December 23, 2024
IMG-20220418-WA0000-1

ದರೋಜಿ-ಬಾಗಲಕೋಟ ನೂತನ ರೇಲ್ವೆ ಲೈನ್ ಹೋರಾಟಕ್ಕೆ ಚೇಂಬರ್ ಆಫ಼್ ಕಾಮರ್ಸ ಬೆಂಬಲ.

ಗಂಗಾವತಿ: ದರೋಜಿ-ಬಾಗಲಕೋಟ ನೂತನ ರೇಲ್ವೇ ಲೈನ್ ಮಾರ್ಗಕ್ಕೆ ಕೊಪ್ಪಳ ಜಿಲ್ಲಾ ಚೇಂಬರ್ ಆಫ್ ಕಾಮರ್ಸವತಿಯಿಂದ ಸಂಪೂರ್ಣ ಬೆಂಬಲ ನೀಡುವುದಾಗಿ ಸಂಸ್ಥೆಯ ಅದ್ಯಕ್ಷ ಅಶೋಕಸ್ವಾಮಿ ಹೇರೂರ ಹೇಳಿದರು.

ಈ ನೂತನ ರೇಲ್ವೆ ಲೈನ್ ಮಾರ್ಗ ರಚನೆಗಾಗಿ
ಕನಕಗಿರಿ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೂರ್ವ ಬಾವಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಈ ಸಂಧರ್ಭದಲ್ಲಿ ಗಿಣಿಗೇರಾ-ಗದ್ವಾಲ್‌ ರೇಲ್ವೆ ಆರಂಭವಾಗಲು,ನಿಯೋಗದ ಮೂಲಕ ದೇಹಲಿಗೆ ಹೋಗಿದ್ದನ್ನು ಅಶೋಕಸ್ವಾಮಿ ನೆನಪಿಸಿ,ದರೋಜಿ-ಗಂಗಾವತಿ ನೂತನ ರೇಲ್ವೆ ಲೈನ್ ಆರಂಭಿಸಲು ತಾವು ನಡೆಸಿದ ಪ್ರಯತ್ನವನ್ನು ವಿವರಿಸಿದರು.

ಉದ್ದೇಶಿತ ದರೋಜಿ-ಬಾಗಲಕೋಟ ರೇಲ್ವೆ ಆರಂಭದಿಂದ ಈ ಭಾಗದ ಬೆಳೆದ ದವಸ ಧಾನ್ಯಗಳನ್ನು ಸಾಗಿಸಲು ಅನುಕೂಲವಾಗುತ್ತದೆ. ಇಲ್ಲಿ ಹೆಚ್ಚಾಗಿ ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಳನ್ನು ಹೊರ ರಾಜ್ಯ ಹಾಗೂ ಹೊರ ದೇಶಗಳಿಗೆ ರವಾನಿಸಲು ಅನುಕೂಲವಾಗುತ್ತದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ್,ಶಾಸಕ ಬಸವರಾಜ ದಡೆಸೂಗೂರ, ತುಂಗಭದ್ರಾ ಕಾಡಾ ಮಾಜಿ ಅದ್ಯಕ್ಷ ಎಚ್.ಗಿರೆಗೌಡ,ಚನ್ನಬಸಯ್ಯಸ್ವಾಮಿ ಕನಕಗಿರಿ, ಹನುಮಂತಪ್ಪ ನಾಯಕ,ಅಕ್ತರಸಾಬ ಮುಂತಾದವರು ಮಾತನಾಡಿದರು.

ಔಷಧ ವ್ಯಾಪಾರಿಗಳಾದ ಗಂಗಾಧರ ಕಲಬಾಗಿಲಮಠ, ಅನಿಲ್ ಕುಮಾರ್ ಬಿಜ್ಜಳ,ಪಶುಪತಿ ಪಾಟೀಲ್,ಸ್ಥಳೀಯರಾದ ದುರ್ಗಾದಾಸ ಯಾದವ ,ಉದ್ಯಮಿಗಳಾದ ಸಿಂಗನಾಳ ಪಂಪಾಪತಿ,ನ್ಯಾಯವಾದಿ ಅರ್.ಪಿ.ರೆಡ್ಡಿ , ಕನಕಗಿರಿ, ಹೆಬ್ಬಾಳ ಶ್ರೀಗಳು, ಸುಳೇಕಲ್ ಶರಣರು ಭಾಗವಹಿಸಿದ್ದರು.

About The Author

Leave a Reply