July 12, 2025
IMG-20211102-WA0000

ಗಂಗಾವತಿ-ದರೋಜಿ ರೇಲ್ವೆ ಲೈನ್:ಕಲ್ಯಾಣ ಕರ್ನಾಟಕ ಚೇಂಬರ್ ಆಫ್ ಕಾಮರ್ಸನಿಂದ ಪತ್ರ.
ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ರೇಲ್ವೆ ಸ್ಟೇಷನ್ ನಿಂದ ಬಳ್ಳಾರಿ ಜಿಲ್ಲೆಯ ದರೋಜಿ ರೇಲ್ವೆ ಸ್ಟೇಷನ್ ದವರೆಗೂ ರೇಲ್ವೆ ಲಿಂಕ್ ಲೈನ್ ಕಾಮಗಾರಿಯನ್ನು ಆರಂಭಿಸಬೇಕೆಂದು ಕಲ್ಯಾಣ ಕರ್ನಾಟಕ ( ಹೈದ್ರಾಬಾದ್ ಕರ್ನಾಟಕ) ಚೇಂಬರ್ ಆಫ್ ಕಾಮರ್ಸ & ಇಂಡಸ್ಟ್ರಿ ಈ ಸಂಸ್ಥೆಯಿಂದ ರೇಲ್ವೆ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಒತ್ತಾಯಿಸಲಾಗಿದೆ.
ಗಂಗಾವತಿ ನಗರದಿಂದ ಕೇವಲ 35 ಕಿ.ಮಿ. ಅಂತರದಲ್ಲಿರುವ ದರೋಜಿ ಗ್ರಾಮಕ್ಕೆ ರೇಲ್ವೆ ಸಂಪರ್ಕ ಕಲ್ಪಿಸುವುದರಿಂದ ಕರ್ನಾಟಕದ ಅನ್ನದ ಪಾತ್ರೆ ಎಂದು ಕರೆಯಲ್ಪಡುವ ಮತ್ತು ನೂರಾರು ರೈಸ್ ಮಿಲ್ ಗಳನ್ನು ಹೊಂದಿರುವ ಗಂಗಾವತಿ ನಗರದ ವಾಣಿಜ್ಯ ವಹಿವಾಟಿಗೆ ಅನುಕೂಲವಾಗುತ್ತದೆ ಮತ್ತು ಈ ನೂತನ ರೈಲು ಮಾರ್ಗ ಬಳ್ಳಾರಿ, ಗುಂತಕಲ್,ಗು೦ಟೂರ್ ರೇಲ್ವೆ ಜಂಕ್ಷನ್ ಗೆ ತಲುಪುತ್ತದೆ.ಧಾರ್ಮಿಕ ಕ್ಷೇತ್ರಗಳಾದ ಶ್ರೀಶೈಲ, ತಿರುಪತಿ ಸೇರಿದಂತೆ ಬೆಂಗಳೂರು, ಮದ್ರಾಸ್ ಸಂಪರ್ಕ ಸರಳ ಸಾದ್ಯವಾಗುತ್ತದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಈ ರೇಲ್ವೆ ಲಿಂಕ್ ಲೈನ್ ಆರಂಭದಿಂದ ಅಕ್ಕಿ ಮತ್ತು ಅದರ ಉತ್ಪನ್ನಗಳನ್ನು ರೇಲ್ವೆ ಮೂಲಕ ಬೇರೆ ಬೇರೆ ಕಡೆ ಸಾಗಿಸಲು ಅನುಕೂಲವಾಗುತ್ತದೆ.ಇದರಿಂದವಾಣಿಜ್ಯ ‌ಮತ್ತು ಉದ್ಯಮಕ್ಕೆ ಅನುಕೂಲವಾಗುತ್ತದೆ ಎಂದು ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅದ್ಯಕ್ಷ ಪ್ರಶಾಂತ ಎಸ್.ಮಾನಕರ್,ಕಾರ್ಯದರ್ಶಿ ಶರಣಬಸಪ್ಪ ಎಮ್.ಪಪ್ಪಾ ಪತ್ರದ ಮೂಲಕ ತಿಳಿಸಿದ್ದಾರೆ.

About The Author

Leave a Reply