ಸಾಕ್ ಕಮಿಟಿಗೆ ಬಸಯ್ಯ ಸ್ವಾಮಿ ನೇಮಕ
ಗಂಗಾವತಿ: ನಗರದ ನಿವಾಸಿ,ಪ್ರಗತಿಪರ ರೈತರಾದ ಬಸಯ್ಯ ಸ್ವಾಮಿ ಬೂದಗುಂಪಾ ಹೀರೆಮಠ ಅವರು ರಾಯಚೂರು ಕೃಷಿ ವಿಜ್ನಾನ ವಿಶ್ವವಿದ್ಯಾಲಯದಿಂದ ಸೈ೦ಟಿಫ಼ಿಕ್ ಅಡ್ವಜೈರಿ ಕಮಿಟಿ (ಸಾಕ್) ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಹಿರೇಮಠ ಅವರು ಇಂಜಿನಿಯರಿಂಗ್ ವಿಜ್ನಾನ ಪದವೀಧರರಾಗಿದ್ದು, ರಾಯಚೂರು ಕೃಷಿ ವಿಶ್ವವಿದ್ಯಾಲಯದಿಂದ “ಕೃಷಿ ರತ್ನ” ಮತ್ತು ಬಾಗಲಕೋಟ ತೋಟಗಾರಿಕೆ ವಿಶ್ವವಿದ್ಯಾಲಯದಿಂದ “ಫ಼ಲ ಶ್ರೇಷ್ಠ” ಪ್ರಶಸ್ತಿ ಪಡೆದಿದ್ದಾರೆ.
ಮೂಲತಃ ಕಾರಟಗಿ ತಾಲೂಕಿನ ಬೂದಗುಂಪಾ ಗ್ರಾಮದ ಬಸಯ್ಯ ಸ್ವಾಮಿ ಕುಷ್ಟಗಿ ತಾಲೂಕಿನ ತಾವರಗೇರಾ ಗ್ರಾಮದ ಹತ್ತಿರದಲ್ಲಿರುವ ಸ್ವಂತ ಭೂಮಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಹಾಗೂ ಸಾವಯವ ಪದ್ದತಿಯಲ್ಲಿ ನುಗ್ಗೆ ಕೃಷಿಯಲ್ಲಿ ತೊಡಗಿದ್ದಾರೆ.