July 12, 2025
IMG-20220121-WA0000

ಗಂಗಾವತಿ ಆರ್.ಟಿ.ಓ.ಕಚೇರಿ ಆರಂಭ ಸನ್ನಿಹಿತ ?

ಗಂಗಾವತಿ: ಗಂಗಾವತಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯನ್ನು (ಆರ್.ಟಿ.ಓ)

ಕೊಪ್ಪಳ ಜಿಲ್ಲಾ ಕೇಂದ್ರವಾದ ಹಿನ್ನೆಲೆಯಲ್ಲಿ ಅತ್ಯವಸರದಲ್ಲಿ ತಡೆ ಆಜ್ನೆ ಇದ್ದಾಗ್ಯೂ ಕೊಪ್ಪಳಕ್ಕೆ ಸ್ಥಳಾಂತರಗೊಳಿಸಲಾಗಿತ್ತು.

ಆರ್.ಟಿ.ಓ.ಕಚೇರಿಗೆ ಅತ್ಯಧಿಕ ವರಮಾನ ಗಂಗಾವತಿ,ಕಾರಟಗಿ ಮತ್ತು ಕನಕಗಿರಿ ತಾಲೂಕುಗಳಿಂದ ಸಂಧಾಯವಾಗುತ್ತಿರುವ ಹಿನ್ನೆಲೆಯಲ್ಲಿ ಗಂಗಾವತಿ ನಗರದಲ್ಲಿ ಸಹಾಯಕ ಪ್ರಾದೇಶಿಕ ಕಚೇರಿ(ಎ.ಆರ್.ಟಿ.ಓ) ಆರಂಭಿಸಬೇಕೆಂದು ಕೊಪ್ಪಳ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅದ್ಯಕ್ಷ ಅಶೋಕಸ್ವಾಮಿ ಹೇರೂರ ಮುಖ್ಯ ಮಂತ್ರಿಗಳಿಗೆ ಪತ್ರ ಬರೆದಿದ್ದರು.

ಈ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿಯವರ ಆಧೀನ ಕಾರ್ಯದರ್ಶಿಯವರು ನಿಯಮನುಸಾರ ಕ್ರಮ ಕೈಗೊಳ್ಳಲು ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

ಅದರಂತೆ ಸೂಕ್ತ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಕಲಬುರ್ಗಿ ವಿಭಾಗದ ಜಂಟಿ ಸಾರಿಗೆ ಆಯುಕ್ತರಿಗೆ, ರಾಜ್ಯದ ಸಾರಿಗೆ ಆಯುಕ್ತರು ಆದೇಶ ಮಾಡಿದ್ದಾರೆ.

ಈ ವಿಷಯವನ್ನು ಪತ್ರಿಕಾ ಪ್ರಕಟಣೆಯಲ್ಲಿ  ತಿಳಿಸಿರುವ ಹೇರೂರ, ಗಂಗಾವತಿ ಮತ್ತು ಕನಕಗಿರಿ ಶಾಸಕರು ಪ್ರಯತ್ನ ಮಾಡಿದರೆ ಗಂಗಾವತಿ ನಗರದಲ್ಲಿ ಎ.ಆರ್.ಟಿ.ಓ. ಕಚೇರಿ ಆರಂಭ ವಾಗುವುದು ವಿಳಂಭವಾಗುವುದಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ 1998 ರಿಂದಲೂ ಕೊಪ್ಪಳ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆ  ಪ್ರಯತ್ನಿಸುತ್ತಿರುವುದನ್ನು ಅಶೋಕಸ್ವಾಮಿ ಹೇರೂರ ಉಲ್ಲೇಖಿಸಿದ್ದು , ಜನ ಪ್ರತಿನಿಧಿಗಳ ಇಚ್ಚಾ ಶಕ್ತಿಯ ಕೊರತೆ ಕಾಡುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

About The Author

Leave a Reply