ನಾವು ಸೇವಿಸುವ ಎಲ್ಲಾ ಆಹಾರದಲ್ಲಿ ಪ್ರಿಸರ್ವೇಟಿವ್ಸ , ಫ಼್ಲೆವರ್, ಕಲರ್ ಬಳಸುವುದು,ಕಾಸ್ಮೆಟಿಕ್ಸ್ , ಲಿಪ್ ಸ್ಟಿಕ್, ಫ಼ೆಸ್ಟಿಸೈಡ್ಸ , ಪ್ಲಾಸ್ಟಿಕ್, ಸಕ್ಕರೆ,ಮೈದಾ, ಆರ್.ಓ.ವಾಟರ್ ಉಪಯೋಗಿಸುವುದರಿಂದ ಕ್ಯಾನ್ಸರ್ ಗೆ ಆಹ್ವಾನ ನೀಡಿದಂತಾಗುತ್ತದೆ ಎಂದು ಔಷಧ ಮತ್ತು ಪರಿಸರ್ ತಜ್ಞ ಡಾ.ಶ್ರೀಶೈಲ ಬಾದಾಮಿ ಎಚ್ಚರಿಸಿದರು.
ನಗರದ ಸೇ೦ಟ್ ಫ಼ಾಲ್ಸ್ ಫ಼ಾರ್ಮಸಿ ಕಾಲೇಜಿನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಫ಼ಾರ್ಮಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಬರ್ತ ಡೇ ಕೇಕ್ ಕೂಡ ಅಪಾಯಕಾರಿ ಆದರೂ ಕೇಕ್ ಕತ್ತರಿಸಿ, ಸ್ನೋ(ಸ್ಪ್ರೇ) ಸಿಂಪಡಿಸಿ, ಮದ್ದಿನ ಅಂಶ ಹೊಂದಿರುವ ಕ್ರ್ಯಾಕರ್ ಬಳಸಿ, ತಿನ್ನುತ್ತಿದ್ದೇವೆ.
ಸೋಪು, ಕಾಸ್ಮೆಟಿಕ್ಸ್, ಟೂಥ ಪೇಸ್ಟಗಳ ಬಳಕೆಯಿಂದಾಗಿ ಅಮೇರಿಕದ ಎಲ್ಲಾ ಮಹಿಳೆಯರ ಎದೆ ಹಾಲಿನಲ್ಲಿಯೂ ಕೆಮಿಕಲ್ ಅಂಶ ಪತ್ತೆಯಾಗಿದೆ. ತಂದೆ-ತಾಯಿಗಳಿಂದ ಮಕ್ಕಳಿಗೆ ಕೆಮಿಕಲ್ ಅಂಶಗಳು ವರ್ಗವಾಗುತ್ತವೆ.ಇದರಿಂದ
ಮುಂದಿನ ಮಕ್ಕಳು ಸಂತಾನ ಹೀನರಾಗುತ್ತಾರೆ.
ಕೆಮಿಕಲ್ ಗಳ ಹಾವಳಿಯಿಂದ ಹುಟ್ಟುವ ಮಕ್ಕಳು ಕಡಿಮೆ ತೂಕ ಹೊಂದಿರುತ್ತವೆ. ಇಂಡೋನೇಷ್ಯಾದಲ್ಲಿ ಜನ್ಮಿಸಿದ ಮಕ್ಕಳು ಆರುವರೆ ಕೆ.ಜಿ.ತೂಕ ಹೊಂದಿದ್ದರೆ, ಭಾರತದಲ್ಲಿ ಜನ್ಮಿಸಿದ ಮಕ್ಕಳ ತೂಕ ಒಂದುವರೆ ಕೆ.ಜಿ.ಗೆ ಬಂದು ನಿಂತಿದೆ.
ಮಹಿಳೆಯರು ಇರುವ ಕಡೆ ಪುರುಷರು ಸೇದಿ ಬಿಡುವ ಸಿಗರೇಟ್ ಹೊಗೆಯಿಂದ ಹುಟ್ಟುವ ಮಕ್ಕಳಿಗೆ ತೊಂದರೆಯಾಗುತ್ತದೆ.2100 ನೇ ಇಸ್ವಿಗೆ ಸಂತಾನ ಶಕ್ತಿ ಮಹಿಳೆ ಮತ್ತು ಗಂಡಸರಲ್ಲಿ ಕಡಿಮೆಯಾಗುವು ಖಂಡಿತ.
ಮನೆಯಲ್ಲಿ ನಾನ್ ಸ್ಟಿಕ್ ತವಾ, ಓವನ್,ಪ್ಲಾಸ್ಟಿಕ್ ಬಾಟಲ್, ಗ್ಲಾಸ್,ತಟ್ಟೆಗಳನ್ನು ಬಳಸುವುದನ್ನು ಬಿಡಬೇಕು.ನೀರು ಕುಡಿಯಲು ಸ್ಟೀಲ್ ಬಾಟಲ್ ಬಳಸಬೇಕು.ಆಗಾಗ್ಗೆ ತೊಳೆಯ ಬಹುದಾದ ತಾಮ್ರದ ಪಾತ್ರೆಗಳಲ್ಲಿ ನೀರು ಸಂಗ್ರಹಿಸಿ ಕುಡಿದರೆ ಒಳ್ಳೆಯದು ಎಂದರು.
ರಾಸಾಯನಿಕ ಟೂಥ ಪೇಸ್ಟ ಬಳಸುವುದರಿಂದ ಕೆಮಿಲ್ ಅಂಶ ಮತ್ತು ಬ್ರಷ್ ಬಳಕೆಯಿಂದ ಪ್ಲಾಸ್ಟಿಕ್ ಗುಣಗಳು ದೇಹ ಸೇರುತ್ತವೆ.ಅದಕ್ಕಾಗಿ ಆಯುರ್ವೇದ ಟೂಥ ಪೌಡರ್ ಬಳಸಿ, ಬೆರಳಿನಿಂದ ತಿಕ್ಕಿಕೊಳ್ಳಬೇಕು,ಇದರಿಂದ ವಸಡಿಗಳಿಗೂ ಮಸಾಜ್ ಆಗಿ ಗಟ್ಟಿಯಾಗುತ್ತವೆ ಎಂದು ಹೇಳಿ, ಈ ಬಗ್ಗೆ ಜನತೆಗೆ ಜಾಗ್ರತೆ ಮೂಡಿಸಬೇಕು ಎಂದು ಫ಼ಾರ್ಮಸಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ಔಷಧ ತಜ್ನರ ಸಂಘದ ಅದ್ಯಕ್ಷ ಅಶೋಕಸ್ವಾಮಿ ಹೇರೂರ, ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸರ್ವೇಶ್ ವಸ್ತ್ರದ, ಪ್ರಿನ್ಸಿಪಾಲ್ ಮಂಜುನಾಥ ಹೀರೆಮಠ, ಉಪನ್ಯಾಸಕರಾದ ಆಬೀದ ಹುಸೇನ್, ಜಡಿಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಡಾ.ಶ್ರೀಶೈಲ ಎಮ್.ಬಾದಾಮಿ ಅವರಿಗೆ ಅಶೋಕಸ್ವಾಮಿ ಹೇರೂರ ಔಷಧ ಮತ್ತು ಆಯುರ್ವೇದ ಕಾನೂನು ಪುಸ್ತಕಗಳನ್ನು ನೀಡಿ ಸತ್ಕರಿಸಿದರು.

ಆಹಾರ ಸೇವನೆ ಕ್ರಮ ಬದಲಿಸದಿದ್ದರೆ ಅಪಾಯ.
ನಾವು ಸೇವಿಸುವ
ಎಲ್ಲಾ ಆಹಾರದಲ್ಲಿ ಪ್ರಿಸರ್ವೇಟಿವ್ಸ , ಫ಼್ಲೆವರ್, ಕಲರ್ ಬಳಸುವುದು,
ಕಾಸ್ಮೆಟಿಕ್ಸ್ , ಲಿಪ್ ಸ್ಟಿಕ್, ಫ಼ೆಸ್ಟಿಸೈಡ್ಸ , ಪ್ಲಾಸ್ಟಿಕ್, ಸಕ್ಕರೆ,ಮೈದಾ, ಆರ್.ಓ.ವಾಟರ್ ಉಪಯೋಗಿಸುವುದರಿಂದ ಕ್ಯಾನ್ಸರ್ ಗೆ ಆಹ್ವಾನ ನೀಡಿದಂತಾಗುತ್ತದೆ ಎಂದು ಔಷಧ ಮತ್ತು ಪರಿಸರ್ ತಜ್ಞ ಡಾ.ಶ್ರೀಶೈಲ ಬಾದಾಮಿ ಎಚ್ಚರಿಸಿದರು.