ಗಂಗಾವತಿ: ನಗರದ ಬಸಯ್ಯಸ್ವಾಮಿ ಬೂದಗುಂಪಾ ಹಿರೇಮಠ ಅವರಿಗೆ 2021-2022 ನೇ ಸಾಲಿನ ಇಟಿ ಬಿಸಿನೆಸ್ ಎಕ್ಸಲೆನ್ಸ ಅವಾರ್ಡ ದೊರಕಿದೆ.
ಉದ್ಯಮದಲ್ಲಿನ ಉತ್ಕೃಷ್ಟತೆ, ನವೀನತೆ, ಉತ್ತಮ ಅಭ್ಯಾಸಗಳು ಮತ್ತು ಅತ್ಯುತ್ತಮ ಪ್ರದರ್ಶನಗಳನ್ನು ಈ ಪ್ರಶಸ್ತಿ ಗುರುತಿಸುತ್ತದೆ.ಅತ್ಯುತ್ತಮ ವ್ಯಾಪಾರ-ಉದ್ಯಮಗಳನ್ನು ರೂಪಿಸಿ, ಭಾರತದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ ವೃತ್ತಿಪರರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
2021-22ನೇ ಸಾಲಿನ ಇಟಿ ಬ್ಯುಸಿನೆಸ್ ಅತ್ಯುತ್ತಮ ಪ್ರಶಸ್ತಿಯನ್ನು 28ನೇ ಮಾರ್ಚ್ 2022 ರಂದು, NOFH PVT LTD ವತಿಯಿಂದ ಬಸಯ್ಯಸ್ವಾಮಿ ಹಿರೇಮಠ ಅವರಿಗೆ ಪ್ರಧಾನ ಮಾಡಲಾಗಿದೆ.
ವರ್ಷದ ಅತ್ಯಂತ ನವೀನ ಕೃಷಿ ಉದ್ಯಮಿ ಎಂಬ ಗೌರವಕ್ಕೆ ಪಾತ್ರರಾಗಿರುವ ಹಿರೇಮಠ,ಕೊಪ್ಪಳ ಜಿಲ್ಲೆಯಲ್ಲಿ ಕೃಷಿ ಉದ್ಯಮಶೀಲತೆಯಲ್ಲಿ ಇಟಿಯಿಂದ ಇಂತಹ ಪ್ರಶಸ್ತಿ ಪಡೆದ ಮೊದಲಿಗರಾಗಿದ್ದಾರೆ.