December 23, 2024
IMG-20211001-WA0004

ಸುರೇಶ್ ಬಂಬ್ ಅವರಿಗೆ ಶ್ರೇಷ್ಠ ಉದ್ಯಮ ಪ್ರಶಸ್ತಿ.

ಗಂಗಾವತಿ: ನಗರದ ವ್ಯಾಪಾರಿ ಮತ್ತು ಉದ್ಯಮಿಗಳಲ್ಲಿ ಸದ್ದಿಲ್ಲದೆ ಕಾಯಕವೇ ಕೈಲಾಸ ಎನ್ನುವಂತೆ ದುಡಿಮೆಯಲ್ಲಿ ನಿರತರಾದವರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಹೆಸರುಗಳಲ್ಲಿ ಸುರೇಶ್ ಬಂಬ್ ಅವರ ಹೆಸರೂ ಒಂದು.
ಅಕ್ಕಿ ವ್ಯಾಪಾರ, ಅಕ್ಕಿ ಗಿರಣಿ ಮಾತ್ರವಲ್ಲದೆ ಬಟ್ಟೆ ವ್ಯಾಪಾರದಲ್ಲಿಯೂ ಸುರೇಶ್ ಮತ್ತು ಅವರ ಸಹೋದರರಾದ ಸುಭಾಷ ಹಾಗೂ ಅಶೋಕ ಬಂಬ್ ಅವರು ಕೂಡ ಭಾಗಿಯಾಗಿದ್ದಾರೆ.
ಕೆಲವು ಸಂಸ್ಥೆಗಳ ಮೂಲಕ ಸಾಮಾಜಿಕ ಸೇವೆಗಳಲ್ಲಿಯೂ ಈ ಸಹೋದರರು ಸೇವೆ ಸಲ್ಲಿಸುತ್ತಿದ್ದಾರೆ.
ಎಲೆ ಮರೆಯ ಕಾಯಿಯಂತೆ ಉದ್ಯಮದಲ್ಲಿ ನಿರತರಾಗಿರುವ ಸುರೇಶ್ ಬಂಬ್ ಅವರನ್ನು  ಕೊಪ್ಪಳ ಜಿಲ್ಲಾ ಚೇಂಬರ್ ಆಫ್ ಕಾಮರ್ಸ & ಇಂಡಸ್ಟ್ರಿ ಗುರುತಿಸಿದ ಕಾರಣಕ್ಕಾಗಿ ಗದಗನಲ್ಲಿ ಆಯೋಜಿಸಲಾಗಿದ್ದ ಉತ್ತರ ಕರ್ನಾಟಕ ವಾಣಿಜ್ಯೋದ್ಯಮಿಗಳ ಸಮ್ಮೇಳನ ” ಪರಿವರ್ತನ” ಕಾರ್ಯಕ್ರಮದಲ್ಲಿ ಶ್ರೇಷ್ಠ ಉದ್ಯಮ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. 

About The Author

Leave a Reply