December 23, 2024
IMG-20220714-WA0051

ಗಂಗಾವತಿಯ ಜುಲೈ ನಗರದ ಮೆ.ಸಂತೋಷ ಮೆಡಿಕಲ್ ಸ್ಟೋರ್ಸ್ ಪಕ್ಕದ ಕಟ್ಟಡದಲ್ಲಿ ನೂತನ ಆಸ್ಪತ್ರೆಯನ್ನು ಜನರಲ್ ಫ಼ಿಜಿಸಿಯನ್ ಡಾ.ಜಿತೇಂದ್ರ ಹಿರೇಮಠ ದಿನಾಂಕ:14-07-2022 ರಂದು ಗುರುವಾರ ಆರಂಭಿಸಿದರು.

ಕಾರಟಗಿ ತಾಲೂಕಿನ ಸಿದ್ದಾಪೂರ ಗ್ರಾಮದ ಪಾಲಾಕ್ಷಯ್ಯ ಹಿರೇಮಠ ಅವರ ಪುತ್ರ ಔಷಧ ವ್ಯಾಪಾರಿ ಶಿವಕುಮಾರ ಅವರ ಚಿರಂಜೀವಿಯಾದ ಡಾ.ಜಿತೇಂದ್ರ ಹಿರೇಮಠ ಎಮ್.ಬಿ.ಬಿ.ಎಸ್. ಪದವಿಯನ್ನು ದಾವಣಗೆರೆಯ ಜೆ.ಜೆ.ಎಮ್.ಕಾಲೇಜ್ ನಲ್ಲಿ ಮತ್ತು ಎಮ್.ಡಿ.(ಜನರಲ್ ಮೆಡಿಸಿನ್) ಪದವಿಯನ್ನು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಪೋರೈಸಿದ್ದಾರೆ.

ಈ ಸಂದರ್ಭದಲ್ಲಿ ಅಶೋಕಸ್ವಾಮಿ ಹೇರೂರ ಡಾ.ಜಿತೇಂದ್ರ ಅವರನ್ನು ಸನ್ಮಾನಿಸಿ,ಶುಭ ಹಾರೈಸಿದರು. ಅಶೋಕಸ್ವಾಮಿ ಹೇರೂರ ಅವರನ್ನು ಸಹ ಡಾ.ಜಿತೇಂದ್ರ ಗೌರವಿಸಿದರು.

ಈ ಸಂಧರ್ಭದಲ್ಲಿ ಪಾಲಾಕ್ಷಯ್ಯ ಹಿರೇಮಠ,ಶಿವಕುಮಾರ ಸಿದ್ದಾಪೂರ, ಮಂಜುನಾಥ ಬೂದಗುಂಪ,ಶ್ರೀಮತಿ ‌ಸಂದ್ಯಾ ಪಾರ್ವತಿ,ಬಸವರಾಜ ನಾಗಲೀಕರ್ ಮತ್ತು ಜಗದೀಶ್ ಬೀಳಗಿ ಉಪಸ್ಥಿತರಿದ್ದರು.

About The Author

Leave a Reply