

ಕೊಪ್ಪಳ: ಉದ್ದೇಶಿತ ದರೋಜಿ-ಗಂಗಾವತಿ ನೂತನ ರೇಲ್ವೆ ಲೈನ್ ಮಾರ್ಗದ ಸರ್ವೇ ಕಾರ್ಯ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಲಯದ ಕಚೇರಿಗೆ ಭುದವಾರ ಭೇಟಿ ನೀಡಿದ ಕೊಪ್ಪಳ ಲೋಕಸಭಾ ಸದಸ್ಯರಾದ ಸಂಗಣ್ಣ ಕರಡಿ ರೇಲ್ವೆ ಮಾರ್ಗದ ನಕ್ಷೆಯನ್ನು ಪರಿಶೀಲಿಸಿದರು.
ರೇಲ್ವೆ ವಿಭಾಗದ ಜನರಲ್ ಮ್ಯಾನೇಜರ್ ಮತ್ತಿತರ ಅಧಿಕಾರಿಗಳ ಜೊತೆಗೆ ಈ ಬಗ್ಗೆ ಚರ್ಚಿಸಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ನೂತನ ಮಾರ್ಗದಿಂದ ಗಂಗಾವತಿ, ಕನಕಗಿರಿ, ಕಾರಟಗಿ, ಸಿಂಧನೂರು ತಾಲುಕಿನ ಜನತೆ ನೇರವಾಗಿ ಬಳ್ಳಾರಿ,ಗುಂತಕಲ್,ಗು೦ಟೂರು, ಬೆಂಗಳೂರು,ಚನೈ ನಗರಗಳನ್ನು ಮತ್ತು ಧರ್ಮ ಕ್ಷೇತ್ರಗಳಾದ ತಿರುಪತಿ, ಶ್ರೀಶೈಲ ತಲುಪಲು ಸಹಾಯಕವಾಗಲಿದೆ ಎಂಬ ಸಂಸದರ ಅಭಿಪ್ರಾಯಕ್ಕೆ ಅಧಿಕಾರಿಗಳು ತಮ್ಮ
ಸಹಮತ ವ್ಯಕ್ತಪಡಿಸಿದ್ದಾರೆಂದು ತಿಳಿದು ಬಂದಿದೆ.
ಗಂಗಾವತಿ-ಬಾಗಲಕೋಟ ನೂತನ ರೇಲ್ವೆ ಲೈನ್ ಸರ್ವೇ ಬಗ್ಗೆಯೂ ಚರ್ಚಿಸಲಾಯಿತು.ಸಂಸದರ ಸರಕಾರದ ಕಾರ್ಯದರ್ಶಿ ಶ್ರೀನಿವಾಸ ಎನ್.ಜೋಷಿ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
