ಗಂಗಾವತಿ:ಗಂಗಾವತಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಜಿ.ಜನಾರ್ಧನ ರೆಡ್ಡಿ ಅಸ್ತು ಎಂದಿದ್ದಾರೆ.ಮಂಗಳವಾರ ನಗರದ ಔಷಧೀಯ ಭವನದಲ್ಲಿ ಔಷಧ ವ್ಯಾಪಾರಿಗಳಿಗಾಗಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಭಿರದಲ್ಲಿ ರಾಜ್ಯ ಫ಼ಾರ್ಮಸಿಸ್ಟ ಸಂಘದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರ ಬೇಡಿಕೆಗಳಿಗೆ ಉತ್ತರಿಸಿ,ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಆಗೋಲಿ ಗ್ರಾಮದಲ್ಲಿ ಆಯುರ್ವೇದ ಆಸ್ಪತ್ರೆಯ ನಿರ್ಮಾಣಕ್ಕಾಗಿ 50 ಲಕ್ಷ ಹಣ ಮಂಜೂರಾಗಿದ್ದು, ಕರ್ನಾಟಕ ರೂರಲ್ ಇನ್ ಫ಼್ರಾ ಸ್ಟ್ರಕ್ಚರ್ ಡೆವಲೆಪಮೆ೦ಟ್ ಲಿಮಿಟೆಡ್ ನಲ್ಲಿ ಉಳಿದುಕೊಂಡಿದ್ದರೂ ಕಾಮಗಾರಿ ಆರಂಭವಾಗಿಲ್ಲ. ಇದೇ ರೀತಿ ನಗರದ ಜಯನಗರದ ಒಂದು ಎಕರೆ ಇಪ್ಪತ್ತು ಗು೦ಟೆ ಭೂಮಿಯಲ್ಲಿ ಆಯುರ್ವೇದ ಆಸ್ಪತ್ರೆ ನಿರ್ಮಾಣವಾಗಿದ್ದು ,ಆಯುಷ್ ಸಂಕೀರ್ಣ ಆಸ್ಪತ್ರೆ ಕಾರ್ಯನಿರ್ವಹಿಸಬೇಕಾಗಿದೆ,ಅದೂ ಕೂಡ ಆರಂಭವಾಗುತ್ತಿಲ್ಲ.
ಗಂಗಾವತಿ-ಬಳ್ಳಾರಿ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಲು, ತುಂಗಾಭದ್ರಾ ನದಿಗೆ ಆನೆಗುಂದಿ ಬಳಿ ಸ್ಟೀಲ್ ಬ್ರಿಡ್ಜ್ ನಿರ್ಮಿಸಲು,ತಾಲೂಕಿನಲ್ಲಿ ಕರಡಿ ಧಾಮ ಆರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಹೇರೂರ, ಶಾಸಕರನ್ನು ಈ ಸಂಧರ್ಭದಲ್ಲಿ ಒತ್ತಾಯಿಸಿದರು.ಇದಕ್ಕೆ ಶಾಸಕರು ಸಕರಾತ್ಮಕ ಸ್ಪಂಧಿಸಿದರು.
ವೇದಿಕೆಯ ಮೇಲೆ ಔಷಧ ವ್ಯಾಪಾರಿಗಳಾದ ಶ್ರೀಮತಿ ಸಂಧ್ಯಾ ಪಾರ್ವತಿ,ವೀರಣ್ಣ ಕಾರಂಜಿ,ಹನುಮರೆಡ್ಡಿ ಮಾಲಿ ಪಾಟೀಲ್,ರಘುನಾಥ ದರೋಜಿ, ರಾಜಶೇಖರಯ್ಯ ಭಾನಾಪೂರ,ನವೀನ ಚವ್ಹಾಣ, ಸಿ.ಚಿದಾಂದ,ಔಷಧ ಮಾರಾಟ ಪ್ರತಿನಿಧಿಗಳಾದ
ಜಗಧೀಶ್,ವಿಜಯ ಕುಮಾರ್ ಮತ್ತು ಅಜಯ ಕುಮಾರ್ ಉಪಸ್ಥಿತರಿದ್ದರು.