July 14, 2025
IMG-20211226-WA0000

ಗಂಗಾವತಿ: ಸಾವಯವ ಪದ್ದತಿ ವ್ಯವಸಾಯದಲ್ಲಿ ಹೆಸರು ಮಾಡುತ್ತಿರುವ ನಗರದ ನಿವಾಸಿ ಬಸಯ್ಯ ಸ್ವಾಮಿ ಬೂದಗುಂಪಾ ಹೀರೆಮಠ ಅವರಿಗೆ ಬಾಗಲಕೋಟ ತೋಟಗಾರಿಕೆ ಯುನಿವರ್ಸಿಟಿಯಿಂದ ಫ಼ಲ ಶ್ರೇಷ್ಠ ಪ್ರಶಸ್ತಿ ದೊರಕಿದೆ.

ಕಂಪ್ಯೂಟರ್‌ ಇಂಜಿನಿಯರಿಂಗ್ ಬಿಟ್ಟು ಕೃಷಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ಬಸಯ್ಯ ಸ್ವಾಮಿ ಮೂಲತಃ ಕಾರಟಗಿ ತಾಲೂಕಿನ ಬೂದಗುಂಪಾ ಗ್ರಾಮದವರಾಗಿದ್ದು , ಕುಷ್ಟಗಿ ತಾಲೂಕಿನ ತಾವರಗೇರೆ ಹತ್ತಿರದ ತಮ್ಮ ಸ್ವಂತ ಭೂಮಿಯಲ್ಲಿ ನುಗ್ಗೆ ಮತ್ತಿತರರ ಬೆಳೆಗಳನ್ನು ಬೆಳೆಯುತ್ತಿದ್ದು ,ದೇಶ-ವಿದೇಶಗಳಿಗೆ ತಮ್ಮ ಉತ್ಪನ್ನಗಳನ್ನು ರಫ಼್ತು ಮಾಡುತ್ತಿದ್ದಾರೆ.

ತೀರಾ ಇತ್ತೀಚೆಗೆ ರಾಯಚೂರು ಕೃಷಿ ವಿಶ್ವವಿದ್ಯಾಲಯದಿಂದ ಕೃಷಿ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

About The Author

Leave a Reply