ಗಂಗಾವತಿ: ಗಂಗಾವತಿ-ದರೋಜಿ ನೂತನ ರೇಲ್ವೆ ಲೈನ್ ಸರ್ವೇಗಾಗಿ ಟೆ೦ಡರ್ ಕರೆಯಲಾಗಿದೆ.ಈ ಟೆ೦ಡರ್ ನ್ನು 08-08-2022 ರಂದು ತೆರೆಯಲಾಗುತ್ತಿದೆ.ಆ ನಂತರ ಸರ್ವೇ ಕಾರ್ಯ ಆರಂಭವಾಗುತ್ತದೆ ಎಂದು ಕೊಪ್ಪಳ ಜಿಲ್ಲಾ ವಾಣಿಜ್ಯೊದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಂಗಾವತಿ-ಬಾಗಲಕೋಟ ನೂತನ ರೇಲ್ವೆ ಲೈನ್ ಸರ್ವೇ ಕಾರ್ಯಕ್ಕೆ ದಿನಾಂಕ 12-07-2022 ರಂದು ಕೊಪ್ಪಳ ಸಂಸದರಾದ ಸಂಗಣ್ಣ ಕರಡಿ ರೇಲ್ವೆ ಮಂಡಳಿಗೆ ಪತ್ರ ಬರೆದಿದ್ದಾರೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ್ ಅವರು ಮಾಹಿತಿ ನೀಡಿದ್ದಾರೆ. ಮುಖ್ಯ ಮಂತ್ರಿಗಳು ಸಹ ಅನುಮೋದನೆ ನೀಡಿದ್ದು ಈ ಸಂಧರ್ಭದಲ್ಲಿ ಸಂಸದರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಅವರು ಕೃತಜ್ಞತೆಗಳನ್ನು ತಿಳಿಸಿದ್ದಾರೆ.