December 23, 2024
Screenshot_20221016-133945_Chrome

ಗಂಗಾವತಿ:ತಾಲೂಕಿನ ಮಲ್ಲಾಪೂರ ಗ್ರಾಮದ ವ್ಯಾಪ್ತಿಯ ಜಲ ವಿದ್ಯುತ್ ಸ್ಥಾವರ ಹಲವು ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ವಾಣಿಜ್ಯೊದ್ಯಮ ಮತ್ತು ಕೈಗಾರಿಕಾ ಸಂಸ್ಥೆಯಿಂದ ಈ ಹಿಂದೆ ಪತ್ರ ಬರೆಯಲಾಗಿತ್ತು.

ಈ ಬಗ್ಗೆ ಪತ್ರದ ಮೂಲಕ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರಿಗೆ ಉತ್ತರಿಸಿರುವ ರಾಜ್ಯ ವಿದ್ಯುತ್ ಇಲಾಖೆಯ ಮುಖ್ಯಸ್ಥರು,ಬೆಂಗಳೂರು ಮೂಲದ ಕಂಪನಿಯಿಂದ ನಿಂತು ಹೋಗಿದ್ದ ಜಲ ವಿದ್ಯುತ್ ಸ್ಥಾವರವನ್ನು ದುರಸ್ತಿಗೊಳಿಸಲಾಗಿದ್ದು ,ಈಗ ಅದು ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ವಿಷಯವನ್ನು ಪತ್ರಿಕಾ ಪ್ರಕಟಣೆಯ ಮೂಲಕ ಹೇರೂರ ತಿಳಿಸಿದ್ದಾರೆ.

About The Author

Leave a Reply