ಕೃಷಿ ರತ್ನ ಪ್ರಶಸ್ತಿ ವಿಜೇತರಾದ
ಬಸಯ್ಯ ಹಿರೇಮಠ.
ಗಂಗಾವತಿ: ಮೂಲತಃ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬೂದಗುಂಪಾ ಗ್ರಾಮದ ಬಸಯ್ಯ ಹೀರೆಮಠ ಅವರಿಗೆ ರಾಯಚೂರು ಕೃಷಿ ವಿಶ್ವ ವಿದ್ಯಾಲಯದ “ಕೃಷಿ ರತ್ನ” ಪ್ರಶಸ್ತಿ ನೀಡಿ ಗೌರವಿಸಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ಸ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಮತ್ತು ಡಿಜಿಟಲ್ ಕಮ್ಯೂನಿಕೇಷನ್ಸ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಹಾಗೂ ಬಿ.ಎಸ್.ಸಿ.(ಐ.ಟಿ.) ಶಿಕ್ಷಣ ಪಡೆದಿರುವ ಹೀರೆಮಠ 25 ವರ್ಷಗಳ ಐ.ಟಿ.ಕ್ಷೇತ್ರದಲ್ಲಿ ಇದ್ದು, ಕಳೆದ ಏಳು ವರ್ಷಗಳಿಂದ ಕೃಷಿ ಕ್ಷೇತ್ರಕ್ಕೆ ಬಂದವರು.
ಕುಷ್ಟಗಿ ತಾಲೂಕಿನ ತಾವರಗೇರಾ ಹತ್ತಿರದ 66 ಎಕರೆ ಭೂಮಿಯಲ್ಲಿ ಸಾವಯವ ಕೃಷಿ ಆರಂಭಿಸಿ ಯಶಸ್ವಿ ರೈತರಾಗಿ ಮುಂದೆ ಬಂದವರು.ಈ ಹಿಂದೆ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಭಾಜನಾಗಿದ್ದರು.
ದಿನಾಂಕ:01-06-1971 ರಲ್ಲಿ ಜನಿಸಿದ ಬಸಯ್ಯಸ್ವಾಮಿ,ನಂದಿ ಸಾವಯವ ಫ಼ಾರ್ಮ ಹೌಸ್ ಮೂಲಕ ನುಗ್ಗೆಕಾಯಿ ಎಲೆಯ ವಿವಿಧ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಸಿದ್ದಾರೆ.