December 24, 2024
Screenshot_20230726_193248_Google

ಕೇಂದ್ರ ಸರಕಾರದ ನೌಕರರಿರಲಿ,ರಾಜ್ಯ ಸರಕಾರದ ನೌಕರರಿರಲಿ ಲಂಚ ಎಂಬುದು ಅವರ ಜೀವನದ ಭಾಗವಾಗಿಯೇ ಬಿಟ್ಟಿದೆ.ಲಂಚ ಪಾವತಿಯ ಬಗ್ಗೆ ವರದಿ ಬರೆದರೆ,ಯಾವುದೇ ಪುರಾವೆ ಇಲ್ಲದೆ ಬರೆಯುತ್ತಾರೆ ಎಂದು ಮೇಲಾಧಿಕಾರಿಗಳಿಗೆ ನೌಕರರು ವರದಿ ಒಪ್ಪಿಸುತ್ತಾರೆ.

ಕರ್ನಾಟಕ ರಾಜ್ಯ ಔಷಧ ನಿಯಂತ್ರಣ ಇಲಾಖೆಯದ್ದೂ ಇದೇ ಕತೆ.ಉಪ ಔಷಧ ನಿಯಂತ್ರಕರು,ಸಹಾಯಕ ಔಷಧ ನಿಯಂತ್ರಕರು ಮತ್ತು ಔಷಧ ಪರಿವೀಕ್ಷಕರು ಪೈಪೋಟಿಯಿಂದ ಹಣ ಪೀಕುತ್ತಾರೆ.

ಕಚೇರಿ ನೌಕರರು ಬಿಡಿ,ಮೇಲಾಧಿಕಾರಿಗಳ ಪಾಲನ್ನು ಇಸಿದು ಕೊಂಡು,ಲೋಕಾಯುಕ್ತರ ಪಾಲಾಗಿ ಹೈರಾಣಾಗುತ್ತಿರುವ ಹಲವು ನಿದರ್ಶನಗಳಿವೆ.ತಮ್ಮ ಅಲ್ಪ ಪಾಲಿನ ಜೊತೆಗೆ ಅಧಿಕಾರಿಗಳ ಬಹು ಪಾಲು ಪಡೆದು,ಪಡಬಾರದ ಕಷ್ಟ ಪಟ್ಟವರು,ಪಡುತ್ತಿರುವವರೂ ಇದ್ದಾರೆ.

ಲೋಕಾಯುಕ್ತದಿಂದ ಟ್ರ್ಯಾಪ್ ಆಗಿದ್ದ ಅಧಿಕಾರಿಗಳು ಸಹ ಹಣದ ಹಪಾ ಹಪಿ ಬಿಟ್ಟಿಲ್ಲ.ಹೊಸ ಲೈಸನ್ಸ್ ಗೆ ಕಡಿಮೆ ಎಂದರೂ ರೂ.35,000/-.ಇದರ ಮೇಲೆ ಟ್ಯಾಕ್ಸಿ ಚಾರ್ಚ ಎಂದು ಹೆಚ್ಚುವರಿಯಾಗಿ ರೂ.2000/- ರಿಂದ ರೂ.3000/- ಗಳ ಬೇಡಿಕೆ ಇರುತ್ತದೆ.

ಬಿ.ಫ಼ಾರ್ಮ., ಎಮ್.ಫ಼ಾರ್ಮ ಓದಿದವರಿಗೂ ಲಂಚದಲ್ಲಿ ರಿಯಾಯಿತಿ ಇಲ್ಲ.ಮೇಲಾಧಿಕಾರಿಗಳಿಗೆ ಕೊಡಬೇಕೆಂದು ಹೇಳಿ,ಹಣ ಇಸಿದು ಕೊಳ್ಳುವುದನ್ನು ಬಿಡುವುದಿಲ್ಲ.ನಿಜ ಸ್ಥಿತಿ ಹೀಗಿರುವಾಗ ಯಾವ ಪುರುಷಾರ್ಥಕ್ಕಾಗಿ ಫ಼ಾರ್ಮಸಿ ಓದಬೇಕು ?

ನಮ್ಮ ಔಷಧ ವ್ಯಾಪಾರಿಗಳಿಗೆ ಸ್ವಾತಂತ್ರ್ಯದ ಅರಿವೇ ಇಲ್ಲ.ಎಸಿಬಿ ಇತ್ತು , ಲೋಕಾಯುಕ್ತ ಇದೆ.ಆದರೂ ಅವುಗಳ ಪ್ರಯೋಜನ ಪಡೆಯುವ ಧೈರ್ಯ ಇಲ್ಲವೇ ಇಲ್ಲ.ಅಧಿಕಾರಿಗಳ ಜೇಬು ತುಂಬಿಸಿ ಬಂದು,ತಲೆ ಕೆರೆದು ಕೊಳ್ಳುತ್ತಾ ನಿಲ್ಲುತ್ತಾರೆ ಅಷ್ಟೇ.

ಔಷಧ ವ್ಯಾಪಾರಿಗಳ ಸಂಘದ ಮುಖ್ಯಸ್ಥರೇ ಬ್ರೋಕರಗಿರಿ ಮಾಡಿ,ಲಂಚದ ಹಣವನ್ನು ಕಡಿಮೆ ಮಾಡಿಸಬೇಕೆನ್ನುವುದನ್ನೇ ಅವರು ಮನಸ್ಸಿನಲ್ಲಿ ಇಟ್ಟು ಕೊಂಡಿರುತ್ತಾರೆ.ಇಲ್ಲದಿದ್ದರೆ ಸಂಘ ಯಾಕೆ ಬೇಕು ?

ಸಂಘದ ಅಧ್ಯಕ್ಷರು ಯಾಕಿರಬೇಕು ? ಎಂಬುದು ಅವರ ಆಲೋಚನೆಯಾಗಿರುತ್ತದೆ.

ಲೋಕಾಯುಕ್ತದ ಪ್ರೊಸಿಜರ್ ಗಳು ಸ್ವಲ್ಪ ಸರಳವಾಗಿದ್ದರೆ, ಅಧಿಕಾರಿಗಳು ಅತೀ ಸರಳವಾಗಿ ಲೋಕಾಯುಕ್ತದ ಬಾಯಿಗೆ ಬೀಳುತ್ತಿದ್ದರು.

ಅಧಿಕಾರಿಗಳು ಅಷ್ಟು ಕೇಳುತ್ತಾರೆ, ಇಷ್ಟು ಕೇಳುತ್ತಾರೆ ಎಂದು ಹೇಳುವವರು,ಅಧಿಕಾರಿಗಳಿಗೆ ಹಣ ಕೊಟ್ಟು ಬಂದ ಮೇಲೆ ಒಂದಿಷ್ಟು ಚೌಕಾಸಿ ಮಾಡಿ ಹಣ ಕೊಟ್ಟು ಬಂದ ಬಗ್ಗೆ ಅಥವಾ ಚೌಕಾಸಿ ನಡೆಯದಿರುವ ಬಗ್ಗೆ ಸೋತ ಮುಖ ಮಾಡಿಕೊಂಡು ಹೇಳುತ್ತಾರೆ.

ಅಧಿಕಾರಿಗಳು ಅಷ್ಟೇ, ನೀವು ಸಂಘ-ಸಂಸ್ಥೆ ಎಂದು ಹೋದರೆ, ಲೈಸನ್ಸನ್ನೆ ಕೊಡುವುದಿಲ್ಲ ಎಂದು ಬಟ್ಟೆ ಹಾವು ಬಿಟ್ಟಿರುತ್ತಾರೆ.ಅದಕ್ಕಾಗಿ ಔಷಧ ವ್ಯಾಪಾರಿಗಳು ಬಾಯಿ ಬಿಡುವುದೇ ಇಲ್ಲ.

ಫ಼ಾರ್ಮಸಿ ಓದಿದವರನ್ನು ಬಿಡುವುದಿಲ್ಲ.ಕಾಲು ಮುರಿದು ಕೊಂಡವರ ಸ್ಟ್ಯಾಂಡ್,ಬಾಥ್ ರೂಮ್ ಖುರ್ಚಿ ಮಾರುವವರನ್ನು ಈ ಅಧಿಕಾರಿಗಳು ಬಿಡುವುದಿಲ್ಲ.ಅವರಿಂದಲೂ ವರ್ಷದ ಮಾಮುಲು ಇಸಿದು ಕೊಳ್ಳಲು ಮರೆಯುವುದಿಲ್ಲ.ಇಷ್ಟು ಮಾತ್ರವಲ್ಲ ಎಲ್ಲರಿಗಿಂತಲೂ ತುಸು ಹೆಚ್ಚಿಗೆಯೇ ಇಂತಹವರು ನೀಡಬೇಕು ಎನ್ನುವ ಮನಸ್ಥಿತಿ ಅಧಿಕಾರಿಗಳದ್ದು.

ಆಯ್ತು.ಲಂಚ ಪಡೆಯುವ ಅಧಿಕಾರಿಗಳನ್ನು ಲೋಕಾಯುಕ್ತಕ್ಕೆ ಒಪ್ಪಿಸುವ ಧೈರ್ಯ ವೈಯಕ್ತಿಕವಾಗಿ ಔಷಧ ವ್ಯಾಪಾರಿಗೆ ಇಲ್ಲ ಎನ್ನುವುದಾದರೆ, ಹೋಗಲಿ ಅಧಿಕಾರಿಗಳ ಲಂಚದ ಉಪಟಳ ಜಾಸ್ತಿಯಾದಾಗ ಔಷಧ ವ್ಯಾಪಾರಿಗಳು ಅಂಗಡಿ ಬಂದ್ ಮಾಡಿ, ಸಾರ್ವಜನಿಕರ/ಸರಕಾರದ ಗಮನ ಸೆಳೆಯಲು ಯಾವ ಅಂಜಿಕೆ ಅಡ್ಡವಾಗಿದೆ ?

ಔಷಧ ಅಂಗಡಿಯವರ ಅಪ್ಪನ ವಾರಸುದಾರರಂತೆ, ಮಾಮೂಲಿನ ಹೆಸರಿನಲ್ಲಿ ವರ್ಷದ ಲಾಭದಲ್ಲಿ ಪಾಲು ಕೇಳುವ ಅಧಿಕಾರಿಗಳು,ಹೊಸ ಅಂಗಡಿ ಆರಂಭಿಸಿರುವವರಿಗಂತೂ ಹಪ್ತಾ ವಸೂಲಿ ಮಾಡುವ ಗುಂಡಾಗಳ ರೀತಿಯಲ್ಲಿ ಹಣ ಕೀಳುತ್ತಾರೆ.

ಇಡೀ ರಾಜ್ಯದ ಇತಿಹಾಸದಲ್ಲಿಯೇ ರಾಜ್ಯದ TV9 ದೃಷ್ಯ ಮಾಧ್ಯಮದ ಲೈವ ಕಾರ್ಯಕ್ರಮದಲ್ಲಿ ನೇರವಾಗಿ ಅಧಿಕಾರಿಗಳು ಲಂಚ ತಿನ್ನುವ ಬಗ್ಗೆ ಹೇಳಿದ್ದವನು ನಾನು ! ಅದೂ ನಾನು ! ಒಬ್ಬನೇ ಒಬ್ಬ !

ಲಂಚತನ ವಿರೋಧಿಸಿ,ನ್ಯಾಯಾಂಗ ಬಂಧನದಲ್ಲಿ ಇದ್ದು, ಬಂದವರಲ್ಲಿಯೂ ನಾನೇ ಮೊದಲಿಗ !

ದ್ವೇಷದಿಂದ ಇಲಾಖೆಯ ತಲೆಹಿಡುಕ ಅಧಿಕಾರಿಗಳು ಹಾಕಿದ್ದ ಒಂದು ಪೋಲಿಸ್ ಕೇಸ್ ! 

ಇನ್ನೊಂದು ಡಿಪಾರ್ಟ್ಮೆಂಟ್ ಕೇಸ್ ! 

ಎರಡರಲ್ಲೂ ಖುಲಾಸೆಯಾದವನೂ ನಾನೆ !

ಕರ್ನಾಟಕ ಫ಼ಾರ್ಮಸಿ ಕೌನ್ಸಿಲ್ ಮೇಲೆ ಹೈಕೋರ್ಟ್ ನಲ್ಲಿ ದಾವೆ ಹೂಡಿ,ಗೆಲುವು ಸಾಧಿಸಿದವನೂ ನಾನೆ !

ಕೆಲವು ಅಂಗಡಿಗಳ ಮೇಲೆ ಕೇಸ್ ಹಾಕಿ,ಕೆಲವರನ್ನು ಬಿಟ್ಟಿದ್ದಕ್ಕೆ ಹೈಕೋರ್ಟ್ ಮೆಟ್ಟೆಲೇರಿದ್ದೇನೆ.86 ಔಷಧ ಅಂಗಡಿಗಳ ಮೇಲೆ,22 ಜನ ಅಧಿಕಾರಿಗಳ ಮೇಲೆ ರಾಜ್ಯದ ಹೈಕೋರ್ಟ್ ನ ಬೆಂಗಳೂರು ಬೆಂಚ್ ನಲ್ಲಿ ದಾವೆ ಹೂಡಿದ್ದೇನೆ ! 

ಇಂತಹ ವಿಷಯದಲ್ಲೂ ನಾನೇ ಮೊದಲು !

ನಮ್ಮ ಔಷಧ ವ್ಯಾಪಾರಿಗಳು ಬಹುತೇಕ ಪರದೆ ಹಿಂದಿನ ಭಾಷಣಕಾರರು,ನಟ ಭಯಂಕರರು.ಅಧಿಕಾರಿಗಳು ಬಿಡಿ, ಔಷಧ ವ್ಯಾಪಾರಿ ಮುಖಂಡರ ಹೆಗಲ ಮೇಲೆ ಕೈಹಾಕಿ, ಸಾಮಾನ್ಯ ಔಷಧ ವ್ಯಾಪಾರಿಗಳಿಂದ ವಸೂಲಿ ಮಾಡಿಕೊಳ್ಳುವ ಉಸರವಳ್ಳಿಯ ಗುಣದವರು !

ಲಂಚ ಪಡೆಯುವುದನ್ನು ತಡೆಯಲು ಹಲವು ಮಾರ್ಗಗಳಿವೆ.ಆ ಕೆಲಸ ಮಾಡುವಲ್ಲಿಯೂ ನಾನು ಮುಂದಾದರೆ,ನಾನೇ ಮೊದಲಿಗಿರುತ್ತೇನೆ !

ನನ್ನ ಬರವಣಿಗೆ,ಅಭಿಪ್ರಾಯಗಳನ್ನು ಆನ್ ಲೈನ್ ನಲ್ಲಿ ಓದುವ ಔಷಧ ವ್ಯಾಪಾರಿಗಳು “ಔಷಧೀಯ ವಾರ್ತೆ” ಪತ್ರಿಕೆಯನ್ನು ಕೊಂಡು ಓದಿದರೆ, ಅವರಿಗಾಗಿ ನಾನು ಬೇಕಾದ್ದನ್ನು ಮಾಡುವೆ.ಆದರೆ ಪುಕ್ಕಟ್ಟೆ ಓದುವವರಿಗೆ ಪಕ್ಕಟ್ಟೆ ಧೈರ್ಯ ಕೊಡಲು ನನಗೆ ಕಸುವು ಬರುವುದಾದರೂ ಹೇಗೆ ? ಅಲ್ಲವೆ ? ನಾಳೆಯ ನೆಮ್ಮದಿಗಾಗಿ ಔಷಧೀಯ ವಾರ್ತೆ ಮಾಸ ಪತ್ರಿಕೆಗೆ ಚಂದಾದಾರರಾಗಿ ! ಅಷ್ಟೇ ಸಾಕು ! -ಅಶೋಕಸ್ವಾಮಿ ಹೇರೂರ

‘ಔಷಧೀಯ ವಾರ್ತೆ’ ಪತ್ರಿಕೆಗೆ ನಿವ್ಯಾಕೆ ಚಂದಾದಾರರಾಗಬಾರದು ? 

ಔಷಧ,ಆರೋಗ್ಯ ಮತ್ತು ಔಷಧ ವಲಯದ ಏಕೈಕ ಮತ್ತು ಮೊದಲ ಪತ್ರಿಕೆ ಇದು.

ಔಷಧೀಯ ವಾರ್ತೆ ಮಾಸ ಪತ್ರಿಕೆ.52 ಪುಟಗಳಲ್ಲಿ ಮ್ಯಾಗ್ಜಿನ್ ರೂಪದಲ್ಲಿ ಪ್ರಕಟವಾಗುತ್ತದೆ.       

ಔಷಧ ವ್ಯಾಪಾರಿಗಳಿಗಾಗಿಯೇ ಪ್ರಕಟಿಸಲಾಗುತ್ತಿರುವ ಪತ್ರಿಕೆ ಇದು.

ಇದನ್ನು ಉಳಿಸಿ,ಬೆಳೆಸಬೇಕಾದ್ದು ತಮ್ಮ ಕೈಯಲ್ಲಿದೆ.       

ದಯವಿಟ್ಟು ಚಂದಾದಾರರಾಗುವ ಮೂಲಕ ಸಹಕರಿಸಿ.        

ಚಂದಾ ವಿವರ:

1 ವರ್ಷಕ್ಕೆ ರೂ.500/-

3 ವರ್ಷಕ್ಕೆ ರೂ.1400/-

5 ವರ್ಷಕ್ಕೆ ರೂ.2000/-

5 ವರ್ಷದ ಅಥವಾ 3 ವರ್ಷದ ಚಂದಾದಾರರಾದವರಿಗೆ-

ರೂ.750/- ಬೆಲೆಯ Karnataka Registered Pharmacists Address Book ಉಚಿತವಾಗಿ ಕೊಡಲಾಗುವುದು.

ದಯವಿಟ್ಟು 9448303133 ಈ ಸಂಖ್ಯೆಗೆ ಫ಼ೋನ್ ಪೇ ಅಥವಾ ಗೂಗಲ್ ಪೇ ಮೂಲಕ ಹಣ ಕಳುಹಿಸಿ, ಪೇಮೆಂಟ್ ಸ್ಕ್ರೀನ್ ಶಾಟ್ ಮತ್ತು ನಿಮ್ಮ ವಿಳಾಸವನ್ನು ವ್ಯಾಟ್ಸ್ ಪ್ ಮೂಲಕ ಕಳುಹಿಸಿ.ನಿರಂತರವಾಗಿ ಪತ್ರಿಕೆಯನ್ನು ಅಂಚೆಯ ಮೂಲಕ ಪಡೆಯಿರಿ.

                                                                 

About The Author

Leave a Reply