December 22, 2024
IMG-20220929-WA0083
ದಿನಾಂಕ:29-09-2022 ರಂದು ಜನ್ಮ ದಿನಾಚರಣೆಯ ಸಂಧರ್ಬ.
ಹಾಜರಿದ್ದ ಔಷಧ ವ್ಯಾಪಾರಿಗಳ ಜೊತೆಗೆ ಇತರ ಗಣ್ಯರು.

ಸಮಾರಂಭದಲ್ಲಿ ಭಾಗವಹಿಸಿದ ಔಷಧ ವ್ಯಾಪಾರಿಗಳು:

ಗಂಗಾವತಿ:ರಾಜ್ಯ ನೋಂದಾಯಿತ ಫ಼ಾರ್ಮಸಿಸ್ಟಗಳ ಸಂಘದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ತಮ್ಮ 58 ನೇ ಜನ್ಮ ದಿನವಾದ ದಿ:29-09-2022 ರಂದು ಫ಼ಾರ್ಮಸಿಸ್ಟ ಡೇ ಆಚರಿಸಿ,ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಿಗೆ ಸನ್ಮಾನಿಸಿ ಗೌರವ ವ್ಯಕ್ತಪಡಿಸಲಾಯಿತು.

ಹುಬ್ಬಳ್ಳಿಯ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ವತಿಯಿಂದ “ವಾಣಿಜ್ಯ ರತ್ನ” ಪದವಿ ಪಡೆದ ಶ್ರೀನಿವಾಸ ರಾವ್ ನೆಕ್ಕ೦ಟಿ, ನುಗ್ಗೆಕಾಯಿ ಕೃಷಿ ಮತ್ತು ಅದರ ಉದ್ಯಮದ ಮೂಲಕ ವಿವಿಧ ಪ್ರಶಸ್ತಿಗಳನ್ನು ಪಡೆದಿರುವ ಬಸಯ್ಯಸ್ವಾಮಿ ಹಿರೇಮಠ ಬೂದಗುಂಪಾ,ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ವಿ.ವಿ.ಚಿನಿವಾಲರ್ ಮತ್ತು ಫೆಡರೇಶನ್ ಆಫ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಬೆಂಗಳೂರು ಈ ಸಂಸ್ಥೆಯ ನಿರ್ದೇಶಕರಾಗಿ ಆಯ್ಕೆಯಾಗಿರುವ ತ್ರಿವಿಕ್ರಮ ಜೋಷಿ ರಾಯಚೂರು ಇವರನ್ನು ಈ ಸಂಧರ್ಬದಲ್ಲಿ ಅಶೋಕಸ್ವಾಮಿ ಹೇರೂರ ಗೌರವಸಿದರು.

ಈ ಸಂಧರ್ಬದಲ್ಲಿ ಕಂಪ್ಲಿ ತಾಲೂಕು ರೇಲ್ವೆ ಹೋರಾಟ ಸಮಿತಿಯ ಅಧ್ಯಕ್ಷರಾದ ಹೇಮಯ್ಯ ಸ್ವಾಮಿ, ಕಾರ್ಯದರ್ಶಿ ಕಾಳಿಂಗವರ್ಧನ್ ರಾಮಸಾಗರ, ಫ಼ಾರ್ಮಸಿಸ್ಟಗಳಾದ ಹನುಮರೆಡ್ಡಿ ಮಾಲಿ ಪಾಟೀಲ್ ಗಂಗಾವತಿ, ಮುರಗೇಂದ್ರ ರಾಯಚೂರು, ಶರಣಪ್ಪ ಬೆಟಗೇರಿ ಕೊಪ್ಪಳ,ಕಾರಂಜಿ ವೀರಣ್ಣ ಕಾರಟಗಿ,ನಾಗರಾಜ ಹನುಮನಾಳ ಕುಷ್ಟಗಿ,

ಸೇ೦ಟ್ ಫ಼ಾಲ್ಸ್ ಫ಼ಾರ್ಮಸಿ ಕಾಲೇಜ್ ಪ್ರಿನ್ಸಿಪಾಲ್ ಮಂಜುನಾಥ ಹಿರೇಮಠ, ಉಪನ್ಯಾಸಕ ಆಬೀದ್ ಹುಸೈನ ವೇದಿಕೆಯ ಮೇಲೆ ಆಸೀನರಾಗಿದ್ದರು.

ಔಷಧ ವಿತರಕರಾದ ಶ್ರೀಮತಿ ಸಂಧ್ಯಾ ಪಾರ್ವತಿ, ಫ಼ಾರ್ಮಸಿಸ್ಟಗಳಾದ ಪಿ.ರುದ್ರಪ್ಪ ,ಎಸ್. ನಾಗರಾಜ ಸ್ವಾಮಿ,ಚಂದ್ರಶೇಖರಯ್ಯ ಹೇರೂರ ಮತ್ತಿತರರು ಉಪಸ್ಥಿತರಿದ್ದರು.ಕಲ್ಯಾಣರಾವ್ ಮತ್ತು ರಾಜಶೇಖರಯ್ಯ ಭಾನಾಪೂರ ಕಾರ್ಯಕ್ರಮವನ್ನು ನಿರ್ವಹಿಸಿದರು.

ನಗರ ಸಭಾ ಸದಸ್ಯರಾದ ಮನೋಹರಸ್ವಾಮಿ ಹಿರೇಮಠ,ಉಮೇಶ್ ಸಿಂಗನಾಳ,ವಾಸುದೇವ ನವಲಿ,ನವೀನ ಮಾಲಿ ಪಾಟೀಲ್ ಹಾಗೂ ವೀರಶೈವ-ಲಿಂಗಾಯತ ಮಹಾ ಸಭಾದ ಯುವ ಘಟಕದ ಅಧ್ಯಕ್ಷ ರಾಚಪ್ಪ ಸಿದ್ದಾಪೂರ ಉಪಸ್ಥಿತರಿದ್ದು , ಅಶೋಕಸ್ವಾಮಿ ಹೇರೂರ ಅವರಿಗೆ ಶುಭ ಕೋರಿದರು.

About The Author

Leave a Reply