July 13, 2025
IMG-20211106-WA0000

ಅಯೋದ್ಯಾ -ಕಿಷ್ಕಿಂದಾ ರೈಲು ಪರಿಶೀಲನೆ: ರೇಲ್ವೆ ಜನರಲ್ ಮ್ಯಾನೇಜರ್

ಅಯೋದ್ಯಾ-ಕಿಷ್ಕಿಂದಾ (ಗಂಗಾವತಿ) ರೇಲ್ವೆ ಆರಂಭಿಸುವ ಕುರಿತು ಸದ್ಯದ ನಿಯಮಗಳ ಅನುಸಾರ ಕ್ರಮ ಕೈಕೊಳ್ಳುವುದಾಗಿ ಹುಬ್ಬಳ್ಳಿ ವಿಭಾಗದ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ತಿಳಿಸಿದ್ದಾರೆ.

ಕೊಪ್ಪಳ ಕ್ಷೇತ್ರದ ಸಂಸದ ಸಂಗಣ್ಣ ಕರಡಿಯವರ  ಪತ್ರಕ್ಕೆ ಉತ್ತರಿಸಿರುವ ಜನರಲ್ ಮ್ಯಾನೇಜರ್ ಈ ವಿಷಯ ತಿಳಿಸಿದ್ದಾರೆ.ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ್ ಈ ಬಗ್ಗೆ ಕರಡಿ ಸಂಗಣ್ಣನವರಿಗೆ ಮನವಿ ಸಲ್ಲಿಸಿದ್ದರು.

ಅಯೋದ್ಯಾ-ಕಿಷ್ಕಿಂದಾ ರೇಲ್ವೆ ಆರಂಭದಿಂದ ಪ್ರವಾಸೋದ್ಯಮ ಬೆಳವಣಿಗೆಯಾಗುತ್ತದೆ ಎಂದಿರುವ ಕೊಪ್ಪಳ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆ ಅದ್ಯಕ್ಷ ಅಶೋಕಸ್ವಾಮಿ ಹೇರೂರ, ಸಂಸದರ ಪ್ರಯತ್ನಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.

About The Author

Leave a Reply