

ಗಂಗಾವತಿ: ನಗರದ ಸೇ೦ಟ್ ಫ಼ಾಲ್ಸ್ ವಿದ್ಯಾ ಸಂಸ್ಥೆಯಿಂದ ಫ಼ಾರ್ಮಸಿ ಕಾಲೇಜ್ ಆರಂಭಿಸಿ, ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಒದಗಿಸಿದ ಕಾರಣಕ್ಕಾಗಿ ಸಂಸ್ಥೆಯ ಕಾರ್ಯದರ್ಶಿ ಸರ್ವೇಶ್ ವಸ್ತ್ರದ ಅವರಿಗೆ ವಿಶ್ವ ಫ಼ಾರ್ಮಸಿಸ್ಟ ಡೇ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕಳೆದ ಬುಧುವಾರ ನಗರದ ಭಾರತೀಯ ವೈದ್ಯಕೀಯ ಭವನದಲ್ಲಿ ಹಮ್ಮಿ ಕೊಳ್ಳಲಾಗಿದ್ದ ಸಮಾರಂಭದಲ್ಲಿ ಕೊಪ್ಪಳ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅದ್ಯಕ್ಷ ಅಶೋಕಸ್ವಾಮಿ ಹೇರೂರ ಸರ್ವೇಶ್ ಅವರನ್ನು ಸನ್ಮಾನಿಸಿದರು.
ಗಂಗಾವತಿ, ಕನಕಗಿರಿ ಮತ್ತು ಕಾರಟಗಿ ಮತ್ತಿತರ ಭಾಗದ ವಿದ್ಯಾರ್ಥಿಗಳು ಡಿ.ಫ಼ಾರ್ಮಸಿ ಅಬ್ಯಾಸ ಮಾಡಲು ದೂರದ ಬಳ್ಳಾರಿ ನಗರ,ಲಿಂಗಸಗೂರು ಅಥವಾ ಸಿರುಗುಪ್ಪ ಪಟ್ಟಣಗಳಿಗೆ ಹೋಗ ಬೇಕಾಗಿತ್ತು.ಆದರೆ ತಮ್ಮ ವಿದ್ಯಾಸಂಸ್ಥೆಯ ವತಿಯಿಂದ ಫ಼ಾರ್ಮಸಿಯ ಡಿಪ್ಲೋಮಾ ಕಾಲೇಜ್ ಆರಂಭಿಸಿ, ನಮ್ಮ ಭಾಗದದ ವಿದ್ಯಾರ್ಥಿಗಳಿಗೆ ಅನುಕೂಲ ಒದಗಿಸಿದ್ದಾರೆ ಎಂದು ಅಶೋಕಸ್ವಾಮಿ ಹೇರೂರ ಈ ಸಂಧರ್ಭದಲ್ಲಿ ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸರ್ವೇಶ್ ವಸ್ತ್ರದ ಸ್ಥಳೀಯ ವಿದ್ಯಾರ್ಥಿಗಳಿಗೆ ಆದ್ಯತೆ ಕೊಡುವುದು ಮಾತ್ರವಲ್ಲದೆ, ಕೋರ್ಸನ ಶುಲ್ಕ ಪಾವತಿಸುವ ಹಂತದಲ್ಲಿಯೂ ಸಹಾಯಮಾಡುವುದಾಗಿ ತಿಳಿಸಿದರು.
ಕೊಪ್ಪಳ ಜಿಲ್ಲೆಯ ಫ಼ಾರ್ಮಸಿಸ್ಟ ಮತ್ತು ಔಷಧ ವ್ಯಾಪಾರಿಗಳು ಭಾಗವಹಿಸಿದ ಈ ಕಾರ್ಯಕ್ರಮದ ವೇದಿಕೆಯ ಮೇಲೆ ಕರ್ನಾಟಕ ರಾಜ್ಯ ಫ಼ಾರ್ಮಸಿ ಕೌನ್ಸಿಲ್ ಅದ್ಯಕ್ಷ ಗಂಗಾಧರ ವಿ.ಯಾವಗಲ್, ಔಷಧ ಮತ್ತು ಪರಿಸರ ವಿಜ್ಞಾನಿ ಡಾ.ಶ್ರೀಶೈಲ ಎಮ್.ಬದಾಮಿ,ಫ಼ಾರ್ಮಸಿಸ್ಟಗಳಾದ ಹನುಮರೆಡ್ಡಿ ಮಾಲಿ ಪಾಟೀಲ್, ಪಾಂಡುರಂಗ ಕನಕಗಿರಿ,
ಚಂದ್ರಶೇಖರಯ್ಯ ಹೇರೂರ,ವೀರಣ್ಣ ಕಾರಂಜಿ,ಅಶೋಕ ಕುಮಾರ ಕಾರಟಗಿ, ಚೋರನೂರು ಮಂಜುನಾಥ ಹೊಸಪೇಟೆ, ಟಿ.ಮಲ್ಲಿಕಾರ್ಜುನ ಬಳ್ಳಾರಿ, ಫ಼ಾರ್ಮಸಿ ಕಾಲೇಜ್ ಪ್ರಿನ್ಸಿಪಾಲ್ ಮಂಜುನಾಥ ಹೀರೆಮಠ, ಉಪನ್ಯಾಸಕರಾದ ಜಡಿಸ್ವಾಮಿ ದಾಸನಾಳ ಮತ್ತು ಆಬೀದ್ ಹುಸೈನ್ ಮುಂತಾದವರು ಉಪಸ್ಥಿತರಿದ್ದರು.