ಉತ್ತರ ಕರ್ನಾಟಕ ವಾಣಿಜ್ಯೋದ್ಯಮಿಗಳ ಸಮೇಳನ: ಸನ್ಮಾನಗೊಂಡ ಶ್ರೀನಿವಾಸ ನೆಕ್ಕ೦ಟಿ.
ಗಂಗಾವತಿ: ನಗರದ ಉದ್ಯಮಿ ಶ್ರೀನಿವಾಸ ರಾಮರಾವ್ ನೆಕ್ಕ೦ಟಿಯವರನ್ನು ಇತ್ತೀಚೆಗೆ ಗದಗ ನಗರದಲ್ಲಿ ನಡೆದ ಉತ್ತರ ಕರ್ನಾಟಕ ವಾಣಿಜ್ಯೋದ್ಯಮಿಗಳ ಸಮ್ಮೇಳನದಲ್ಲಿ ಸನ್ಮಾಸಿಸಲಾಯಿತು.
ಗಂಗಾವತಿ ಭಾಗದಲ್ಲಿ ಬೆಳೆಯುವ ಭತ್ತದ ಉತ್ಪನ್ನಗಳನ್ನು ಹೊರ ರಾಜ್ಯಗಳಿಗೆ ಮಾತ್ರವಲ್ಲ ಹೊರ ದೇಶಗಳಿಗೂ ಕಳುಹಿಸುವ ಮೂಲಕ ಇವರು ಹೆಸರು ಮಾಡಿದ್ದಾರೆ.
ಗಂಗಾವತಿ ನಗರದಲ್ಲಿ ಆರಂಭವಾದ ರೈಲುಗಳ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುತ್ತಿರುವ ನೆಕ್ಕ೦ಟಿಯವರಿಂದ ರೇಲ್ವೆ ಇಲಾಖೆಗೆ ಸಾಕಷ್ಟು ಆದಾಯ ಸಂದಾಯವಾಗುತ್ತಿದೆ.ಇದರಿಂದಾಗಿ ರೇಲ್ವೆ ಇಲಾಖೆ ಗಂಗಾವತಿ ನಗರದತ್ತ ಚಿತ್ತ ಹರಿಸಲು ಕಾರಣರಾಗಿದ್ದಾರೆ.
ರೇಲ್ವೆ ವ್ಯಾಗನ್ ಗಳ ಮೂಲಕ ಅಕ್ಕಿ ಸಾಗಾಣಿಕೆ ಮಾಡುತ್ತಿರುವ ಶ್ರೀನಿವಾಸ್ ಅವರಿಂದ ರೇಲ್ವೆ ಇಲಾಖೆಗೆ ಸಾಕಷ್ಟು ಆದಾಯ ಸಂದಾಯವಾಗುತ್ತಿರುವುದರಿಂದ ಗಂಗಾವತಿ-ದರೋಜಿ ನೂತನ ರೇಲ್ವೆ ಲೈನ್ ರಚಿಸಬೇಕೆನ್ನುವ ಕೊಪ್ಪಳ ಜಿಲ್ಲಾ ಚೇಂಬರ್ ಆಫ್ ಕಾಮರ್ಸ & ಇಂಡಸ್ಟ್ರಿಯ ಬೇಡಿಕೆಯನ್ನು ರೇಲ್ವೆ ಇಲಾಖೆ ತೀವ್ರವಾಗಿ ಗಮನಿಸುವ ಸಾದ್ಯತೆಗಳಿವೆ.
52 ನೇ ವಯಸ್ಸಿನ ಶ್ರೀನಿವಾಸ ಇಂಜಿನಿಯರಿಂಗ್ ನಲ್ಲಿ ಪೋಷ್ಟ ಗ್ರ್ಯಾಜ್ಯೂಯೇಟ್ ಪದವಿ ಪಡೆದವರು.ಗಂಗಾವತಿ ಮತ್ತು ತುಮಕೂರು ನಗರದಲ್ಲಿ ಆಹಾರ ಸಂಸ್ಕರಣಾ ಘಟಕಗಳು ಇವರ ಉಸ್ತುವಾರಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ನಗರದ ಯಶಸ್ವಿ ಉದ್ಯಮಗಳ ಪಟ್ಟಿಯಲ್ಲಿ ಶ್ರೀನಿವಾಸ ಆರ್.ನೆಕ್ಕ೦ಟಿ ಅವರ ಹೆಸರು ಸೇರ್ಪಡೆಯಾಗಲು ಅವರ ಶ್ರಮವೇ ಮೂಲ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.
ಸನ್ಮಾನ ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ವಾಣಿಜ್ಯೋದ್ಯಮಿ ಸಂಸ್ಥೆಯ ಅದ್ಯಕ್ಷ ಆನಂದ ಎಲ್.ಪೋತ್ನೀಸ್,ಉಪಾದ್ಯಕ್ಷ ಈಶಣ್ಣ ಸಿ. ಮುನವಳ್ಳಿ ,ಆರ್.ಬಿ.ದಾನಪ್ಪಗೌಡ್ರ,
ಕಾರ್ಯದರ್ಶಿ ವಿರೇಶ ಎಸ್.ಕೂಗು,ಸಹ ಕಾರ್ಯದರ್ಶಿ ಎನ್.ಟಿ.ಹುಬ್ಬಳ್ಳಿ , ಎಸ್.ಕೆ.ಜಾಲಿ, ಅಶೋಕಸ್ವಾಮಿ ಹೇರೂರ ಮತ್ತಿತರರು ಉಪಸ್ಥಿತರಿದ್ದರು.