

ಗಂಗಾವತಿ: ಕಾರಟಗಿ-ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೇಲ್ವೆಯನ್ನು ಗೋವಾ ರಾಜ್ಯದವರೆಗೂ ವಿಸ್ಥರಿಸಲು ಕೊಪ್ಪಳ ಜಿಲ್ಲಾ ವಾಣಿಜ್ಯೊದ್ಯಮ ಮತ್ತು ಕೈಗಾರಿಕಾ ಸಂಸ್ಥೆ ಇಂದು ಶನಿವಾರ ಹುಬ್ಬಳ್ಳಿ ರೇಲ್ವೆ ವಿಭಾಗದ ವ್ಯವಸ್ಥಾಪಕರಾದ ಅರವಿಂದ ಮಲಖೇಡೆ ಅವರಿಗೆ ಮನವಿ ಸಲ್ಲಿಸಿತು.
ಸಂಘದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ನೇತೃತ್ವದಲ್ಲಿ ಅರವಿಂದ ಮಲಖೇಡೆ ಅವರನ್ನು ಭೇಟಿ ಮಾಡಿದ ನಗರಸಭಾ ಸದಸ್ಯ ಮನೋಹರ ಸ್ವಾಮಿ ಹಿರೇಮಠ, ಉದ್ಯಮಿಗಳಾದ ಮುಷ್ಟಿ ವಿರುಪಾಕ್ಷಪ್ಪ ,ಶ್ರೀನಿವಾಸ್ ರೈಸ್ ಇಂಡಸ್ಟ್ರಿ ರೈಸ್ ಅಗ್ರೋ ಇಂಡಸ್ಟ್ರಿಯ ಶ್ರೀನಿವಾಸ ನೆಕ್ಕ೦ಟಿ., ಮಂಜುಶ್ರೀ ರೈಸ್ ಇಂಡಸ್ಟ್ರಿಯಶ್ರೀನಿವಾಸ, ವಿಜಯ ಕುಮಾರ ರಾಯಕರ್, ಪಂಪಾಪತಿ ಗುಡದೂರ ಆರ್ಹಾಳ ಮುಂತಾದವರು ಉಪಸ್ಥಿತರಿದ್ದರು.
ಗೋವಾದವರೆಗೂ ರೇಲ್ವೆ ಸಂಚಾರವನ್ನು ವಿಸ್ತರಿಸುವುದರಿಂದಾಗುವ ಅನುಕೂಲಗಳ ಬಗ್ಗೆ ಅಶೋಕಸ್ವಾಮಿ ಹೇರೂರ ಅಧಿಕಾರಿಗಳಿಗೆ ವಿವರಿಸಿದರು. ಸಕಾರಾತ್ಮಕವಾಗಿ ಸ್ಪಂಧಿಸಿದ ಅಧಿಕಾರಿಗಳು ಮನವಿಯನ್ನು ಪರಿಶೀಲಿಸುವುದಾಗಿ ತಿಳಿಸಿದರು. ಈ ಸಂಧರ್ಬದಲ್ಲಿ ರೇಲ್ವೆ ಅಧಿಕಾರಿಗಳಾದ ಡಿ.ಓ.ಎಮ್.
ಕೃಷ್ಣ ಚೈತನ್ಯ ಮತ್ತು ಡಿ.ಸಿ.ಎಮ್. ಶ್ರೀಮತಿ ಹರಿತಾ ಹಾಜರಿದ್ದರು.
ಇತ್ತೀಚೆಗೆ ಕೊಪ್ಪಳ ಲೋಕಸಭಾ ಸದಸ್ಯರಾದ ಕರಡಿ ಸಂಗಣ್ಣ ಅವರು ವಿಭಾಗೀಯ ಜನರಲ್ ಮ್ಯಾನೇಜರ್ ಅವರಿಗೆ ಪತ್ರ ಬರೆದಿರುವುದನ್ನು ಅಶೋಕಸ್ವಾಮಿ ಹೇರೂರ ಇಲ್ಲಿ ಪ್ರಸ್ಥಾಪಿಸಿದರು.