July 12, 2025
IMG-20210922-WA0001

ಫ಼ಾಸ್ಟ ಫ಼ುಡ್ ಸೇವನೆ ಬೇಡ:ಅಶೋಕಸ್ವಾಮಿ ಹೇರೂರ.
ಗಂಗಾವತಿ:ಎರಡು ದಶಕಗಳಿಂದ ಇತ್ತೀಚಿಗೆ ಜನರು ಫ಼ಾಸ್ಟ ಫ಼ುಡ್ ಸೇವನೆ ಹೆಚ್ಚಾಗಿ ಮಾಡುತ್ತಿದ್ದಾರೆ. ಇಂತಹ ಆಹಾರ ಸೇವನೆಯಿಂದ ದೇಹಕ್ಕೆ ಯಾವ ಪ್ರಯೋಜನವೂ ಇಲ್ಲ ಎಂದು ಕೊಪ್ಪಳ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಅಭಿಪ್ರಾಯ ಪಟ್ಟರು.

ಫ಼ಾಸ್ಟ ಫ಼ುಡ್ ತಯಾರಕರು ಒಮ್ಮೆ ತಯಾರಿಸಿದ ಆಹಾರವನ್ನು ಪದೇ ಪದೇ ಬಿಸಿ ಮಾಡಿ ನಮ್ಮ  ಆರ್ಡರ್ ಗೆ ತಕ್ಕಂತೆ ತಯಾರಿಸಿಕೊಡುವುದರಿಂದ ಅದರಲ್ಲಿ ಯಾವ ಪೋಷಕಾಂಶಗಳು ಉಳಿಯುವುದಿಲ್ಲ ಮತ್ತು ರುಚಿಗಾಗಿ ಅಜಿನಮೋಟೊ ಉಪ್ಪನ್ನು ಅವರು ಬಳಸುವುದರಿಂದ ಆರೋಗ್ಯ ಹಾಳಾಗುತ್ತದೆ. ಮೇಲಾಗಿ ಎಸಿಡಿಟಿ ಸಮಸ್ಯೆ ಉ೦ಟಾಗುತ್ತದೆ  ಆದರೆ ಫ಼ಾಸ್ಟ ಫ಼ುಡ್ ಸೇವನೆ ಈಗ ಪ್ರಿಸ್ಟೇಜ್ ವಿಷಯವಾಗಿ ಬಿಟ್ಟಿದೆ ಎಂದರು.

ಇತ್ತೀಚಿಗೆ ಅಮೋಘ ಶೈಕ್ಷಣಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಶುಭ೦ ಎಂಟರ್ಪ್ರೈಸಸ್ ವತಿಯಿಂದ “ಆರೋಗ್ಯ ಸಂಜಿವಿನಿ ಮಲ್ಟಿ ಮಿಲೇಟ್ ಹೆಲ್ತ ಮಿಕ್ಸ” ಉತ್ಪಾಧಕರಿಂದ ಆಯೋಜಿಸಲಾಗಿದ್ದ ಆಹಾರ ಮತ್ತು ಆರೋಗ್ಯ ಮಿಲೇಟ್ಸ್ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಕುಡಿತ,ತಂಬಾಕು ಉತ್ಪನ್ನಗಳ ಸೇವನೆ ಮಾಡುವ ಜನ ಔಷಧ ಖರೀಧಿಸುವಾಗ ಮಾತ್ರ ಔಷಧಗಳ  ಸೈಡ ಎಫ಼ೆಕ್ಟ ಬಗ್ಗೆ ವಿಚಾರಿಸುತ್ತಾರೆ.ತಾವು ಮಾಡುವ ಚಟಗಳಿಂದ ತಮ್ಮ ಆರೋಗ್ಯ ಕೆಡುವ ಬಗ್ಗೆ ಅವರು ಯೋಚಿಸದೆ ಔಷಧಗಳ ಅಡ್ಡ ಪರಿಣಾಮಗಳ ಬಗ್ಗೆ ಹೆಚ್ಚಿನ ಆಸಕ್ತಿವಹಿಸುತ್ತಿರುವುದು ವಿಪರ್ಯಾಸ ಎಂದರು.

ಸಕ್ಕರೆ ರೋಗಿಗಳು ಪಾಲೀಶ್ ಮಾಡಿದ ಅಕ್ಕಿಯಿಂದ ತಯಾರಿಸಿದ ಅನ್ನವನ್ನು ಬಸಿದು (ಗಂಜಿ ರಹಿತ) ಸೇವಿಸಬೇಕು.ಗೋದಿ ಆಹಾರವೂ ಅಪ್ರೋಜಯಕ ಅದಕ್ಕಾಗಿ ಸಕ್ಕರೆ ಕಾಯಿಲೆ ಇರುವವರಿಗೆ ಮಿಲೆಟ್ಸ್ ಆಹಾರ ಸೇವನೆ ಪ್ರಯೋಜನಕಾರಿ.

ಕುಕ್ಕರ್ ನಲ್ಲಿ ತಯಾರಿಸಿದ ಆಹಾರ ಸೇವನೆ ಬೇಡ ಇದರಿಂದ ಎಸಿಡಿಟಿ ಸಮಸ್ಯೆ ಉದ್ಭವಿಸುತ್ತದೆ.
ಮಾರುಕಟ್ಟೆಯಲ್ಲಿ ದೊರೆಯುವ ಅಡಿಗೆ ಎಣ್ಣೆಯನ್ನು ಖರೀಧಿಸುವ ಬದಲು ಗಾಣದಲ್ಲಿ ತಯಾರಿಸಿದ ಎಣ್ಣೆಯನ್ನು ಬಳಸಿ ಎಂದು ಸಮಾರಂಭದಲ್ಲಿ ಭಾಗವಸಿದ್ದ ಮಹಿಳೆಯರಲ್ಲಿ ವಿನಂತಿಸಿದರು.

ಈಗ ಆಹಾರ, ವಾತಾವರಣ ಮಾತ್ರ ಕಳಪೆ ಆಗಿಲ್ಲ , ಮನಸ್ಸುಗಳು ಕಳಪೆಯಾಗಿವೆ.ವ್ಯಕ್ತಿತ್ವವೂ ಕೂಡ ಕಳಪೆ.ಸ್ನೇಹ-ಸಂಭಂದ ಎಲ್ಲವೂ ಕಳಪೆ ಹೀಗಾಗಿ ಮನುಷ್ಯನ ಆರೋಗ್ಯ ತುಂಬಾ ಕೆಡುತ್ತಿದೆ.ಇದರಿಂದ ಮನುಷ್ಯನ ಆಯುಷ ಕಡಿಮೆಯಾಗುತ್ತಿದೆ.

ಈಗ ಜನರಿಗೆ ಬೇಕಾಗಿರುವುದು ಆರೋಗ್ಯಕರ ಮನಸ್ಸು , ಆರೋಗ್ಯಕರ ಆಹಾರ, ಒತ್ತಡ ರಹಿತ ಜೀವನ ಅದರಂತೆ ನಾವು ಬದುಕುವುದು ಅನಿವಾರ್ಯ.

ಮನೆಯ ಕಂಪೌಂಡನಲ್ಲಿ ಬೆಳೆದ ತರಕಾರಿಗಳು, ಸಾವಯವ ಪದ್ದತಿಯಲ್ಲಿ ಬೆಳೆಯುವ ಅಹಾರದ ಉತ್ಪನ್ನಗಳು ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಉಳಿಸಬಲ್ಲವು ಅದಕ್ಕಾಗಿ ನಮ್ಮ ಆಹಾರ ಪದ್ದತಿಯಲ್ಲಿ ಬದಲಾವಣೆ ತಂದುಕೊಳ್ಳುವುದು ಮುಖ್ಯ ಎಂದು ಹೇಳಿದರು.

ತುಂಗಭದ್ರಾ ಕಾಡಾ ಅದ್ಯಕ್ಷ ತಿಪ್ಪೇರುದ್ರಸ್ವಾಮಿ, ಮಾಜಿ ಸಂಸದ ಶಿವರಾಮಗೌಡ,ಉಪನ್ಯಾಸಕರಾದ
ಡಾ.ಶರಣಬಸಪ್ಪ ಕೊಲ್ಕಾರ್,ಸಾಹಿತಿ
ರುದ್ರಮ ಹಾಸಿನಾಳ,ಸಮಾಜ ಸೇವಕಿಎಚ್.ಎಮ್.ಶೈಲಜಾ,
ಗೃಹ ವಿಜ್ನಾನ ತಜ್ಞರಾದ ಡಾ.ಕವಿತಾ ಉಳ್ಳಿಕಾಶಿ, ಸಂಪನ್ಮೂಲ ವ್ಯಕ್ತಿ ಗಿರಿಧರ ಪೂಜಾರಿ,ನೇತ್ರ ತಜ್ಞ ಡಾ.ಹನುಮಂತಪ್ಪ ,ಮೂತ್ರ ರೋಗ ತಜ್ಞ ಡಾ.ನಾಗರಾಜ ಹಿರೆಗೌಡರ್,ನಗರ ಸಭಾ ಸದಸ್ಯೆ ಸುಚೇತಾ ಸಿರಿಗೇರಿ ಮತ್ತು ಅಮೋಘ ಶೈಕ್ಷಣಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅದ್ಯಕ್ಷ ಸುಧಾಕರ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

About The Author

Leave a Reply