ಸಾರಿಗೆ ಕಛೇರಿ ಆರಭ:ಪರಿಶೀಲಿಸಲು ಆದೇಶ :
ಗಂಗಾವತಿ: ನಗರದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ (ಎ.ಆರ್.ಟಿ.ಓ) ಆರಂಭಿಸುವ ವಿಷಯವನ್ನು ಪರಿಶೀಲಿಸಿ, ನಿಯಮನುಸಾರ ಕ್ರಮ ಕೈಗೊಳ್ಳಲು ಮುಖ್ಯ ಮಂತ್ರಿಯವರ ಆಡಳಿತ ವಿಭಾಗದ ಆಧೀನ ಕಾರ್ಯದರ್ಶಿ ಸಿ.ವಿ.ಹರಿದಾಸನ್ ಆದೇಶ ಮಾಡಿದ್ದಾರೆ.
ಈ ಬಗ್ಗೆ ಸಾರಿಗೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರಿಗೆ ಪತ್ರ ಬರೆದಿರುವ ಅವರು, ಕ್ರಮ ಕೈಗೊಂಡು ಕೊಪ್ಪಳ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.
ಗಂಗಾವತಿ ನಗರದಿಂದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ,ಕೊಪ್ಪಳಕ್ಕೆ ವರ್ಗವಾದಾಗಿನಿಂದಲೂ ಈ ಬಗ್ಗೆ ಸಂಸ್ಥೆಯ ಅದ್ಯಕ್ಷ ಅಶೋಕಸ್ವಾಮಿ ಹೇರೂರ ರಾಜ್ಯ ಸರಕಾರಕ್ಕೆ ಪತ್ರ ಬರೆಯುತ್ತಾ ಬಂದಿದ್ದು , ಇಲಾಖೆಯಿಂದ ಸಕಾರಾತ್ಮಕವಾಗಿ ಕ್ರಮ ಜರುಗುವ ಆಶಾ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.
ಈ ಭಾಗದ ಶಾಸಕರು ಸಹ ಈ ನಿಟ್ಟಿನಲ್ಲಿ ಮುತುರ್ವಜಿವಹಿಸಿದರೆ ಕಚೇರಿ ಆರಂಭವಾಗುವದರಲ್ಲಿ ವಿಳಂಭವಾಗುವುದಿಲ್ಲ. ಅದಕ್ಕಾಗಿ ಈ ನಿಟ್ಟಿನಲ್ಲಿ ಶಾಸಕದ್ವಯರು ಕಾಳಜಿವಹಿಸಬೇಕೆಂದು ಪತ್ರಿಕಾ ಪ್ರಕಟಣೆಯ ಮೂಲಕ ಕೋರಿದ್ದಾರೆ.