July 12, 2025
IMG-20220911-WA0057

ಬಸಯ್ಯ ಹಿರೇಮಠ ಅವರಿಗೆ ಶ್ರೇಷ್ಠ ಉಧ್ಯಮ ಪ್ರಶಸ್ತಿ.

ಕುಷ್ಟಗಿ:ತಾಲೂಕಿನ ತಾವರಗೇರಿಯ ನಂದಿ ಆಗ್ರೋ ಫ಼ಾರ್ಮ ಮಾಲೀಕರಾದ ಮೂಲತಃ ಕಾರಟಗಿ ತಾಲೂಕಿನ ಬೂದಗುಂಪಾ ಗ್ರಾಮದ ಬಸಯ್ಯ ಸ್ವಾಮಿ ಹಿರೇಮಠ ಅವರಿಗೆ ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯಿಂದ ಕೊಡಮಾಡುವ ಶ್ರೇಷ್ಠ ಉಧ್ಯಮಿ ಪ್ರಶಸ್ತಿ ಲಭಿಸಿದೆ.

ಪ್ರಸ್ಥುತ ಗಂಗಾವತಿ ನಗರದ ನಿವಾಸಿಯವರಾದ ಬಸಯ್ಯ ಹಿರೇಮಠ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರೂ ನುಗ್ಗೆ ಕೃಷಿಯ ಮೂಲಕ ದೇಶ ವಿದೇಶಗಳಲ್ಲಿ ವಹಿವಾಟು ಹೊಂದಿದ್ದಾರೆ.

ನುಗ್ಗೆಯ ಎಣ್ಣೆ ,ಪೌಡರ್, ಟ್ಯಾಬ್ಲೆಟ್, ಕ್ಯಾಪ್ಸಲ್ಸ್ ಹೀಗೆ ವಿವಿಧ ಉತ್ಪನ್ನಗಳನ್ನು ಇವರು ತಯಾರಿಸುತ್ತಿದ್ದು , ಸಂಪೂರ್ಣ ಸಾವಯವ ಪದ್ದತಿಯ ಮೂಲಕ ನುಗ್ಗೆ ಕೃಷಿ ಮಾಡುತ್ತಿದ್ದಾರೆ.ಮಕ್ಕಳು ಮತ್ತು ಜನ ಸಾಮಾನ್ಯರ ಅಪೌಷ್ಟಿಕತೆಯ ಬಗ್ಗೆ ತುಂಬಾ ಕಳಕಳಿ ಹೊಂದಿರುವ ಇವರು ವಿವಿಧ ಹಾಸ್ಟೆಲ್ ಮತ್ತು ಸಂಸ್ಥೆಗಳಿಗೆ ಉಚಿತ ಮತ್ತು ರಿಯಾಯಿತಿ ದರದಲ್ಲಿ ತಮ್ಮ ಉತ್ಪನ್ನಗಳನ್ನು ಸರಬರಾಜು ಮಾಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ.

ಈ ಎಲ್ಲವನ್ನೂ ಪರಿಗಣಿಸಿ,ಡಿಸೆಂಬರ್ 10 ಮತ್ತು 11 ರಂದು ಕಲಬುರ್ಗಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶ್ರೇಷ್ಠ ಉದ್ಯಮಿ ಪ್ರಶಸ್ತಿಯನ್ನು ಕೊಡ ಮಾಡಲಾಗುತ್ತಿದೆ ಎಂದು ಕೊಪ್ಪಳ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Leave a Reply