ವಿಜಯನಗರ ಜಿಲ್ಲೆ:(ಹೊಸಪೇಟೆ) ಬಳ್ಳಾರಿ ವಿಭಾಗದ ತನಿಖಾ ದಳದ ಮತ್ತು ಬಳ್ಳಾರಿ ವೃತ್ತದ ಸಹಾಯಕ ಔಷಧ ನಿಯಂತ್ರಕರ ಕಚೇರಿ-2 ರ ಔಷಧ ಪರಿವೀಕ್ಷಕ ಸಚಿನ್ ತಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಕಾರಣಕ್ಕಾಗಿ ನಕಲಿ ವೈಧ್ಯನೊಬ್ಬನ ಮೇಲೆ ಎಫ಼್.ಐ.ಆರ್. ದಾಖಲಿಸಿದ್ದಾರೆ.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹುಡೆಮ್ ಗ್ರಾಮದಲ್ಲಿ ನಕಲಿ ವೈಧ್ಯ ನಿಪುಣ ಎಂಬಾತ ನಕಲಿ ವೈದ್ಯಕೀಯದ ಜೊತೆಗೆ ಅಲೋಪತಿ ಔಷಧ ಮಾರಾಟ ಮಾಡುತ್ತಿದ್ದಾನೆ ಎಂಬ ದೂರಿನ ಹಿನ್ನೆಲೆಯಲ್ಲಿ ತನಿಖೆಗೆ ಹೋದಾಗ ನಿಪುಣ ಎಂಬ ನಕಲಿ ವೈಧ್ಯ, ಮತ್ತಿಬ್ಬರ ಜೊತೆ ಸೇರಿ ಕರ್ತವ್ಯಕ್ಕೆ ಔಷಧ ಪರಿವೀಕ್ಷಕರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ.
ಈ ಬಗ್ಗೆ ದಿನಾಂಕ:09-09-2023 ರಂದು ಜಿಲ್ಲೆಯ ಪೋಲೀಸ್ ವರಿಷ್ಠಾಧಿಕಾರಿಗೆ ನೇರವಾಗಿ ದೂರು ಸಲ್ಲಿಸಿದ ಹಿನ್ನೆಯಲ್ಲಿ ಹೊಸಳ್ಳಿ ಗ್ರಾಮದ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆರೋಪಿತನ ಮೇಲೆ ಐ.ಪಿ.ಸಿ.ಸೆಕ್ಷನ್ 1860
(Us 34,353,114 ಪ್ರಕಾರ ಎಫ಼್.ಐ.ಆರ್.(200/2023) ದಾಖಲಿಸಿಕೊಂಡ ಪೋಲೀಸರು ತನಿಖೆ ನಡೆಸಿದ್ದಾರೆ.