

ದರೋಜಿ ರೇಲ್ವೆ ಲೈನ್:ಕಲ್ಯಾಣ ಕರ್ನಾಟಕ ಚೇಂಬರ್ ಆಫ಼್ ಕಾಮರ್ಸ ಬೆಂಬಲ.
ಕೊಪ್ಪಳ:ಉದ್ದೇಶಿತ ಗಂಗಾವತಿ-ದರೋಜಿ ನೂತನ ರೇಲ್ವೆ ಮಾರ್ಗ ರಚನೆಗೆ ಕ್ರಮ ಕೈಕೊಳ್ಳಬೇಕೆಂದು ಕಲ್ಯಾಣ ಕರ್ನಾಟಕ ಚೇಂಬರ್ ಆಫ್ ಕಾಮರ್ಸ & ಇಂಡಸ್ಟ್ರಿ ಕಲಬುರ್ಗಿ ಈ ಸಂಸ್ಥೆಯಿಂದ ರೇಲ್ವೆ ಇಲಾಖೆಯನ್ನು ಒತ್ತಾಯಿಸಲಾಗಿದೆ.
ಈ ಬಗ್ಗೆ ರೇಲ್ವೆ ಸಚಿವ ಅಶ್ವಿನ್ ವೈಷ್ಣವ ಅವರಿಗೆ ಪತ್ರ ಬರೆದುರುವ ಸಂಸ್ಥೆಯ ಅದ್ಯಕ್ಷ ಪ್ರಶಾಂತ ಎಸ್.ಮಾನಕರ್ ಮತ್ತು ಗೌರವ ಕಾರ್ಯದರ್ಶಿ ಶರಣಬಸಪ್ಪ ಎಮ್.ಪಪ್ಪಾ ಗಂಗಾವತಿ ಭಾಗದಲ್ಲಿ ಅತ್ಯಧಿಕವಾಗಿ ಬೆಳೆಯುವ ಭತ್ತ ಹಾಗೂ ಅದರ ಉತ್ಪನ್ನಗಳನ್ನು ನೆರೆ ಜಿಲ್ಲೆ , ರಾಜ್ಯ ಮತ್ತು ವಿದೇಶಗಳಿಗೆ ಕಳುಹಿಸಲಾಗುತ್ತಿದೆ.
ಸದ್ಯ ಬಳ್ಳಾರಿ, ಗುಂತಕಲ್ , ಬೆಂಗಳೂರು, ಚನೈ ಮತ್ತು ಹೊರ ದೇಶಗಳಿಗೆ ಭತ್ತ ಹಾಗೂ ಅಕ್ಕಿಯನ್ನು ಗಂಗಾವತಿ-ಗಿಣಿಗೇರಾ-ದರೋಜಿ-ಬಳ್ಳಾರಿ ಮೂಲಕ ಕಳುಹಿಸಲಾಗುತ್ತಿರುವುದರಿಂದ 129 ಕಿ.ಮಿ.ಕ್ರಮಿಸಿ ಸಾಗಬೇಕಾಗಿರುವುದರಿಂದ ಸಮಯ,ಇಂಧನ ಮತ್ತು ಸಾಗಾಣಿಕೆಯ ಧರ ಹೇರಳವಾಗುತ್ತಿದ್ದು , ಇದರಿಂದ ಅರ್ಥಿಕ ಹೊರೆಯಾಗುತ್ತಿದೆ.
ಗಂಗಾವತಿ-ದರೋಜಿ ರೇಲ್ವೆ ಲೈನ್ ಹೊಸದಾಗಿ ನಿರ್ಮಾಣವಾದರೆ,50 ಕಿಮಿ.ಮಾತ್ರ ಅಂತರವಾಗುವುದರಿಂದ 80 ಕಿ.ಮಿ.ಅಂತರ ಕಡಿಮೆಯಾಗುತ್ತದೆ.ಗಂಗಾವತಿ ನಗರದಲ್ಲಿ ನೂರಾರು ರೈಸ್ ಮಿಲ್ ಗಳಿದ್ದು , ವಾಣಿಜ್ಯೋದ್ಯಮ ಚಟುವಟಿಕೆಗಳನ್ನು ಉತ್ತೇಜಿಸಲು ಈ ನೂತನ ಮಾರ್ಗದಿಂದ ಅನುಕೂಲವಾಗಲಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಕೊಪ್ಪಳ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅದ್ಯಕ್ಷ ಅಶೋಕಸ್ವಾಮಿ ಹೇರೂರ ಅವರ ಪತ್ರಕ್ಕೆ ಬೆಂಬಲಿಸಿ, ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಈ ಪತ್ರ ಬರೆದಿದೆ.