December 24, 2024
IMG-20230814-WA0039

ಹೌದು,ಕರ್ನಾಟಕ ರಾಜ್ಯದ ಔಷಧ ನಿಯಂತ್ರಣ ಇಲಾಖೆ ಕಣ್ಮುಚ್ಚಿ ಕೆಲಸ ಮಾಡುತ್ತಿದೆ.ಲೈಸೆನ್ಸ್ ಇಲ್ಲದೆ ಔಷಧ ಮಾರಾಟ ಮಾಡುವ ನಕಲಿ ವೈಧ್ಯರ ಆಸ್ಪತ್ರೆಗಳನ್ನು ಮಟ್ಟ ಹಾಕುತ್ತಿಲ್ಲ.

ಅಮಲು ಜಾರಿ ಅಧಿಕಾರಿಗಳಾದ ಇವರು ಸ್ವಯಂ ಪ್ರೇರಿತರಾಗಿ ಕ್ರಮ ಕೈಗೊಳ್ಳಬೇಕು.ದೂರು ಬಂದಿಲ್ಲ ಎಂದು ಸುಮ್ಮನಿರಲು ಬರುವುದಿಲ್ಲ.ಮಾಹಿತಿ ಸಿಕ್ಕರೂ ಪರವಾನಗಿ ರಹಿತ ಔಷಧ ವ್ಯಾಪಾರಿಗಳನ್ನು ಅವರು ಮಟ್ಟ ಹಾಕುವ ಮನಸ್ಸು ಮಾಡುತ್ತಿಲ್ಲ.

ಮೇಲಾಧಿಕಾರಿಗಳಿಂದ ಒತ್ತಡ ಬಂದಾಗ ಅಂತಹ ಆಸ್ಪತ್ರೆಗಳಿಗೆ ಭೇಟಿ ಕೊಟ್ಟು , ಲೈಸೆನ್ಸ್ ತೆಗೆದುಕೊಂಡು ಔಷಧ ವ್ಯಾಪಾರ ಮಾಡಿ ಎಂದು ಬುದ್ದಿವಾದ ಹೇಳಿ ಬರುತ್ತಾರೆ.

ಇಂತಹ ದೂರುಗಳು ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿವೆ.ಸೀಜ್ ಮಾಡಿಕೊಂಡ ಔಷಧಗಳನ್ನು ಮಹಜರು ಮಾಡಿ, ನ್ಯಾಯಾಧೀಶರ ಪರವಾನಿಗೆ ಪಡೆದು,ತಮ್ಮ ಸುಪರ್ದಿಯಲ್ಲಿ ಔಷಧಗಳನ್ನು ಇರಿಸಿಕೊಂಡು, ನ್ಯಾಯಾಲದಲ್ಲಿ ಪ್ರಕರಣ ದಾಖಲಿಸಬೇಕು.ಆದರೆ ಇದೇ ಆಗುತ್ತಿಲ್ಲ.

ಕೈ-ಕಾಲು ಹಿಡಿದುಕೊಂಡ್ರು ಕೇಸ್ ಮಾಡುವುದನ್ನು ಬಿಟ್ಟೆ, ಮೆಡಿಸಿನ್ ಮಾತ್ರ ತೆಗೆದುಕೊಂಡು ಬಂದೆ ಎನ್ನುವ ಅಧಿಕಾರಿ ಒಬ್ಬಿಬ್ಬರಾದರೆ,ಹಣ ಪಡೆದು ಪಂಚನಾಮೆ ಮಾಡದೆ ಮೆಡಿಸಿನ್ ಮಾತ್ರ ಹೊತ್ತೊಯ್ದ ಅಧಿಕಾರಿಗಳೂ ಇದ್ದಾರೆ.

ಪದೇ ಪದೇ ದೂರುಗಳು ಬಂದರೆ,ಅಧಿಕಾರಿಗಳು ಔಷಧ ವ್ಯಾಪಾರಿಗಳ ಮೂಲಕ “ರಾಜೀ ಸಂಧಾನಕ್ಕೆ” ಸೂಚಿಸುತ್ತಾರೆ.ಪತ್ರಿಕೆಯವರಿರಲಿ,ಮೇಲಾಧಿಕಾರಿಗಳಿರಲಿ,ದೂರು ಬಂದರೆ ನಾವಿರುತ್ತೇವೆ ಎಂದು ಅಧಿಕಾರಿಗಳ ಪರ ನಿಲ್ಲುವ ನಾಲಾಯಕ್ ಔಷಧ ವ್ಯಾಪಾರಿಗಳು ಇದ್ದಾರೆ.

ಬಾಯಿಗೆ ಬಂದಂತೆ ಬೊಗಳುವ ಕೆಲವು ಔಷಧ ವ್ಯಾಪಾರಿಗಳು ತಮ್ಮ ಅವ್ಯವಹಾರ ಮುಚ್ಚಿಕೊಳ್ಳಲು ಅಧಿಕಾರಿಗಳ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ.ಕುಂಡಿ ತುಂಬುವಷ್ಟು ವ್ಯಾಪಾರ ಹೊಂದಿರುವವರಿಗೆ ವ್ಯಾಪಾರ ಇಲ್ಲದಿರುವ ಔಷಧ ವ್ಯಾಪಾರಿಗಳ ಗೋಳು,ಅದು ಹೇಗೆ ಅರ್ಥವಾಧೀತು !

ಮೇಲಾಧಿಕಾರಿಗಳ ಬಗ್ಗೆ ಹಿಯಾಳಿಸಿದರೆ ನಡೆದೀತು ! ಆದರೆ ಪತ್ರಿಕೆಯ ಬಗ್ಗೆ,ಸಂಪಾದಕರ ಬಗ್ಗೆ ಅಹಿತಕರವಾಗಿ ಮಾತನಾಡಿದರೆ, ಸುಮ್ಮನಿರಲಾಗುವುದಿಲ್ಲ.ಮಾಡುವುದೇ ಅನಾಚಾರ, ಮನೆ ಮುಂದೆ ಬೃಂದಾವನ ಎನ್ನುವಂತೆ ಕೆಲವು ಕಮಂಗಿ ಔಷಧ ವ್ಯಾಪಾರಿಗಳು ಮಾತನಾಡಿದರೆ,ಅಂತಹವರ ಅವ್ಯವಹಾರವನ್ನೂ ಬಯಲು ಮಾಡಬೇಕಾಗುತ್ತದೆ.

ಪತ್ರಿಕೆಗೆ ನೂರಾರು ದೂರುಗಳು ಬರುತ್ತವೆ.ನಂಬಲರ್ಹ ಮತ್ತು ಸಾಕ್ಷಿ ಸಮೇತ ಬರುವ ದೂರುಗಳನ್ನು ಅಧಿಕಾರಿಗಳು ಕಡೆಗಾಣಿಸಿದರೂ ” ಪತ್ರಿಕೆ ” ಅಂತಹ ದೂರುಗಳನ್ನು ಕೈ ಬಿಡುವುದಿಲ್ಲ.

ಲೈಸೆನ್ಸ್ ಪಡೆದವರ ಹತ್ತಿರ ಕಲೆಕ್ಷನ್ ಮಾಡಿ ಕೊಡುವ ಮತ್ತು ಕೊಬ್ಬಿನಿಂದ ಮಾತನಾಡುವ ಕೆಲವು ಅವಿವೇಕಿ ಔಷಧ ವ್ಯಾಪಾರಿಗಳು,ಔಷಧ ವ್ಯಾಪಾರಿಗಳ ಪರವಹಿಸದಿದ್ದರೂ ಪರವಾಗಿಲ್ಲ.ತೆಪ್ಪಗೆ ಬಿದ್ದಿರಬೇಕು. ಅದು ಬಿಟ್ಟು ನಕಲಿ ವೈಧ್ಯರ ಪರ ಬ್ಯಾಟ್ ಬೀಸಿದರೆ, ಸಹಿಸಲಾಗುವುದಿಲ್ಲ.

ಈ ವರದಿ ರಾಯಚೂರು ವೃತ್ತಕ್ಕೆ ಸಂಭಂದಿಸಿದ್ದು, ಅಧಿಕಾರಿಗಳು ಕ್ರಮ ಕೈಗೊಳ್ಳಲು ಅಡಚಣೆಯಾಗಬಾರದು ಎಂಬ ಕಾರಣಕ್ಕಾಗಿ ಲೈಸೆನ್ಸ್ ಇಲ್ಲದೆ, ಔಷಧ ಮಾರಾಟ ಮಾಡುತ್ತಿರುವ ನಕಲಿ ವೈಧ್ಯನ ಹೆಸರು ಕಾಣಿಸಿಲ್ಲ.

ಕೂಡಲೇ ಹೊತ್ತುಕೊಂಡು ಬಂದ ಔಷಧಗಳ ಬಗ್ಗೆ ಪಂಚನಾಮೆ ಮಾಡಿ,ನ್ಯಾಯಾಲಯಕ್ಕೆ ದೂರು ದಾಖಲಿಸಿದರೆ,ಪರವಾಗಿಲ್ಲ.ಅದು ಬಿಟ್ಟು ಪತ್ರಿಕೆ ಮತ್ತು ದೂರು ದಾರರ ಮೇಲೆ ಔಷಧ ವ್ಯಾಪಾರಿಗಳನ್ನು ಎತ್ತಿಕಟ್ಟಿದರೆ,ಸುಮ್ಮನಿರಲು ಸಾಧ್ಯವಿಲ್ಲ.

ಅಧಿಕಾರಿಗಳು ಹಣ ಎತ್ತುವುದೇ ತಮ್ಮ ಕರ್ತವ್ಯ ಎಂದು ಕೊಂಡಿದ್ದರೆ,ತಪ್ಪು.ಕೆಲವು ಔಷಧ ವ್ಯಾಪಾರಿಗಳಂತೆ ಎಲ್ಲಾ ಔಷಧ ವ್ಯಾಪಾರಿಗಳು, ಅಧಿಕಾರಿಗಳ ಚೇಲಾಗಳಾಗಿರುವುದಿಲ್ಲ.

ಅಧಿಕಾರಿಗಳು ಅಷ್ಟೇ ಬಾಯಿ ಮುಚ್ಚಿಕೊಂಡು ಕಾನೂನಿನ ಪ್ರಕಾರ ನಡೆದುಕೊಳ್ಳಬೇಕು.ಹಣಕ್ಕಾಗಿ ಓಣಿ, ಸಂಧಿ,ಹಳ್ಳಿ ಸುತ್ತುವ ಅಧಿಕಾರಿಗಳು ಲೈಸೆನ್ಸ್ ಇಲ್ಲದೇ ಔಷಧ ಮಾರಾಟ ಮಾಡುವವರ ಮೇಲೆ ಕ್ರ ಮ ಕೈಗೊಳ್ಳುವುದಿಲ್ಲ ಎಂದರೆ ಹೇಗೆ ?

ಮಾನ-ಮರ್ಯಾದೆ-ನಾಚಿಕೆ ಬಿಟ್ಟ ಅಧಿಕಾರಿಗಳ ಜೊತೆಗೆ,ಲೀಡರ್ ಶಿಪ್ ತೋರಿಸುವ ಸ್ಥಳೀಯ ಔಷಧ ವ್ಯಾಪಾರಿಗಳು ಶಾಮೀಲಾಗಿದ್ದಾರೆ.ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಲು ಮೀನ-ಮೇಷ ಎಣಿಸಿದರೆ, ಮಾಧ್ಯಮ ಸುಮ್ಮನೆ ಬಿಡುವುದಿಲ್ಲ.

ಅಧಿಕಾರಿಗಳ ಜೊತೆಗೆ ಔಷಧ ವ್ಯಾಪಾರಿಗಳು ಸೋಗಲಾಡಿತನ ಮಾಡಿದರೆ,ಅದನ್ನೂ ಬಹಿರಂಗ ಮಾಡಲು ಪತ್ರಿಕೆ ಸಿದ್ಧವಿದೆ.ಹಣ-ಅಧಿಕಾರ-ಶಿಫ಼ಾರಸ್ಸು ಪತ್ರಿಕೆಯ ಮುಂದೆ ನಡೆಯುವುದಿಲ್ಲ ಎಂಬ ಅರಿವು,ಈ ಅವಿವೇಕಿಗಳಿದ್ದರೆ ಸಾಕು !

-ಅಶೋಕಸ್ವಾಮಿ ಹೇರೂರ.

About The Author

Leave a Reply