ಗಂಗಾವತಿ-ದರೋಜಿ ರೇಲ್ವೆ ಲೈನ್: ಮ್ಯಾಚಿಂಗ್ ಗ್ರ್ಯಾಂಟ್ ಗೆ ಸ್ಪಂಧನೆ.
ಗಂಗಾವತಿ: ಗಂಗಾವತಿ ರೇಲ್ವೆ ನಿಲ್ದಾಣದಿಂದ ದರೋಜಿ ಗ್ರಾಮದ ರೇಲ್ವೆ ನಿಲ್ದಾಣದವರಿಗೆ ರೇಲ್ವೆ ಮಾರ್ಗ ಸಂಪರ್ಕ ಕಾಮಗಾರಿಗೆ ರಾಜ್ಯದಿಂದ ಮ್ಯಾಚಿಂಗ್ ಗ್ರ್ಯಾಂಟ್ ನೀಡುವ ಬಗ್ಗೆ ಮುಖ್ಯ ಮಂತ್ರಿಯವರ ಕಚೇರಿಯಿಂದ ಸ್ಪಂಧನೆ ದೊರಕಿದೆ.
ಈ ಬಗ್ಗೆ ಕೊಪ್ಪಳ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರ ಮನವಿಗೆ ಸ್ಪಂದಿಸಿ, ಪತ್ರ ಬರೆದಿರುವ ಮುಖ್ಯ ಮಂತ್ರಿಯವರ ಆಧೀನ ಕಾರ್ಯಧರ್ಶಿ ಸಿ.ವಿ.ಹರಿದಾಸನ್, ಈ ಬಗ್ಗೆ ಕ್ರಮಕೈಗೊಂಡು, ಅಶೋಕಸ್ವಾಮಿ ಹೇರೂರ ಅವರಿಗೆ ಮಾಹಿತಿ ನೀಡುವಂತೆ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ, ಮೂಲ ಸೌಲಭ್ಯಗಳ ಅಭಿವೃದ್ಧಿ ಇಲಾಖೆ, ವಿಕಾಸ ಸೌಧ ಇವರಿಗೆ ತಿಳಿಸಿದ್ದಾರೆ.
ಈ ಬಗ್ಗೆ ಗಂಗಾವತಿ, ಕನಕಗಿರಿ, ಕಂಪ್ಲಿ ಮತ್ತು ಬಳ್ಳಾರಿ ಶಾಸಕರು ಮುತುವರ್ಜಿವಹಿಸಬೇಕೆಂದು ಹೇರೂರ, ಪತ್ರಿಕಾ ಪ್ರಕಟಣೆಯ ಮೂಲಕ ಕೋರಿದ್ದಾರೆ.