

ರೇಲ್ವೆ ಸೌಲಭ್ಯ: ಸಂಗಣ್ಣ ಕರಡಿಯವರಿಗೆ ಸನ್ಮಾನಿಸಿ ಗೌರವ.
ಕೊಪ್ಪಳ: ಇದೇ ದಿನಾಂಕ 10-11-2021 ರಂದು ಕಾರಟಗಿ ಮತ್ತು ಬೆಂಗಳೂರಿಗೆ ರೇಲ್ವೆ ಸೌಲಭ್ಯ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕೊಪ್ಪಳ ಕ್ಷೇತ್ರದ ಸಂಸದ ಸಂಗಣ್ಣ ಕರಡಿಯವರನ್ನು ರವಿವಾರ ಅವರ ನಿವಾಸದಲ್ಲಿ ಕೊಪ್ಪಳ ಜಿಲ್ಲಾ ಚೇಂಬರ್ ಆಫ಼್ ಕಾಮರ್ಸ & ಇಂಡಸ್ಟ್ರಿ ಅದ್ಯಕ್ಷ , ನ್ಯಾಯವಾದಿ ಅಶೋಕಸ್ವಾಮಿ ಹೇರೂರ ಸನ್ಮಾನಿಸಿ ಗೌರವಿಸಿದರು.
ಈ ಸಂಧರ್ಭದಲ್ಲಿ ರೇಲ್ವೆ ಸೌಲಭ್ಯ ಒದಗಿಸಿಕೊಟ್ಟ ಹಿನ್ನೆಲೆಯಲ್ಲಿ ಸಂಸದರಿಗೆ ಕೃತಜ್ಞತೆಗಳನ್ನು ತಿಳಿಸಿ ಮಾತನಾಡಿದ ಹೇರೂರ, ಹುಬ್ಬಳ್ಳಿಗೆ ಸಂಚರಿಸುವ ಎರಡು ರೇಲ್ವೆಗಳಲ್ಲಿ ಒಂದನ್ನು ಗೋವಾದವರೆಗೂ ಸಂಚರಿಸಲು ಕ್ರಮ ಕೈಗೊಳ್ಳಬೇಕೆಂದು ಕೋರಿದರು. ಇದರಿಂದ ಗಂಗಾವತಿ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ಕೊಟ್ಟಂತಾಗುತ್ತದೆ ಎಂದು ವಿವರಿಸಿದರು.
ಗಂಗಾವತಿ-ದರೋಜಿ ನೂತನ ರೇಲ್ವೆ ಮಾರ್ಗ ರಚನೆಯ ಬಗ್ಗೆ ಮಾತನಾಡಿ,ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಅಗತ್ಯ ಅನುದಾನವನ್ನು ಪಡೆದು ಕಾಮಗಾರಿಗೆ ಒತ್ತು ಕೊಡಬೇಕೆಂದು ಹೇರೂರ ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ತುಂಗಭದ್ರಾ ಕಾಡಾ ಮಾಜಿ ಅದ್ಯಕ್ಷ ಎಚ್.ಗಿರೇಗೌಡ ವಕೀಲರು,ಗಂಗಾವತಿಯ ನಗರ ಸಭೆಯ ಹಿರಿಯ ಸದಸ್ಯ ಮನೋಹರ ಸ್ವಾಮಿ ಮುದೇನೂರ ಹಿರೇಮಠ, ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಕಾರ್ಯದರ್ಶಿ ಉದಯ ಕುಮಾರ ದರೋಜಿ, ಸದಸ್ಯ ಮತ್ತು ಗುತ್ತಿಗೆದಾರ ಉಮಾಮಹೇಶ್ವರ ಸ್ವಾಮಿ ರಾಮಸಾಗರ ಉಪಸ್ಥಿತರಿದ್ದರು.