ಲಿಂಗೈಕ್ಯ ಶ್ರೀ ಮಲ್ಲಿಕಾರ್ಜುನ ಮಹಾ ಸ್ವಾಮಿಗಳ ಸೇವೆ ಶ್ಲಾಘನೀಯ.
ಗಂಗಾವತಿ: ತಾಲೂಕಿನ ಮರಳಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಮಹಾ ಸ್ವಾಮಿಗಳ 7 ನೇ ಪುಣ್ಯ ತಿಥಿಯನ್ನು ಶನಿವಾರ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಹಾಜರಿದ್ದ ನ್ಯಾಯವಾದಿ ಮತ್ತು ಪತ್ರಿಕೋದ್ಯಮಿ ಅಶೋಕಸ್ವಾಮಿ ಹೇರೂರ ಮಾತನಾಡಿ, ಮಲ್ಲಿಕಾರ್ಜುನ ಮಹಾ ಸ್ವಾಮಿಗಳು ತಮ್ಮ ಜೋಳಿಗೆಯಿಂದ ಹಣ ಸಂಗ್ರಹಿಸಿ ರಾಜ್ಯದಲ್ಲಿ ಎಂಟು ಮಠಗಳನ್ನು ಕಟ್ಟಿದ್ದಾರೆ, ಸಾಹಿತಿಯೂ ಆಗಿದ್ದ ಅವರು ಸಾಕಷ್ಟು ಪುಸ್ತಕಗಳನ್ನು ಪ್ರಕಟಿಸಿದ್ದಾರೆ,ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ,ಬಡ ವಿದ್ಯಾರ್ಥಿಗಳಿಗೆ ಉಚಿತ ಪ್ರಸಾದ ನೀಡುವ ಮೂಲಕ ಹಲವಾರು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದರು. ಅವರ ಕಾರ್ಯವನ್ನು ಶ್ರೀಗಳ ಸಹೋದರರು ಮುಂದುವರೆಸಿಕೊಂಡು ಹೋಗುತ್ತಿರುವುದನ್ನು ಶ್ಲಾಘನೀಯ ಎಂದರು.
ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಸಿದ್ದರಾಮಸ್ವಾಮಿ, ನಗರ ಸಭಾ ಸದಸ್ಯ ಮನೋಹರ ಸ್ವಾಮಿ ಹಿರೇಮಠ ಮತ್ತಿತರರು ಮಾತನಾಡಿದರು.
ಈ ಸಂಧರ್ಬದಲ್ಲಿ ಸಿ.ಬಿ.ಎಸ್.ಸುದ್ದಿ ಮಾದ್ಯಮದ ಮಲ್ಲಿಕಾರ್ಜುನ ನಾಯಕ್ ಅವರನ್ನು
ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಮತಿ ಪಾರ್ವತಿ ಸಿದ್ರಾಮಸ್ವಾಮಿ ಕುಟುಂಬದ ಸದಸ್ಯರು,ವಿದ್ಯಾರ್ಥಿಗಳು,ಶಾಲಾ ಸಿಬ್ಬಂದಿ ಮತ್ತು ಭಕ್ತರು ಹಾಜರಿದ್ದರು.