ವೈದ್ಯರು ಸುಪಿರಿಯಾರಿಟಿ ಕಾಂಪ್ಲೆಕ್ಸ್ ಕಡಿಮೆ ಮಾಡಿಕೊಳ್ಳುವುದು ಉತ್ತಮ !
ಕಳೆದ ಹಲವು ವರ್ಷಗಳಿಂದ ಆರೋಗ್ಯ ತಪಾಸಣೆಗಾಗಿ ಬೆಂಗಳೂರಿನ ಯಶವಂತಪುರದಲ್ಲಿರುವ ಕೋಲಂಬಿಯಾ ಏಸಿಯಾ ಆಸ್ಪತ್ರೆಗೆ ಹೋಗುತ್ತಿದ್ದೇನೆ.ಅದರಂತೆ ಇತೀಚಿಗೆ ಅಲ್ಲಿನ ಓರ್ವ ENT ಸ್ಪೇಷಲಿಸ್ಟ ವೈದ್ಯರ ಹತ್ತಿರ ಹೋಗಿದ್ದೆ, ಆ ವೈದ್ಯನ ಇರಿಸು ಮುರಿಸುತನ ನೋಡಿ ಈತನೆಂತಹ ವೈದ್ಯ ಎಂದು ನನಗೆ ಅನಿಸಿದ್ದು ಸುಳ್ಳಲ್ಲ.
ಅಪೈ೦ಟಮೆ೦ಟ್ ತೆಗೆದುಕೊಂಡ ನಂತರ ಅಲ್ಲಿನ ಸಹಾಯಕರು, ಪೇಶ೦ಟ್ ಹೆಸರು ಕೂಗುವುದು ವಾಡಿಕೆ.ಅದರಂತೆ ಯಾವಾಗ ಕರೆಯುತ್ತಾರೆ ಎಂದು ಕಾಯ್ದು ಕುಳಿತಿದ್ದೆವು.ಸ್ವತಃ ಆ ವೈದ್ಯ ಹೊರಗೆ ಬಂದು ಒಂದು ಸಾರಿ ಅಶೋಕ್ ಎಂದು ಸಣ್ಣದಾಗಿ ಕೂಗಿದ.ಸಾಮಾನ್ಯವಾಗಿ ಅಶೋಕ್ ಎಂಬ ಹೆಸರಿನವರು ಬಹಳ ಜನ ಇರುತ್ತಾರೆಯಾದ್ದರಿಂದ ನಾನು ಸುಮ್ಮನಿದ್ದೆ.ಸ್ವಲ್ಪ ಸಮಯದ ನಂತರ ಆ ವೈದ್ಯ ಹೊರಗೆ ಬಂದು ಅತ್ತ-ಇತ್ತ ನೋಡುತ್ತಿದ್ದ,ಸರಿ ವೈದ್ಯ ಖಾಲಿ ಇರಬೇಕೆಂದು ಮಾತನಾಡಿಸಿದೆವು.
ಆಗ ವಿನ್ಹ ಕಾರಣ ಸಿಡಿ ಮಿಡಿ ಗೊಂಡ ಆ ವೈದ್ಯ, ‘ನಾನು ಕರೆಯುತ್ತಲೇ ಇದ್ದೇನೆ, ನೀವು ಬರ್ತಾ ಇಲ್ಲ’ ಎಂದು ಪೇಚಾಡಿದ.ಕಂಪ್ಯೂಟರ್ ನಲ್ಲಿ ಪೇಶ೦ಟ ಹಿಸ್ಟ್ರಿ(ನನ್ನದು) ನೋಡುತ್ತಾ ‘ಏನಾಗಿದೆ ?’ ಎಂದ. ಅಗಾಗ ತಲೆ ಸುತ್ತು ಬರ್ತಿದೆ ಎಂದೆ ! ಹೀಗೆ ಹೇಳಿದ್ದೇ ತಡ, ತಲೆ ಸುತ್ತು ಹೇಗೆ ಬರುತ್ತೇ ? ತೋರಿಸಿ ಎಂದ ! ತಲೆ ಸುತ್ತು ಹೇಗೆ ಬರುತ್ತದೆ ಎಂದು ತೋರಿಸಲು ಸಾದ್ಯವೆ ? ವೈದ್ಯ ಲೋಕದವರೇ ಹೇಳಲಿ !
ಅಬ್ಬಾ ಈತನೆಂತಹ ವೈದ್ಯ ಎಂದುಕೊಂಡೆ ! M.B.B.S. ಅಬ್ಯಾಸ ಮಾಡಿ,M.D.ಅಡ್ಮಿಷನ್ ಗೆ ಹೋಗುತ್ತಿರುವ ನನ್ನ ಮಗ ಡಾ.ಅಭಿಷೇಕಸ್ವಾಮಿ ವಿವರಣೆ ಕೊಡಲು ಮುಂದಾದರೂ ಆ ವೈದ್ಯನ ಅರ್ಥ ಹೀನ ಪ್ರಶ್ನೆಗಳು ಮುಗಿಯಲೇ ಇಲ್ಲ.ಈ ವೈದ್ಯ ಸರಿ ಇಲ್ಲ ಎಂದು ಅಲ್ಲಿಂದ ಹೊರಟು ಬಂದು ಬಿಟ್ಟೆವು.ನನ್ನ ಆರೋಗ್ಯ ಸಮಸ್ಯೆಗೆ ಆ ವೈದ್ಯ ಪರಿಹಾರವನ್ನು ನೀಡಲಿಲ್ಲ , ಮೆಡಿಸಿನ್ ಸೂಚಿಸಲಿಲ್ಲ.ಮಾನಸಿಕ ಅಸ್ವಸ್ಥತರಂತೆ ವರ್ತಿಸಿದ ಈತನನ್ನು ಅದು ಹೇಗೆ ನಾವು ವೈದ್ಯ ಎಂದುಕೊಳ್ಳಬೇಕು ?
ಅಂದು ಮೈಸೂರುಗೆ ಹೋಗಬೇಕಾಗಿದ್ದರಿಂದ, ಮರುದಿನ ಮೈಸೂರಿನ ಕೋಲಂಬಿಯಾ ಏಸಿಯಾ ಆಸ್ಪತ್ರೆಗೆ ಹೋಗಿ ಅಲ್ಲಿನ ವೈದ್ಯರನ್ನು ಕಂಡು ತೋರಿಸಿಕೊಂಡು ಬಂದದ್ದಾಯ್ತು.ಅಲ್ಲಿ ಪುನಃ ENT ಸ್ಪೇಷಲಿಸ್ಟ ಮತ್ತು ನ್ಯೂರಾಲಾಜಿಸ್ಟ ಹತ್ತಿರ ತಪಾಸಣೆ ಮಾಡಿಸಿದಾಗ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.ಆದರೆ ನನಗಿರುವ ಸಮಸ್ಯೆಗೆ ಪರಿಹಾರ ಸಿಗಲ್ಲಿಲ್ಲ.
ಅದಕ್ಕೆ ಪರಿಹಾರ ಖಂಡಿತ ಒಬ್ಬ ಫ಼ಾರ್ಮಸಿಸ್ಟ ಆದ ನನಗೆ ಗೊತ್ತಿದೆ,ಆದರೆ ನಾನೇ ವೈದ್ಯನಂತೆ ಔಷಧ ಸೇವಿಸಬಾರದು ಎಂಬ ಕಾರಣಕ್ಕಾಗಿ ಯಾವುದೇ ಔಷಧ ತೆಗೆದು ಕೊಂಡಿಲ್ಲ. ಹಾಗೆ ತೆಗೆದು ಕೊಳ್ಳಬಾರದು ಸಹ.
ಈ ಎಮ್.ಬಿ.ಬಿ.ಎಸ್.ಓದಿದ ಮುಕ್ಕಾಲು ಭಾಗದಷ್ಟು ಜನರಿಗೆ ಸುಪಿರಿಯಾರಿಟಿ ಕಾಂಪ್ಲೆಕ್ಸ್ ಇದೆ.ರೋಗಿಗಳು, ವೈದ್ಯರಿಗೆ ಅಗತ್ಯಕ್ಕಿಂತ ಹೆಚ್ಚಾಗಿ ಕೊಡುವ ಗೌರವವೇ ಇದಕ್ಕೆ ಕಾರಣವಾಗಿರಬಹುದು. ವೈದ್ಯರಿಗೆ ಈ ರೀತಿಯ ego ಸರಿಯಲ್ಲ.ನಾವು ಫ಼ಾರ್ಮಸಿ ಓದಿದ ಮಾತ್ರಕ್ಕೆ ಇವರಿಗಿಂತ ಕಡಿಮೆ ಏನಲ್ಲ !
ನಾನು ಸಾಹಿತಿ, ಪತ್ರಕರ್ತ, ರಾಜಕಾರಣಿ, ಫ಼ಾರ್ಮಸಿಸ್ಟ, ಕೆಮಿಸ್ಟ , ಅಡ್ವೋಕೇಟ್ ಈ ಎಲ್ಲಾ ಪಾತ್ರಗಳನ್ನು ನಿರ್ವಹಿಸಿದ್ದೇನೆ.ಹಲವಾರು ಸಂಘಟನೆಗಳನ್ನು ಕಟ್ಟಿ ಬೆಳೆಸಿದ್ದೇನೆ.ಎಂಟನೇ ಕ್ಲಾಸ್ ನಲ್ಲಿ “ಕಾವ್ಯನಾ೦ಪ್ರೀಯ” ಎಂದು ಪೆನ್ ನೇಮ್ ಇಟ್ಟುಕೊಂಡವ ನಾನು! ಹಲವು ಹಿರಿಯ ಕವಿಗಳು ಈ ಹೆಸರು ನಮಗ್ಯಾಕೆ ಹೊಳೆಯಲಿಲ್ಲ ಎಂದು ಪೇಚಾಡಿದ್ದೂ ಉ೦ಟು. ಪಿ.ಯು.ಸಿ. ಓದುವಾಗಲೇ ಹಲವು ಪತ್ರಿಕೆಗಳ ಗೌರವ ವರದಿಗಾರನಾಗಿ ಕೆಲಸ ಮಾಡಿದವನು ನಾನು! ಹೋರಾಟ,ಪೋಲೀಸ್, ಕೇಸ್,ಕೋರ್ಟ ನನಗೆ ಕಾಮನ್ ಆಗಿ ಬಿಟ್ಟಿವೆ.
ಇತರರಂತೆ ಅಂತರಾಷ್ಟ್ರೀಯ ಕ್ಲಬ್ ಗಳ ಸದಸ್ಯನಾಗಿ ಎಲ್ಲೂ ಬೀಗಿಲ್ಲ.ನನ್ನ ಸ್ವ ಸಾಮಾರ್ಥ್ಯದಿಂದ ಬೆಳೆದಿದ್ದೇನೆ. ಹಲವಾರು ಜನರಿಂದ ಮಾತ್ರವಲ್ಲ, ನನ್ನ ಕ್ಲಾಸ್ ಮೆಟ್ಸ್ , ಗೆಳೆಯರು ಮತ್ತು ನನಗಿಂತ ಹಿರಿಯರಿಂದ ‘ಸರ್’ ಎಂದು ಕರೆಯಿಸಿ ಕೊಳ್ಳುತ್ತಿದ್ದೇನೆ.ಹಲವು ಸಾಧಕರಿಕೆ ಇಲ್ಲದ ego ಇವರಿಗ್ಯಾಕೆ ಅಂತ ? ವೈದ್ಯರು ಎಂದು ಗೌರವ ಕೊಟ್ಟು ಮಾತನಾಡಿದರೂ ಏಕ ವಚನದಲ್ಲಿ ಉತ್ತರಿಸುವ ಹಲವು ವೈದ್ಯರನ್ನೂ ನಾನು ನೋಡಿದ್ದೇನೆ.
ನಾನು M.L.A., M.L.C., ಸ್ಥಾನಕ್ಕೆ ಸ್ಪರ್ದಿಸಿದ್ದಾಗ ಯಾರ ಒತ್ತಡಕ್ಕೂ ಮಣಿಯದೆ ನಾಮಪತ್ರ ಹಿಂತೆಗೆದು ಕೊಳ್ಳದೆ ಧೈರ್ಯದಿಂದ ಚುನಾವಣೆ ಎದುರಿಸಿ,ತಾಕತ್ತನ್ನು ತೋರಿಸಿದ್ದೇನೆ.ಎಷ್ಟೇ ಜನರಿರಲಿ,ಯಾವುದೇ ಸ್ಟೇಜ್ ಇರಲಿ ನನ್ನ ಭಾಷೆಯನ್ನು ಎಲ್ಲೂ ಬದಲಿಸಿ ಮಾತನಾಡಿದ್ದು , ನನ್ನ ಜೀವಮಾನದ ಇತಿಹಾಸದಲ್ಲಿಯೇ ಇಲ್ಲ.
ನಾನು ಫ಼ಾರ್ಮಾ ಮತ್ತು ವೈದ್ಯಕೀಯ ವೃತ್ತಿಯ ಬಾನಗಾಡಿಗಳನ್ನು ಬೆತ್ತಲೆ ಮಾಡುತ್ತಲೇ ಬರುತ್ತಿದ್ದೇನೆ.ನಮ್ಮ ಮನೆಯಲ್ಲಿ ಎಲ್ಲಾ ವಿಭಾಗದಲ್ಲಿ ಪದವಿ ಪಡೆದ ವೈದ್ಯರಿದ್ದರೂ ಸಹ.ಈ ದಿಸೆಯಲ್ಲಿನ ನನ್ನ ಪತ್ರ ವ್ಯವಹಾರಕ್ಕೆ ಅಧಿಕಾರಿಗಳು ತತ್ತರಿಸುತ್ತಿದ್ದಾರೆ. ಮಂತ್ರಿ ಮಹೋದಯರು ಹುಬ್ಬೇರಿಸುತ್ತಿದ್ದಾರೆ.
ನನ್ನ ಇಂಗ್ಲೀಷ್ ಲೇಖನಗಳು ಅಂತರಾಷ್ಟ್ರೀಯ ಪತ್ರಿಕೆಯಲ್ಲಿ ಪ್ರಕಟವಾಗುತ್ತಿವೆ.ಹಲವು ಅಧಿಕಾರಿಗಳಿಗೆ ಕಾನೂನಿನ ಒಳ ಹರಿವುಗಳ ಬಗ್ಗೆ ಹೇಳಿ ಕೊಡುತ್ತಿದ್ದೇನೆ.ಪೋಲೀಸ್ ಅಕಾಡೆಮಿಯಲ್ಲಿ ಅಧಿಕಾರಿಗಳಿಗೆ ಪಾಠ ಮಾಡಿದ್ದೇನೆ.
ನಾನು ನ್ಯಾಯವಾದಿಯಾಗಿ ಮಾತ್ರ ಕೋರ್ಟಗೆ ಹಾಜರಾಗಿಲ್ಲ.ಆರೋಪಿಯಾಗಿಯೂ ಕೋರ್ಟಗೆ ಹಾಜರಾಗಿದ್ದೇನೆ.ಆರೋಪಕ್ಕೆ , ಕೇಸ್ ಗೆ ಎಂದೂ ಹೆದರಿಲ್ಲ.ಆರೋಪದಿಂದ ಮುಕ್ತನಾದಗಲೂ ಖುಷಿ ಪಡುವುದಿಲ್ಲ.ನ್ಯಾಯಧೀಶನೊಬ್ಬನ ಹುಚ್ಚಾಟದಿಂದ ಜ್ಯೂಡಿಷಿಯಲ್ ಕಸ್ಟಡಿಗೆ ಹೋದಾಗಲೂ ನಾನು ಹೆದರಲಿಲ್ಲ.ಬದಲಿಗೆ ಆ ನ್ಯಾಯಾಧೀಶನನ್ನೆ ಮನೆಗೆ ಕಳುಹಿಸಿದ್ದೇನೆ.ಸುಳ್ಳು ಕೇಸ್ ಹಾಕಿದ ಅಧಿಕಾರಿಗಳನ್ನೂ ಬಿಡಲಿಲ್ಲ.
ಔಷಧ ಮತ್ತು ಕಾಂತಿವರ್ಧಕ ಕಾಯ್ದೆ-1940 ಮತ್ತು ನಿಯಮ-1945 ತಿದ್ದುಪಡಿ ಆಗುವ ಸುದ್ದಿ ತಿಳಿಯುತ್ತಲೇ ನೂರಾರು ಪುಟಗಳ suggestion & objections ಗಳನ್ನು ರಾತ್ರೊ ರಾತ್ರಿ ರೆಡಿ ಮಾಡಿದ್ದೇನೆ ! ನಾನು ಈಗಲೂ ಚಾಲೇಂಜ್ ಮಾಡುತ್ತೇನೆ ಇಡೀ ಇಂಡಿಯಾದಲ್ಲಿ ನನ್ನಂತೆ ಸಲಹೆ-ಸೂಚನೆ ಕೊಟ್ಟ ಇನ್ನೊಬ್ಬ ಯಾವನಾದರೂ ಇದ್ದರೆ ಹೆಸರಿಸಲಿ ನೋಡೋಣ !
ಅವರವರ ಕ್ಷೇತ್ರದಲ್ಲಿ ಅವರವರೇ ಜಾಣರು ! ಯಾರೂಮೇಲು-ಕೀಳಲ್ಲ.ಅವರವರ ವೃತ್ತಿ ಅವರಿಗೆ ಮೇಲು.ಯಾರನ್ನೂ ಅಂಡರ್ ಎಸ್ಟಿಮೇಟ್ ಮಾಡಬಾರದು. ಶಿಕ್ಷಣಕ್ಕಿಂತ ಸಂಸ್ಕಾರ ಮುಖ್ಯ. ಅರ್ಥ ಮಾಡಿಕೊಂಡವರೇ ಜ೦ಟ್ಲಮ್ಯಾನ್ !
.