December 23, 2024
Screenshot_20211106-141327_Google-1

ಗೋವಾ-ಕಾರಟಗಿ ರೇಲ್ವೆ:ಇಲಾಖೆಯಿಂದ ಸಕಾರಾತ್ಮಕ ಸ್ಪಂಧನೆ.

ಗಂಗಾವತಿ: ಕಾರಟಗಿ-ಹುಬ್ಬಳ್ಳಿ ರೇಲ್ವೆಯನ್ನು ಗೋವಾದವರೆಗೂ ವಿಸ್ತರಿಸಲು ಹುಬ್ಬಳ್ಳಿ ವಿಭಾಗದ ರೇಲ್ವೆ ಇಲಾಖೆ ಸಕಾರಾತ್ಮಕವಾಗಿ ಸ್ಪಂಧಿಸಿದೆ.

ಈ ಬಗ್ಗೆ ರೇಲ್ವೇ ಇಲಾಖೆಯ ಜನರಲ್ ಮ್ಯಾನೇಜರ್ ಸಂಜಯ ಕಿಶೋರ್ ಕೊಪ್ಪಳದ ಸಂಸದರಿಗೆ ಈ ಬಗ್ಗೆ ಪತ್ರ ಬರೆದು ತಿಳಿಸಿದ್ದಾರೆ.ಈ ವಿಷಯವನ್ನು ಸಂಸದರ ಸರಕಾರಿ ಕಾರ್ಯದರ್ಶಿ ಜೋಷಿಯವರು ಮಾಹಿತಿ ನೀಡಿದ್ದಾರೆ..

ಕಾರಟಗಿ-ಹುಬ್ಬಳ್ಳಿ ಎಕ್ಸ್‌ಪ್ರೆಸ್‌ ರೇಲ್ವೆ ಸಂಖ್ಯೆ 17303/17304 ಗಳನ್ನು ಗೋವಾದವರೆಗೂ ವಿಸ್ತರಿಸಲು ಶಿಫ಼ಾರಸ್ಸು ಮಾಡುವಂತೆ ಕೊಪ್ಪಳ ಜಿಲ್ಲಾ ವಾಣಿಜ್ಯೊದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ, ಸಂಸದ ಕರಡಿ ಸಂಗಣ್ಣ ಅವರಿಗೆ ಪತ್ರ ಬರೆದಿದ್ದರು.

ಈ ಬಗ್ಗೆ ಸಂತೋಷ ವ್ಯಕ್ತ ಪಡಿಸಿರುವ ಈ ಭಾಗದ ರೇಲ್ವೆ ಪ್ರಯಾಣಿಕರು ಶೀಗ್ರದಲ್ಲಿಯೇ ಗೋವಾ ರೇಲ್ವೆ ಆರಭವಾಗುವ ನಿರೀಕ್ಷೆಯಲ್ಲಿದ್ದಾರೆ.

About The Author

Leave a Reply