ಗಂಗಾವತಿ:ಗಂಗಾವತಿ-ಕಲಬುರ್ಗಿ ರಸ್ತೆಯ ಕನಕಗಿರಿ, ತಾವರಗೇರಿ,ಮುದಗಲ್,ಲಿಂಗಸಗೂರು,ತಿಂತಣಿ ಬ್ರಿಡ್ಜ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯ ರಸ್ತೆ ಉಬ್ಬುಗಳನ್ನು ಹಾಕಲಾಗಿದ್ದು ,ಅವುಗಳನ್ನು ತೆರುವುಗೊಳಿಸಲು ಅಪರ ಮುಖ್ಯ ಕಾರ್ಯದರ್ಶಿ ರಾಮಚಂದ್ರಪ್ಪ ಕೆ.ಎನ್. ಲೋಕೋಪಯೋಗಿ ಇಲಾಖೆ, ಬೆಂಗಳೂರು ಇವರು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು ಸೂಚಿಸಿದ್ದಾರೆ.
ಈ ಬಗ್ಗೆ ಕೊಪ್ಪಳ ಜಿಲ್ಲಾ ವಾಣಿಜ್ಯೊದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರು ಸರಕಾರಕ್ಕೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಈ ಸೂಚನೆ ಲೋಕೋಪಯೋಗಿ ಇಲಾಖೆಯಿಂದ ಜಾರಿಯಾಗಿದ್ದು, ಗಂಗಾವತಿ-ಮುದಗಲ್ ರಸ್ತೆಯಲ್ಲಿ ಈಗ ಟೋಲ್ ಗಳನ್ನು ಅಳವಡಿಸಿದ್ದು ,ಹಣ ಪಾವತಿಸಿದ ನಂತರವೂ ಸುಗಮ ಸಂಚಾರ ಲಭ್ಯವಿಲ್ಲದಾಗಿತ್ತು.ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವನ್ನು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರು ಭರವಸೆಯನ್ನು ಹೊಂದಿದ್ದಾರೆ.