ಗದಗ: ಗಂಗಾವತಿ-ದರೋಜಿ ನೂತನ ಬ್ರಾಡಗೇಜ್ ರೇಲ್ವೆ ಲೈನ್ ಬಗ್ಗೆ ಕೇಂದ್ರ ಸರಕಾರದ ಕಲ್ಲಿದ್ದಲು,ಗಣಿ ಹಾಗೂ ಸ೦ಧೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಗದಗ ನಗರದಲ್ಲಿ ನಡೆದ ವಾಣಿಜ್ಯೋದ್ಯಮಿಗಳ ಸಮ್ಮೇಳನದಲ್ಲಿ ಪ್ರಸ್ಥಾಪಿಸಿದರು.
ಕಳೆದ ಶನಿವಾರ ಉತ್ತರ ಕರ್ನಾಟಕ ವಾಣಿಜ್ಯೋದ್ಯಮಿಗಳ ಸಮ್ಮೇಳನ-2021 ರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ವೇದಿಕೆಯ ಮೇಲೆ ಕೊಪ್ಪಳ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅದ್ಯಕ್ಷ ಅಶೋಕಸ್ವಾಮಿ ಹೇರೂರ ಅವರು ನೀಡಿದ ಪ್ರಸ್ಥಾವನೆಯನ್ನು ಉಲ್ಲೇಖಿಸಿ,ಈ ಬಗ್ಗೆ ರೇಲ್ವೆ ಸಚಿವರೊಡನೆ ಚರ್ಚಿಸುವುದಾಗಿ ಕಾರ್ಯಕ್ರಮದಲ್ಲಿ ಭರವಸೆ ನೀಡಿದರು.
ಈ ಸಂಧರ್ಬದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್,ಬೃಹತ್ ಹಾಗೂ ಮಾದ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ, ಮಾಜಿ ಸಚಿವ ಹಾಗೂ ಶಾಸಕರಾದ ಎಚ್.ಕೆ.ಪಾಟೀಲ್, ಬೆಂಗಳೂರಿನ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯ ಅದ್ಯಕ್ಷ ಪೆರಿಕಲ್.ಎಮ್.ಸುಂದರ್, ರಾಯಚೂರ ಜಿಲ್ಲಾ ಚೇಂಬರ್ ಆಫ್ ಕಾಮರ್ಸ ಅಧ್ಯಕ್ಷ ತ್ರಿವಿಕ್ರಮ ಜೋಶಿ,ಬಳ್ಳಾರಿ ಜಿಲ್ಲೆಯ ವಿ.ರವಿಕುಮಾರ್,ಬೀದರ ಜಿಲ್ಲೆಯ ಬಿ.ಜಿ.ಶೆಟ್ಟರ್,ಗದಗ ಜಿಲ್ಲೆಯ ಜಿಲ್ಲೆಯಆನಂದ ಎಲ್.ಪೋತ್ನೀಸ್, ಉಪಾದ್ಯಕ್ಷ ಈಶಣ್ಣ ಸಿ.ಮುನವಳ್ಳಿ, ಕಾರ್ಯದರ್ಶಿ ವೀರೇಶ್ ಎಸ್.ಕೂಗು, ಸಮ್ಮೇಳನದ ಚೇರಮನ್ ಎಸ್.ಪಿ.ಸಂಶಿಮಠ ಮತ್ತು ಯಾದಗಿರಿಯಿಂದ ಅಕ್ಕಿ ಮಲ್ಲಿಕಾರ್ಜುನ, ಬಳ್ಳಾರಿಯಿಂದ ಎನ್.ಯಶವಂತರರಾಜ್ ಸೇರಿದಂತೆ 16 ಜಿಲ್ಲೆಗಳ ಅದ್ಯಕ್ಷರು ಉಪಸ್ಥಿತರಿದ್ದರು.
ಕೊಪ್ಪಳ ಜಿಲ್ಲೆಯಿಂದ ದರೋಜಿ ಉದಯ ಕುಮಾರ್, ಉಮಾಮಹೇಶ್ವರ ರಾಮಸಾಗರ ಮತ್ತು ನಗರಸಭಾ ಸದಸ್ಯ ಮನೋಹರ ಸ್ವಾಮಿ ಭಾಗವಹಿಸಿದ್ದರು.
ತಮ್ಮ ಮೌಖಿಕ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರಿಗೆ ಕೊಪ್ಪಳ ಜಿಲ್ಲೆಯ ಜನತೆಯ ಪರವಾಗಿ ಅಶೋಕಸ್ವಾಮಿ ಹೇರೂರ ಕೃತಜ್ಞತೆಗಳನ್ನು ತಿಳಿಸಿದ್ದಾರೆ.