ಔಷಧ ಮತ್ತು ಕಾಂತಿವರ್ಧಕ ಕಾಯ್ದೆ ಮತ್ತು ನಿಯಮ ಬಹಳ ಕಠಿಣವಾದದ್ದು ಮತ್ತು ಪಾಲಿಸಲು ಕಷ್ಟ ಸಾಧ್ಯವಾದದ್ದು.ಆದರೆ ಆ ಕಾನೂನನ್ನು ಸಮರ್ಪಕವಾಗಿ ಬಳಸದೇ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ತಮ್ಮ ಜೇಬು ತುಂಬಿಸಿಕೊಂಡಿದ್ದೆ ಹೆಚ್ಚು.ಜೊತೆಗೆ ವ್ಯಾನಿಟಿ ಬ್ಯಾಗನ್ನು ಸಹ.
ರಾಸಾಯನಿಕ ಮತ್ತು ಗೊಬ್ಬರ ಅಂಗಡಿ ಆರಂಭಿಸಲು ಬಿ.ಎಸ್.ಸಿ.ಅಗ್ರಿ ಓದಿರಬೇಕಾಗುತ್ತದೆ.ಅವರೇ ಅಂಗಡಿ ತೆರೆಯ ಬೇಕಾಗುತ್ತದೆ.ಅಗ್ರಿ ಆದವರನ್ನು ನೇಮಕ ಮಾಡಿಕೊಂಡು ಅಂಗಡಿ ಆರಂಭಿಸುವ ಅವಕಾಶ ಇಲ್ಲಿ ಇಲ್ಲ.
ಇದೇ ಗೊಬ್ಬರ ಮತ್ತು ರಾಸಾಯನಿಕ ಸಚಿವಾಲಯಕ್ಕೆ ಒಳ ಪಡುವ ಔಷಧ ಅಂಗಡಿಗಳನ್ನು ತೆರೆಯಲು ಫ಼ಾರ್ಮಸಿ ಓದಿದವರೇ ಬೇಕಾಗಿಲ್ಲ.ಫ಼ಾರ್ಮಸಿ ಓದಿದ ಬೇರೊಬ್ಬರನ್ನು ನೇಮಕ ಮಾಡಿಕೊಂಡು ಯಾವ ಅಡೆ ತಡೆಯೂ ಇಲ್ಲದೆ,ಔಷಧ ವ್ಯಾಪಾರವನ್ನು ಬಿಂದಾಸ್ ಆಗಿ ಮಾಡಬಹುದು.
ಔಷಧ ನಿಯಂತ್ರಣ ಇಲಾಖೆಗೆ ಇದೇ ಭಂಡವಾಳ,ಗೂಳಿಗಳಂತೆ ನುಗ್ಗಿ ಅಧಿಕಾರದ ಧರ್ಪ ತೋರಿಸಿ,ಹಣ ಪೀಕುವುದೇ ಅಧಿಕಾರಿಗಳ ಕೆಲಸ. ಅವರು ಮಹಿಳಾ ಅಧಿಕಾರಿಯಾಗಿರಲಿ,ಪುರುಷ ಅಧಿಕಾರಿಯಾಗಿರಲಿ ಯಾರೂ ಹಿಂದೆ ಬಿದ್ದಿಲ್ಲ.
ಲೋಕಾಯುಕ್ತಕ್ಕೆ ಬಲಿಯಾಗಿ ಜೈಲು ಕಂಡು ಬಂದವರಂತೂ ಮೂರು ಬಿಟ್ಟು ನಿಂತಿದ್ದಾರೆ.ನೌಕರಿ ಹೋದರೆ ಹೋಗಿ ಬಿಡಬಹುದು,ಅಷ್ಟರೊಳಗೆ ಹಣ ಮಾಡಿ ಬಿಡೋಣ ಎಂದು ಅವರು ನಿರ್ಧಾರಕ್ಕೆ ಬಂದು ಬಿಟ್ಟಿದ್ದಾರೆ.
ರಾಯಚೂರು ಮತ್ತು ಕೊಪ್ಪಳ ಅವಳಿ ಜಿಲ್ಲೆಗಳಲ್ಲಿ ಅಧಿಕಾರಿಗಳ ಧರ್ಪ ಅತಿ ಹೆಚ್ಚಾಗಿದೆ. ಮೇಲಾಧಿಕಾರಿಗಳು ಅದೇನು ಮಾಡುತ್ತಿದ್ದಾರೋ ಗೊತ್ತಾಗುತ್ತಿಲ್ಲ.ಅವರಿಗೆ ಕಣ್ಣು ,ಕಿವಿಗಳಿಗೂ ಲಕ್ವಾ ಹೊಡೆದಿದೆ ಎಂದು ಕಾಣುತ್ತದೆ.ಹೀಗಾಗಿ ಕೆಳ ಹಂತದ ಅಧಿಕಾರಿಗಳಿಗೆ ಲಗಾಮು ಇಲ್ಲದಂತಾಗಿದೆ.
ತಗಡಿನ ಅಂಗಡಿಯಾದರೂ ಸೈ ,ಡಬ್ಬ ವಾದರೂ ಸೈ ರೂ.30 ಸಾವಿರ ಕೊಟ್ಟರೆ ಕೊಪ್ಪಳ ವೃತ್ತದಲ್ಲಿ ಸರಳವಾಗಿ ಲೈಸೆನ್ಸ್ ಪಡೆಯಬಹುದು.ಫ಼ಾರ್ಮಸಿಸ್ಟ ನೇಮಕಾತಿ ನೆಪ ಮಾತ್ರಕ್ಕೆ ,ಕನಿಷ್ಠ ಕಾನೂನಿನ ನಿಯಮಗಳನ್ನು ತಿಳಿಸದೇ ಇಲ್ಲಿ ಲೈಸೆನ್ಸ್ ನೀಡಲಾಗುತ್ತಿದೆ.
ಅತ್ತ ರಾಯಚೂರು ವೃತ್ತದಲ್ಲಿ ಮಹಿಳಾ ಅಧಿಕಾರಿ ಮಹಿಷಾಸುರನನ್ನು ಮೀರಿಸಿದ್ದಾಳೆ.ಮೆಡಿಕಲ್ ಸ್ಟೋರ್ಸ್ ಒಳ ಆವರಣದಲ್ಲಿಯೇ ನಕಲಿ ವೈಧ್ಯರು ಪ್ರ್ಯಾಕ್ಟೀಸ್ ಮಾಡುತ್ತಿದ್ದರೂ ಆ ಯಮ್ಮನಿಗೆ ಕಾಣುವುದಿಲ್ಲ.ಬರೀ ವ್ಯಾನಿಟಿ ಬ್ಯಾಗ್ ಭರ್ತಿ ಮಾಡಿಕೊಳ್ಳುವಲ್ಲಿ ನಿರತವಾಗಿದ್ದಾಳೆ.
ನಕಲಿ ವೈಧ್ಯರು ಲೈಸೆನ್ಸ್ ಇಲ್ಲದೇ ಔಷಧ ವ್ಯಾಪಾರ ಮಾಡುತ್ತಿದ್ದರೂ ಕೊಪ್ಪಳ, ರಾಯಚೂರು ಅಧಿಕಾರಿಗಳಿಗೆ ಕಾಣುತ್ತಿಲ್ಲ.ಅವರ ಕಣ್ಣು ಏನಿದ್ದರೂ ಔಷಧ ವ್ಯಾಪಾರಿಗಳ ಮೇಲೆ.ಅವರ ಕ್ಯಾಶ್ ಡ್ರಾ ಮೇಲೆ.
ಗೊಬ್ಬರ,ಕ್ರಿಮಿ ನಾಶಕ ಮಾರಾಟ ಮಾಡಲು ಬೇಕಾದ ಕ್ವಾಲಿಫ಼ೈಡ್ ವ್ಯಕ್ತಿ ಇಲ್ಲವೆಂದು ಆ ಅಂಗಡಿಯ ಬಾಗಿಲನ್ನು ಮುಚ್ಚಿದ ಕೃಷಿ ಅಧಿಕಾರಿಗಳೆಲ್ಲಿ ? ನಮ್ಮ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳೆಲ್ಲಿ ? ಹೋಲಿಕೆ ಅಸಾಧ್ಯ. ಹೋಲಿಸಿದ್ದೇಯಾದರೆ,ಗಂಧ ಮತ್ತು ಸೆಗಣಿಗೆ ಹೋಲಿಕೆ ಮಾಡಿದಂತಾಗುತ್ತದೆ.
ಸೆಗಣಿ ತಿನ್ನುವವರಿಗೆ,ಗೊಬ್ಬರದ ಧಾರಣಿ ಕೇಳಿದಂತಾಗುತ್ತದೆ.ಅಧಿಕಾರಿಗಳ ಮೇಲೆ ದೂರು ಬಂದರೆ,ಸಿ.ಬಿ.ಐ.ಅಧಿಕಾರಿಗಳಿಗೂ ಮಿಗಿಲಾಗಿ ವಿಚಾರಣೆ ಮಾಡುವ ಮೇಲಾಧಿಕಾರಿಗಳು, ದೂರುಗಳನ್ನು ವ್ಯವಸ್ಥಿತವಾಗಿ ದಫ಼ನ್ ಮಾಡಿ ಬಿಡುತ್ತಾರೆ.
ಧರ್ಯವಿಲ್ಲದ ಔಷಧ ವ್ಯಾಪಾರಿಗಳನ್ನು ಆ ದೇವರು ಕಾಪಾಡಲಾರ.ಅವರವರ ಕರ್ಮ ಅವರವರಿಗೆ.