July 13, 2025
IMG-20230814-WA0034-1

ರಾಯಚೂರು ವೃತ್ತದ ಸಹಾಯಕ ಔಷಧ ನಿಯಂತ್ರಕರು

ನಕಲಿ ವೈಧ್ಯನೊಬ್ಬನ ಆಸ್ಪತ್ರೆಗೆ ಭೇಟಿ ನೀಡಿ,ಆ ನಕಲಿ ವೈಧ್ಯನ ಆಸ್ಪತ್ರೆಯಲ್ಲಿದ್ದ 30 ರಿಂದ 40 ಸಾವಿರ ರೂಪಾಯಿ ಮೊತ್ತದ ಅಲೋಪತಿ ಔಷಧಗಳನ್ನು ಅನಧಿಕೃತವಾಗಿ ಹೊತ್ತುಕೊಂಡು ಹೋಗಿದ್ದಾರೆ.ಆ ವೈಧ್ಯನ ಹತ್ತಿರ ಯಾವ ಔಷಧಗಳು ದೊರೆತಿಲ್ಲ ಎಂದು ಅದೇ ನಕಲಿ ವೈಧ್ಯನ ಹತ್ತಿರ ಲೆಟರ್ ಬರೆಯಿಸಿಕೊಂಡು ಕಾಲ್ಕಿತ್ತಿದ್ದಾರೆ.

Dr.Thikayathadar (Bangali doctor)

Albanur, Madasirwar ಎಂಬ ನಕಲಿ ವೈಧ್ಯನ ಬಳಿ 30-40 ಸಾವಿರ ರೂಪಾಯಿ ಮೌಲ್ಯದ ಔಷಧಗಳನ್ನು ಅಧಿಕಾರಿಗಳು ಹೊತ್ತೊಯ್ದಿದ್ದಾರೆ.ಆ ಔಷಧಗಳು ನ್ಯಾಯಾಲಯದ ಮೂಲಕ ಸಹಾಯಕ ಔಷಧ ನಿಯಂತ್ರಕರ ಕಚೇರಿ ತಲುಪಬೇಕಾಗಿತ್ತು.ಆದರೆ ಅಧ್ಯಾವುದು ಇಲ್ಲಿ ನಡೆದಿಲ್ಲ.

ಹಾಗದರೆ ಈ ಔಷಧಗಳನ್ನು ಅಧಿಕಾರಿಗಳು ಕದ್ದೊಯ್ದದ್ದಾರೂ ಎಲ್ಲಿಗೆ ? ನಕಲಿ ವೈಧ್ಯರಿಗೆ ಔಷಧ ಮಾರಾಟ ಮಾಡಬೇಡಿ ಎಂದು ಸುತ್ತೋಲೆ ಹೊರಡಿಸಿದ ಈ ಅಧಿಕಾರಿ,ಬಹಳಷ್ಟು ನಕಲಿ ವೈಧ್ಯರ ಕಡೆ ಈ ರೀತಿ ಔಷಧಗಳನ್ನು ಹೊತ್ತೊಯ್ದಿದ್ದಾರೆ ಎಂಬ ದೂರುಗಳು ಈಗ ಕೇಳಿ ಬರುತ್ತಿವೆ.

ಲೋಕಾಯುಕ್ತ ಕೈಗೆ ಸಿಕ್ಕಿ ,ಟಿವಿ-9 ನಲ್ಲಿ ಮಾನ ಹರಾಜು ಹಾಕಿಕೊಂಡಿದ್ದರೂ ಬುದ್ದಿ ಬರದಿದ್ದರೆ ಹೇಗೆ ? ನಕಲಿ ವೈಧ್ಯರಿಗೆ ನೀವು ಪ್ರ್ಯಾಕ್ಟೀಸ್ ಮಾಡಿ,ಆದರೆ ಮೆಡಿಸಿನ್ ಬರೆದು ಔಷಧ ಅಂಗಡಿಗೆ ಕಳುಹಿಸಿ ಎಂದು ಹೇಳಲು ಇವರು ಯಾರು ? ಹಾಗಂತ ಕಾನೂನಿನಲ್ಲಿ ಹೇಳಲಾಗಿದೆಯೇ ? ಎಂತಹ ಭಂಡ ಅಧಿಕಾರಿಗಳು ಇವರು ? 

ಲೈಸೆನ್ಸ್ ಇಲ್ಲದೇ ಔಷಧ ಮಾರಾಟ ಮಾಡುವವರ ಮೇಲೆ ಕೇಸ್ ಹಾಕುವ ಬದಲು ಅಧಿಕಾರಿಗಳು ಈ ರೀತಿ ಪಲಾಯನಗೈದರೆ,ಲೈಸೆನ್ಸ್ ಪಡೆದ ಔಷಧ ವ್ಯಾಪಾರಿಗಳು ಏನು ಮಾಡಬೇಕು ? ಬ್ರೋಕರ್ ಔಷಧ ವ್ಯಾಪಾರಿಗಳಿಂದ ಹಣ ಕಲೆಕ್ಟ ಮಾಡಿಸಿ ಕೊಂಡು ಗುಡ್ಡೆ ಹಾಕಿಕೊಳ್ಳುವುದು ಅಲ್ಲದೆ, ಔಷಧಗಳನ್ನು ಕದ್ದೊಯ್ತಾರೆಂದರೆ ಹೇಗೆ ? 

ಮೇಲಾಧಿಕಾರಿಗಳ ಆದೇಶಕ್ಕೂ ಬೆಲೆಯಿಲ್ಲ ಎನ್ನುವುದಕ್ಕಿಂತ ಭಯ ಇಲ್ಲ.ಮುದ್ರಣ ಮಾಧ್ಯಮಗಳ ವರದಿಗೆ ಬೆಲೆ ಇಲ್ಲ ಎನ್ನುವುದಾದರೆ,ಚಿತ್ರ ಮಾಧ್ಯಮದಲ್ಲಿ ವರದಿ ಮಾಡಿಸಲು ನಮಗೆ ಯಾವ ಅಡಚಣೆಯೂ ಇಲ್ಲ.ಸಮಯ-ಸಂಧರ್ಭ ಬಂದಾಗ ಅದಾಗುತ್ತದೆ.ನಕಲಿ ವೈಧ್ಯರ ಬಳಿ ಹೋಗಿ ಇದ್ದ-ಬಿದ್ದ ಔಷಧಗಳನ್ನು ಬಾಚಿಕೊಂಡು ಬಂದು,ಮಾರಾಟ ಮಾಡಿಕೊಳ್ಳುವ ತೀರಾ ನೀಚ ಕೆಲಸಕ್ಕೆ ಅಧಿಕಾರಿಗಳು  ಇಳಿಯಬಾರದು !

ಔಷಧ ವ್ಯಾಪಾರಿಗಳು ಧ್ವನಿ ಎತ್ತಿದಾಗಲೆಲ್ಲಾ ಇಲಾಖೆಯ ಋಣದಲ್ಲಿದ್ದೇವೆ.ಊಟ ಮಾಡುತ್ತೇವೆ ಎಂದು ಕೊಚ್ಚಿಕೊಳ್ಳುವ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಇದಕ್ಕ್ಯಾವ ಉತ್ತರ ಹೇಳುತ್ತಾರೆ ?

ಔಷಧ ವ್ಯಾಪಾರಿಗಳ ಭಯವನ್ನೇ ಬಂಡವಾಳ  ಮಾಡಿಕೊಂಡಿರುವ ಅಧಿಕಾರಿಗಳನ್ನು ಪ್ರಶ್ನಿಸುವರು ಯಾರು ? ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ?

ನಕಲಿ ವೈಧ್ಯನಿಗೆ ಪ್ರ್ಯಾಕ್ಟೀಸ್ ಮಾಡಿ ಎಂದು ಹೇಳುವ ಇವರನ್ನು ಯಾವುದರಿಂದ ಹೊಡೆಯಬೇಕು ? ನಾಲಾಯಕ್ ಗಳು !

ಅಧಿಕಾರಿಗಳು ಹೀಗೆಲ್ಲಾ ವರ್ತಿಸುವುದಕ್ಕೆ ಔಷಧ ವ್ಯಾಪಾರಿಗಳೇ ಕಾರಣ.ಹಾಗಂತ ಅವರೇನೂ ಅಬ್ಬೇ ಪಾರಿಗಳಲ್ಲ.ಎಲ್ಲಾ ಬಲ್ಲ ಜಾಣರು.ಅವರಿಗೆ ಅಧಿಕಾರಿಗಳ ಮೇಲೆ ಹೂಡಲೂ ಬಿಲ್ಲು ಬಾಣ ಬೇರೆಯವದ್ದೇ ಆಗಬೇಕು.ತಾವೂ ನಿಷ್ಟೂರವಾಗುವುದಿಲ್ಲ.ನಿಷ್ಟೂರವಾಗುವವರನ್ನು ಮುಂದೆ ಬಿಡುವುದಿಲ್ಲ.ಎಷ್ಟೇ ಧೈರ್ಯ ಕೊಟ್ಟರೂ ಅವರಿಗೆ ಧೈರ್ಯ ಬರುವುದಿಲ್ಲ.ಈ ಕಾರಣದಿಂದಲೇ ಅಧಿಕಾರಿಗಳ ಬಾಲ ಬೆಳೆಯುವುದು.

-ಅಶೋಕಸ್ವಾಮಿ ಹೇರೂರ

About The Author

Leave a Reply