ಗಂಗಾವತಿ: ಸ್ಥಳೀಯ ಶ್ರೀ ಚನ್ನಬಸವತಾತ ಯೋಗ ಮಂದಿರದಲ್ಲಿ ಇತ್ತೀಚಿಗೆ ಗಂಗಾವತಿ ತಾಲೂಕು ವೀರಶೈವ- ಲಿಂಗಾಯತ ನೌಕರರ ಘಟಕದ ವತಿಯಿಂದ ನೌಕರರು ಮತ್ತು ವಿವಿಧ ಕ್ಷೇತ್ರದಲ್ಲಿ ಹೆಸರು ಮಾಡಿದ ಸಮಾಜ ಬಾಂಧವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಭಾರತೀಯ ವೈದ್ಯಕೀಯ ಸಂಘದ ರಾಜ್ಯದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ವಿ.ವಿ. ಸಿನಿವಾಲರ್ ನೆರವೇರಿಸಿದರು.
ತಾಲೂಕು ವೀರಶೈವ-ಲಿಂಗಾಯತ ಮಹಾ ಸಭೆಯ ಅಧ್ಯಕ್ಷರಾದ ಅಶೋಕಸ್ವಾಮಿ ಹೇರೂರ,ಯುವ ಘಟಕದ ಅಧ್ಯಕ್ಷರಾದ ರಾಚಪ್ಪ ಸಿದ್ದಾಪೂರ,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶರಣೇಗೌಡ ಪೊಲೀಸ್ ಪಾಟೀಲ್ ಹೇರೂರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ವೀರಶೈವ-ಲಿಂಗಾಯತ ನೌಕರರ ಘಟಕದ ಗೌರವ ಅದ್ಯಕ್ಷ ಶರಣಯ್ಯ ಸ್ವಾಮಿ,ಅಧ್ಯಕ್ಷ ಶರಣಪ್ಪ ಹಕ್ಕಂಡಿ,
ಕಾರ್ಯದರ್ಶಿ ಶಿವಪ್ರಸಾದ,ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘ ಗಂಗಾವತಿ ಘಟಕದ ಕಾರ್ಯದರ್ಶಿ ರುದ್ರಗೌಡ ,ಯೋಗ ತರಬೇತಿದಾರರಾದ ಶಾಂತವೀರಯ್ಯ ಗಂಧದ ಮಠ,ನಿವೃತ್ತ ಶಿಕ್ಷಕರಾದ ಲಿಂಗನಗೌಡ್ರು ಮತ್ತಿತರರು ಉಪಸ್ಥಿತರಿದ್ದರು.