

ಬಸಯ್ಯ ಸ್ವಾಮಿಗೆ ಸಾಧಕ ರೈತ ಪ್ರಶಸ್ತಿ
ಗಂಗಾವತಿ: ವಿಜಯ ಕರ್ನಾಟಕ ದಿನ ಪತ್ರಿಕೆಯ “ನಮ್ಮ ರೈತ ನಮ್ಮ ಹೆಮ್ಮೆ” ಕಾರ್ಯಕ್ರಮದಲ್ಲಿ
ನಗರದ ಪ್ರಗತಿಪರ ರೈತ ಬಸಯ್ಯ ಸ್ವಾಮಿ ಬೂದಗುಂಪಾ ಹಿರೇಮಠ ಜಿಲ್ಲಾ ಮಟ್ಟದ “ಸಾಧಕ ರೈತ ಪ್ರಶಸ್ತಿ” ಗೆ ಭಾಜನರಾಗಿದ್ದಾರೆ.
ರಾಯಚೂರು ಕೃಷಿ ವಿಶ್ವ ವಿದ್ಯಾಲಯದಿಂದ “ರೈತ ರತ್ನ” ಪ್ರಶಸ್ತಿ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವ ವಿದ್ಯಾಲಯದಿಂದ “ಫ಼ಲ ಶ್ರೇಷ್ಠ ಪ್ರಶಸ್ತಿ” ಪಡೆದ ಬಸಯ್ಯ ಸ್ವಾಮಿ ನುಗ್ಗೆ ಮುಂತಾದ ಬೆಳೆಗಳನ್ನು ಸಾವಯವ ಕೃಷಿ ಮೂಲಕ ಬೆಳೆಯುತ್ತಿದ್ದಾರೆ.