯೋಟಿಕ್ ಮತ್ತು ಸ್ಟಿರೈಡ್ ಗಳನ್ನು ಬಳಸಿ, ಚಿಕಿತ್ಸೆ ನೀಡುವುದೂ ಅಲ್ಲದೆ, ಅಲೋಪತಿ ಔಷಧಗಳನ್ನು ಮಾರಾಟ ಮಾಡುತ್ತಿದ್ದಾನೆ.ಕ್ರಮ ಕೈಗೊಳ್ಳಬೇಕಾದ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಚಂದಾ ಎತ್ತುತ್ತಾ ಔಷಧ ಅಂಗಡಿಗಳಿಗೆ ತಿರುಗಾಡುತ್ತಿದ್ದಾರೆ.ಮಾನ-ಮರ್ಯಾದೆ ಇಲ್ಲದೇ ವರ್ತಿಸುತ್ತಿದ್ದಾರೆ.

ರಾಯಚೂರು ವೃತ್ತದ ಸಹಾಯಕ ಔಷಧ ನಿಯಂತ್ರಕರಿಗೆ, ಕ್ರಮ ಜರುಗಿಸುವ ತಾಕತ್ತು ಇಲ್ಲವಾದ್ದರಿಂದ ಮೇಲಾಧಿಕಾರಿಗಳು ಫ಼ೀಲ್ಡಿಗೆ ಇಳಿಯಬೇಕಾಗಿದೆ.

ಈ ವರದಿಯಲ್ಲಿ ಕಾಣಿಸಿರುವ ಚಿತ್ರಗಳು ಇದೇ ವರದಿಗೆ ಸಂಭಂದಿಸಿದವುಗಳು.ಅಧಿಕಾರಿಗಳು ಈ ಚಿತ್ರಗಳು ವರದಿಗೆ ಸಂಭಂದಿಸಿದವುಗಳಲ್ಲ ಎಂದು ತಮ್ಮ ಹಕ್ಕು ಹಾರಿಸದಿರಲಿ !

-ವರದಿಗಾರ.

About The Author

Leave a Reply