ಗುರುವಾರದಿಂದ ಕಾರಟಗಿ-ಹುಬ್ಬಳ್ಳಿ ,ಬೆಂಗಳೂರು ರೇಲ್ವೆ ಆರಂಭ:
ಕೊಪ್ಪಳ: ಇದೇ ದಿನಾಂಕ 11-11-2021ರ ಗುರುವಾರದಿಂದ ಹುಬ್ಬಳ್ಳಿಯಿಂದ ಗಂಗಾವತಿ ನಗರದವರೆಗೆ ಸಂಚರಿಸುತ್ತಿದ್ದ ರೇಲ್ವೆಯನ್ನು ಮತ್ತು ಬೆಂಗಳೂರಿನಿಂದ ಹೊಸಪೇಟೆ ನಗರದವರೆಗೆ ಸಂಚರಿಸುತ್ತಿದ್ದ ರೇಲ್ವೆಯನ್ನು ಕಾರಟಗಿ ಪಟ್ಟಣದವರೆಗೂ ವಿಸ್ತರಿಸಲಾಗಿದೆ.
- ರೈಲು ಸಂಖ್ಯೆ 07303/04 ಹುಬ್ಬಳ್ಳಿ-ಗಂಗಾವತಿ ಎಕ್ಸ್‌ಪ್ರೆಸ್
- ರೈಲು ಸಂಖ್ಯೆ 07381/82 ಹುಬ್ಬಳ್ಳಿ-ಗಂಗಾವತಿ ಪ್ಯಾಸೆಂಜರ್
- 06207/08 ಯಶವಂತಪುರ-ಹೊಸಪೇಟೆ ಎಕ್ಸ್‌ಪ್ರೆಸ್
ಮೇಲಿನ ಎಲ್ಲಾ 3 ರೈಲುಗಳನ್ನು ನವೆಂಬರ್ 11 ರಿಂದ ಕಾರಟಗಿ ವರೆಗೆ ವಿಸ್ತರಿಸಲಾಗಿದೆ.
ಕಾರಟಗಿ- ಯಶವಂತಪುರ ನೂತನ ರೈಲು ಕಾರಟಗಿ -ಸಿದ್ದಾಪುರ-ಶ್ರೀರಾಮನಗರ ಗಂಗಾವತಿ-ಬೂದುಗುಂಪಾ-ಗಿಣಿಗೇರಾ-ಹೊಸಪೇಟೆ ಗಾದಿಗನೂರು-ತೋರಣಗಲ್ಲು- ದರೋಜಿ-ಕುಡತಿನಿ-ಬಳ್ಳಾರಿ- ಓಬುಳಾಪುರಂ-
ಸೋಮಲಾಪುರಂ- ರಾಯದುರ್ಗ-ಮೊಳಕಾಲ್ಮೂರ- ಬೊಮ್ಮಗೊಂಡನಕೆರೆ-ಚಳ್ಳಕೆರೆ ಬಲೇನಹಳ್ಳಿ-ಚಿತ್ರದುರ್ಗ- ಚಿಕ್ಕಜಾಜೂರು-ಹೊಳಲ್ಕೆರೆ ಹೊಸದುರ್ಗರೋಡ್ (ಶಿವಮೊಗ್ಗಕ್ಕೆ ಬಸ್ ಪ್ರಯಾಣ 77ಕಿ.ಮಿ) -ಶಿವಾನಿ- ಅಜ್ಜಂಪುರ-ಬೀರೂರು-ಕಡೂರು (ಕಡೂರಿನಿಂದ ಧರ್ಮಸ್ಥಳಕ್ಕೆ ಬಸ್ ಪ್ರಯಾಣ ಕೇವಲ 120 ಕಿ.ಮಿ)-ಅರಸೀಕೆರೆ ತಿಪಟೂರು-ಗುಬ್ಬಿ-ತುಮಕೂರು-ಕ್ಯಾತ್ಸಂದ್ರ ಚಿಕ್ಕಬೊನ್ನಾವರ ಮಾರ್ಗವಾಗಿ ಯಶವಂತಪುರ ತಲುಪುತ್ತದೆ.
ಬೆಂಗಳೂರ ನಗರದ ಯಶವಂತಪುರದಿಂದ ರಾತ್ರಿ 8 ಗಂಟೆಗೆ ಹೊರಡುವ ರೈಲು, ಬೆಳಿಗ್ಗೆ ಕಾರಟಗಿ ಸ್ಟೇಷನ್ ತಲುಪಲಿದೆ.ಅಲ್ಲಿಂದ ಬೆಳ್ಳಿಗ್ಗೆಯೇ ಪುನ್ಹ ಯಶವಂತಪುರಕ್ಕೆ ಹೊರಡುವ ರೈಲು ಯಶವಂತಪುರವನ್ನು ರಾತ್ರಿ ತಲುಪಲಿದೆ.
ಮುಂದಿನ ದಿನಗಳಲ್ಲಿ ಪ್ರಯಾಣಿಕರ ಅಭಿಪ್ರಾಯ ಸಂಗ್ರಹಿಸಿ,ಕಾರಟಗಿ-ಯಶವಂತಪೂರ ರೇಲ್ವೆ ಓಡಾಟದ ಸಮಯದಲ್ಲಿ ಬದಲಾವಣೆಯಾಗಲಿದೆ
ಸ್ಥಳೀಯ ಚುನಾವಣೆಗಳ ದಿನಾಂಕ ಪ್ರಕಟವಾದ ಹಿನ್ನೆಲೆಯಲ್ಲಿ ಈ ರೇಲ್ವೆ ಸಂಚಾರಕ್ಕೆ ಚಾಲನೆ ನೀಡುವ ಕಾರ್ಯಕ್ರಮ ರದ್ದಾಗಿದ್ದರೂ ಈ ಮೊದಲೇ ಪ್ರಕಟವಾಗಿರುವಂತೆ ರೈಲುಗಳು ಓಡಾಟ ಆರಂಭಿಸಲಿವೆ.
ಈ ಬಗ್ಗೆ ತಾವು ಸಂಸದ ಸಂಗಣ್ಣ ಕರಡಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಈ ವಿಷಯವನ್ನು ಅವರು ಸ್ಪಷ್ಟ ಪಡಿಸಿದ್ದಾರೆಂದು ಕೊಪ್ಪಳ ಜಿಲ್ಲಾ ಚೇಂಬರ್ ಆಫ್ ಕಾಮರ್ಸ ಅದ್ಯಕ್ಷ ಅಶೋಕಸ್ವಾಮಿ ಹೇರೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.