ರೇಲ್ವೆ ಮಾಚಿಂಗ್ ಗ್ರ್ಯಾಂಟ್,ಸಿಗದ ಅನುದಾನ:ಅಸಮಧಾನ.
ಗಂಗಾವತಿ: ಗಂಗಾವತಿ-ದರೋಜಿ ನೂತನ ರೇಲ್ವೆ ಮಾರ್ಗ ರಚನೆಗೆ ರಾಜ್ಯ ಸರಕಾರದ ಬಜೆಟ್ ನಲ್ಲಿ ಮ್ಯಾಚಿಂಗ್ ಗ್ರ್ಯಾಂಟ್ ನೀಡದಿರುವುದಕ್ಕೆ ಕೊಪ್ಪಳ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅದ್ಯಕ್ಷ ಅಶೋಕಸ್ವಾಮಿ ಹೇರೂರ ಅಸಮಧಾನಗೊಂಡಿದ್ದಾರೆ.
ಈ ಪ್ರದೇಶದ ಶಾಸಕರು ರಾಜ್ಯ ಸರಕಾರದಿಂದ ಈ ನೂತನ ರೇಲ್ವೆ ಕಾಮಗಾರಿಗೆ ಹಣ ಮಂಜೂರು ಮಾಡಿಸಿಕೊಳ್ಳಲು ವಿಫ಼ಲರಾಗಿದ್ದಾರೆಂದು ಅವರು ಅಪಾದಿಸಿದ್ದಾರೆ. ಬಳ್ಳಾರಿ ನಗರ,ಬಳ್ಳಾರಿ ಗ್ರಾಮೀಣ, ಕಂಪ್ಲಿ,ಕನಕಗಿರಿ ಮತ್ತು ಗಂಗಾವತಿ ಶಾಸಕರಿಗೆ ಈ ಬಗ್ಗೆ ಸಾಕಷ್ಟು ಪತ್ರ ಬರೆದರೂ ಪ್ರಯೋಜನವಾಗಿಲ್ಲ ಎಂದವರು ಬೇಸರ ವ್ಯಕ್ತಪಡಿಸಿದ್ದಾರೆ.
ಗಂಗಾವತಿ ನಗರದಲ್ಲಿ ಸಹಾಯಕ ಪ್ರಾದೇಶಿಕ ಅಧಿಕಾರಿಗಳ ಕಚೇರಿ (ಎ.ಆರ್.ಟಿ.ಓ.),ಸಹಾಯಕ ಆಯುಕ್ತರ ಕಚೇರಿ, ತಾಲೂಕಿನ ವ್ಯಾಪ್ತಿಯಲ್ಲಿ ಕರಡಿಧಾಮ ಮತ್ತು ಆನೆಗುಂದಿ ನದಿಗೆ ಸ್ಟೀಲ್ ಬ್ರಿಡ್ಜ್ ನಿರ್ಮಿಸಲು ಅನುದಾನ ಸಿಗದಿರುವುದರಿಂದ ಗಂಗಾವತಿ, ಕನಕಗಿರಿ ಮತ್ತು ಕಾರಟಗಿ ತಾಲೂಕಿಗೆ ಬಹು ದೊಡ್ಡ ಅನ್ಯಾಯವಾಗಿದೆ ಎಂದವರು ಹೇಳಿದ್ದಾರೆ.