December 24, 2024
IMG-20230607-WA0064

ಜಿಲ್ಲಾ ವಾಣಿಜ್ಯೊಧ್ಯಮ ಸಂಸ್ಥೆಯಿಂದ ಅಭಿವೃದ್ಧಿ ಕೆಲಸಗಳ ಬಗ್ಗೆ ಶಾಸಕರಿಗೆ ವಿವಿಧ ಮನವಿ.

ಗಂಗಾವತಿ:ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯಿಂದ ಕ್ಷೇತ್ರದ ಅಭಿವೃದ್ದಿಗಾಗಿ ವಿವಿಧ ಕಾರ್ಯಗಳನ್ನು ಹಮ್ಮಿಕೊಳ್ಳಲು ಕೋರಿ,ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಶಾಸಕ ಜಿ.ಜನಾರ್ಧನ ರೆಡ್ಡಿಯವರಿಗೆ ಬುಧುವಾರ ಮನವಿ ಸಲ್ಲಿಸಿದರು.

ನಗರ ಸಭೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕರನ್ನು ಭೇಟಿಯಾದ ಅಶೋಕಸ್ವಾಮಿ ಹೇರೂರ, ಗಂಗಾವತಿ-ದರೋಜಿ ನೂತನ ರೇಲ್ವೇ ಲೈನ್ ಮಾರ್ಗ, ಆನೆಗುಂದಿ ಹತ್ತಿರ ತುಂಗಭದ್ರಾ ನದಿಗೆ ಸ್ಟೀಲ್ ಬ್ರಿಡ್ಜ್ ನಿರ್ಮಾಣ, ಆನೆಗುಂದಿ-ಗಂಗಾವತಿ-ಹಂಪಿ ರಸ್ತೆಗಳಲ್ಲಿರುವ ರಸ್ತೆ ತಡೆಗಳನ್ನು ತೆರುವು ಗೊಳಿಸಿ ರಸ್ತೆಯನ್ನು ಮೇಲ್ದರ್ಜೆಗೆ ಏರಿಸುವುದು,ಗಂಗಾವತಿ ವಿಧಾನ ಸಭಾ ಕ್ಷೇತ್ರದಲ್ಲಿ ಕರಡಿ ದಾಮ ನಿರ್ಮಾಣ, ನಗರದಲ್ಲಿ ಎ.ಆರ್.ಟಿ.ಓ. ಕಚೇರಿ ಆರಂಭಿಸುವುದು, ಗಂಗಾವತಿ-ಬಳ್ಳಾರಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಗುಣ ಮಟ್ಟದಲ್ಲಿ ನಿರ್ಮಾಣಮಾಡುವುದು,ಗಂಗಾವತಿ-ಮುದಗಲ್ ರಸ್ತೆಯಲ್ಲಿನ ಅವೈಜ್ಞಾನಿಕ ಹಂಪ್ಸ್ ಗಳ ತೆರುವು,ಹೇಮಗುಡ್ಡಾ ಮತ್ತು ಮರಳಿ ಗ್ರಾಮದ ಹತ್ತಿರ ಇರುವ ಟೋಲ್ ಪ್ಲಾಜಾಗಳ ತೆರುವು ಮುಂತಾದ ಕಾರ್ಯಗಳನ್ನು ಅ‌ನುಷ್ಟಾಕ್ಕೆ ತರಲು ಪ್ರತ್ಯೇಕವಾಗಿ ಮನವಿ ಪತ್ರಗಳನ್ನು ಸಲ್ಲಿಸಿದರು.

ವಾಣಿಜ್ಯೊಧ್ಯಮ ಸಂಸ್ಥೆಯ ಮನವಿಗಳನ್ನು ವಿಶೇಷವಾಗಿ ಪರಿಗಣಿಸುವುದಾಗಿ ಶಾಸಕರು, ಅಶೋಕಸ್ವಾಮಿ ಹೇರೂರ ಅವರಿಗೆ ಭರವಸೆ ನೀಡಿದರು.ಈ ಸಂಧರ್ಭದಲ್ಲಿ ಶರಭಯ್ಯ ಹಿರೇಮಠ, ಕಲ್ಲಯ್ಯ ಸ್ವಾಮಿ,ಚನ್ನಬಸವಸ್ವಾಮಿ ಮತ್ತು ಮಲ್ಲಯ್ಯ ಹೇರೂರ ಹಾಜರಿದ್ದರು.

ಗಂಗಾವತಿ-ದರೋಜಿ ರೇಲ್ವೆ ಹೋರಾಟ ಸಮಿತಿ,ಕಂಪ್ಲಿ ಈ ಸಂಸ್ಥೆಯಿಂದಲೂ ಗಂಗಾವತಿ-ದರೋಜಿ ನೂತನ ಬ್ರಾಡಗೇಜ್ ಮಾರ್ಗ ಮತ್ತು ತುಂಗಭದ್ರಾ ನದಿಯ ಕಂಪ್ಲಿ-ಗಂಗಾವತಿ ಸೇತುವೆಯನ್ನು ನೂತನವಾಗಿ ನಿರ್ಮಿಸಲು ತ್ವರಿತವಾಗಿ ಹಣ ಬಿಡುಗಡೆ ಮಾಡಿಸುವಂತೆ ಹೋರಾಟ ಸಮಿತಿಯ ಅಧ್ಯಕ್ಷ ಹೇಮಯ್ಯ ಸ್ವಾಮಿ ಕಂಪ್ಲಿ ಮನವಿ ಸಲ್ಲಿಸಿದರು. ಸಮಿತಿಯ ಉಪಾಧ್ಯಕ್ಷ ಇಂಗಳಗಿ ನಾರಾಯಣಪ್ಪ, ಕಾರ್ಯದರ್ಶಿ ಕಾಳಿಂಗ ವರ್ಧನ ಹಾದಿಮನಿ, ಸದಸ್ಯರಾದ ದೊಡ್ಡ ಬಂಗಿ ಮಂಜುನಾಥ ಉಪಸ್ಥಿತರಿದ್ದರು.

About The Author

Leave a Reply