July 13, 2025
IMG-20211106-WA0000-1

ಹುಬ್ಬಳ್ಳಿ-ಅಯೋದ್ಯ ವಾಯಾ ಗಿಣಿಗೇರಾ ರೈಲು ! ಹುಬ್ಬಳ್ಳಿ ರೇಲ್ವೆ ಜನರಲ್ ಮ್ಯಾನೇಜರ್ ಪತ್ರ.

ಕೊಪ್ಪಳ: ವಾರಕ್ಕೊಮ್ಮೆ ಹುಬ್ಬಳ್ಳಿ-ಅಯೋದ್ಯ ವಾಯಾ ಗಿಣಿಗೇರಾ ವಿಶೇಷ ರೈಲು ಅರಂಭಿಸಲು ಹುಬ್ಬಳ್ಳಿ ವಿಭಾಗದ ರೇಲ್ವೆ ಜನರಲ್ ಮ್ಯಾನೇಜರ್ ಸಂಜಯ್ ಕಿಶೋರ್ ಭಾರತ ರೇಲ್ವೆ ಬೋರ್ಡಗೆ ಪತ್ರ ಬರೆದಿದ್ದಾರೆ.


ಕೊಪ್ಪಳ ಕ್ಷೇತ್ರದ ಸಂಸದ ಸಂಗಣ್ಣ ಕರಡಿಯವರ ಪತ್ರಕ್ಕೆ ಉತ್ತರಿಸಿರುವ ರೇಲ್ವೆ ಇಲಾಖೆಯ ಜನರಲ್ ಮ್ಯಾನೇಜರ್,ಈ ವಿಶೇಷ ರೈಲು ಆರಂಭಿಸಲು ಉತ್ಸುಕರಾಗಿದ್ದಾರೆ.


ಈ ಮಾಹಿತಿಯನ್ನು ತುಂಗಭದ್ರಾ ಕಾಡಾ ಮಾಜಿ ಅದ್ಯಕ್ಷ ಗಿರೇಗೌಡ ಹೊಸ್ಕೇರಾ ಹಂಚಿಕೊಂಡಿದ್ದು ,  ಈ ನೂತನ ರೈಲು ಆರಂಭದಿಂದ ಈ ಭಾಗದ ಪ್ರವಾಸೋದ್ಯಮದ ಬೆಳವಣಿಗೆ ಆಗಲಿದೆ ಎಂದು ಕೊಪ್ಪಳ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅದ್ಯಕ್ಷ ಅಶೋಕಸ್ವಾಮಿ ಹೇರೂರ ಹೇಳಿದ್ದಾರೆ.


ಉತ್ತರ ಭಾರತದ ಹನುಮ ಭಕ್ತರು ರಸ್ತೆ ಮಾರ್ಗದಲ್ಲಿ ಸುಧೀರ್ಘ ಪ್ರಯಾಣದ ಮೂಲಕ ಕಿಷ್ಕಿಂದಕ್ಕೆ ಭೇಟಿ ನೀಡುತ್ತಿದ್ದು ,ನೂತನ ಅಯೋದ್ಯಾ-ಕಿಷ್ಕಿಂದ ರೈಲ್ವೆ ಆರಂಭವಾದರೆ ನಿರಾಳವಾದ ಪ್ರಯಾಣ ಪ್ರವಾಸಿಗರಿಗೆ ಸಿಗಲಿದೆ ಎಂದು ಹೇರೂರ ಹೇಳಿದ್ದಾರೆ.


ಈ ಸಂಧರ್ಭದಲ್ಲಿ ಗಂಗಾವತಿ-ದರೋಜಿ ನೂತನ ರೇಲ್ವೆ ಲೈನ್ ಮಾರ್ಗಕ್ಕೆ ಅನುದಾನ ಪಡೆಯಬೇಕೆಂದು ಅಶೋಕಸ್ವಾಮಿ, ಸಂಸದರನ್ನು ಒತ್ತಾಯಿಸಿದ್ದಾರೆ.

About The Author

Leave a Reply