


ಕ್ಷೇತ್ರ ಅಭಿವೃದ್ಧಿಗೆ ಆಧ್ಯತೆ:ಜನಾರ್ಧನ ರೆಡ್ಡಿ
ಗಂಗಾವತಿ:ಕ್ಷೇತ್ರದ ಅಭಿವೃದ್ಧಿಗೆ ಆಧ್ಯತೆ ನೀಡುವುದಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜನಾರ್ಧನ ರೆಡ್ಡಿ ಹೇಳಿದರು.ಅವರು ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಮುಖ್ಯಸ್ಥರು ಮತ್ತು ರಾಜ್ಯ ಔಷಧ ತಜ್ಞರ ಸಂಘದ ಅಧ್ಯಕ್ಷರು ಅಶೋಕಸ್ವಾಮಿ ಹೇರೂರ ಅವರ ನಿವಾಸಕ್ಕೆ ಶನಿವಾರ ಭೇಟಿ ನೀಡಿದ ಸಂಧರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಮನೋಹರಗೌಡ ಹೇರೂರ, ಪ್ರಮುಖರಾದ ಸಿಂಗನಾಳ ಪಂಪಾಪತಿ ಸಾಹುಕಾರ,ಅಮರಜ್ಯೋತಿ ನರಸಪ್ಪ ,ಹೀರೂರ ಚಂದ್ರಶೇಖರ,ಚೌಡ್ಕಿ ಯಮನೂರ,ವಿಜಯ ಕುಮಾರ್ ರಾಯಕರ,ದುರ್ಗಪ್ಪ ದಳಪತಿ,ಬಸಯ್ಯಸ್ವಾಮಿ ಶಿವನಗುತ್ತಿ ,ಚಂದ್ರಶೇಖರಯ್ಯ ಹೇರೂರ, ರಾಜಶೇಖರಯ್ಯ ಭಾನಾಪೂರ,ಬಳ್ಳಾರಿ ನಗರದ ರಮೇಶ್ ಬಾಬು,ವಿಜಯ್ ಕುಮಾರ್, ಅಜಯ್ ಕುಮಾರ್,ಸಿರುಗುಪ್ಪಾ ನಗರದ ಮಲ್ಲಿಕಾರ್ಜುನ ಗೌಡ ಮುಂತಾದವರು ಉಪಸ್ಥಿತರಿದ್ದರು.
ಹಲವು ವ್ಯಾಪಾರಸ್ಥರು,ಯುವಕರು ಈ ಸಂಧರ್ಭದಲ್ಲಿ ಹಾಜರಿದ್ದರು.